ಸೋಮವಾರ, ಜೂನ್ 21, 2021
29 °C

ನೀರಿಗೆ 5 ಕೋಟಿ ಬಿಡುಗಡೆ: ಕಟಕಧೋಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಡಚಣ: ಬಹು ಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ನಿವರಗಿ, ಹಾಲಹಳ್ಳಿ, ಶಿರಾಡೋಣ ಹಾಗೂ ರೇವತಗಾಂವ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆಗೆ 5 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿಯ ಟೆಂಡರ್ ಕರೆಯಲಾಗಿದೆ ಎಂದು  ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಶನಿವಾರ  ಸ್ಥಳೀಯ ಉಮದಿ ಕ್ರಾಸ್‌ನಲ್ಲಿ ಕೊಂಕಣಗಾಂವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, 7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಡಚಣ ಭಾಗದ ಎಲ್ಲ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಡಾಂಬರೀಕರಣಕ್ಕೆ ಚಡಚಣ ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳು ಕೂಡಲೇ ಆರಂಭಗೊಳ್ಳಲಿವೆ ಎಂದು ಹೇಳಿದರು.ವಿಜಾಪುರ ಸುತ್ತಲಿನ ನಾಗಠಾಣ ಮತಕ್ಷೇತ್ರದ ಹಳ್ಳಿಗಳಿಗೆ ರಸ್ತೆ ನಿರ್ಮಾಣಕ್ಕೆ 6 ಕೋಟಿ ಹಣ ಮಂಜೂರಾಗಿದೆ. ಹಾಲಳ್ಳಿ, ರೇವತಗಾಂವ, ನಿವರಗಿ, ಹಾವಿನಾಳ ಹಾಗೂ ಶಿರಾಡೋಣ ಗ್ರಾಮಗಳಲ್ಲಿ 16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ,  ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಮುಖಂಡ ಐ.ಎಚ್. ಮಕಾನದಾರ ಮಾತನಾಡಿದರು.ಭೂಮಿಪೂಜಾ ಸಮಾರಂಭದಲ್ಲಿ ಮುಖಂಡರಾದ ಬಾಬುಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ತಾ.ಪಂ. ಸದಸ್ಯರಾದ  ರಾಮ ಅವಟಿ, ಅಶೋಕ ನಡಗಟ್ಟಿ, ಚಂದ್ರಶೇಖರ ನಿರಾಳೆ, ಮಲ್ಲಿಕಾರ್ಜುನ ಸೋರೆಗಾಂವ, ಅಮಸಿದ್ದ ತೇಲಿ, ಆದಮ್ ಗುಳೇಕರ,  ಅಪ್ಪುಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಚಂದಕ್ಕ ಚವ್ಹಾಣ, ಉಪಾಧ್ಯಕ್ಷ ಜಿ.ಡಿ. ಪಾವಲೆ, ಬಿಜೆಪಿ  ಮುಖಂಡರಾದ ಉಮೇಶ ಕೊಂಕಣಗಾಂವ, ಸುರೇಶ ಮೊಗಲಿ, ಎಂ.ಆರ್. ಹಿಟ್ನಳ್ಳಿ, ಸಿದ್ದು ಬಿರಾದಾರ, ಇಲಾಯಿ ನದಾಫ, ಪ್ರಭಾಕರ ನಿರಾಳೆ, ಲಾಲಸಾಬ ಬಡಿಗೇರ, ಕಾಶೀನಾಥ ಖಾನಾಪೂರ, ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಜಿ.ಮುತ್ತೀನ, ಡಾ.ಎಸ್.ಆರ್.ಡೋಣಗಾಂವ, ಡಾ.ಡಿ.ಬಿ. ಕಟಗೇರಿ, ಡಾ.ವಿ.ಎಸ್. ಪತ್ತಾರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಎ.ಪಾಟೀಲ, ಜೆ.ಎಸ್. ನಾರಾಯಣಕರ, ಎಸ್.ಎಂ. ಪಾಟೀಲ, ಎ.ಜಿ. ಗುಜರಿ, ಎ.ಜಿ. ಖಾಜಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.