ಶನಿವಾರ, ಜೂನ್ 12, 2021
28 °C

ನೀತಿ ಸಂಹಿತೆ ಜಾರಿಯಾದರೂ ಸಚಿವರ ಭರವಸೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಗವಾಡ (ಬೆಳಗಾವಿ ಜಿಲ್ಲೆ): ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಸಮೀಪದ ಜುಗೂಳದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾರಿ ಪ್ರಮಾಣದಲ್ಲಿ ಆಶ್ವಾಸನೆ ನೀಡಿದ ಘಟನೆ ನಡೆಯಿತು.‘ಸದ್ಯ ನೀತಿ ಸಂಹಿತೆ ಜಾರಿ ಇರುತ್ತದೆ, ನಾನೇನೂ ಹೆಚ್ಚು ಹೇಳುವುದಿಲ್ಲ, ಜುಗೂಳದಲ್ಲಿಯೇ ಸಾಂಸ್ಕೃತಿಕ ಭವನ ಅಥವಾ ಸಮುದಾಯ ಭವನಕ್ಕೆ ನನ್ನ ಇಲಾಖೆಯಿಂದ ಒಂದು ಕೋಟಿ ರೂ. ಮಂಜೂರು ಮಾಡುವೆ....’ ಎಂದು ಸಕ್ಕರೆ ಮತ್ತು ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು. ಆಗ ವೇದಿಕೆಯಲ್ಲಿದ್ದ ಮುಖಂಡರು ಕೆಲ ಕ್ಷಣ ಕಕ್ಕಾಬಿಕ್ಕಿಯಾಗಿ ಸಚಿವರತ್ತ ನೋಡತೊಡಗಿದರು.

ಆಗ ಸುಧಾರಿಸಿಕೊಂಡ ಸಚಿವರು, ನಾನೇನೂ ಹೆಚ್ಚಿಗೆ ಭರವಸೆ ನೀಡುವುದಿಲ್ಲ’ ಎಂದು ಸಮಜಾಯಿಷಿ ನೀಡಿ ಮಾತು ಮುಗಿಸಿದರಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.