ಕೊಪ್ಪಳ: ಜಿಲ್ಲೆಯಲ್ಲಿ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಜಿಲ್ಲಾ ಪಂಚಾಯಿತಿ ಎಲ್ಲ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೇ, ಕೊಳವೆ ಬಾವಿಗಳ ತುರ್ತು ದುರಸ್ತಿಗಾಗಿ ಎಲ್ಲ ಸಲಕರಣೆ ಹಾಗೂ ಪರಿಣತಿ ಹೊಂದಿದ ಸಿಬ್ಬಂದಿ ಇರುವ ಎರಡು ವಾಹನಗಳನ್ನು ಸಹ ಸಿದ್ಧಗೊಳಿಸಲಾಗಿದೆ.

ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಆರಂಭಿಸಲಾಗಿರುವ ದೂರು ಸ್ವೀಕೃತಿ ಕೇಂದ್ರಗಳಲ್ಲಿ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿವೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಒಂದು ಸಹಾಯವಾಣಿಯನ್ನು ಸಹ ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ತಿಳಿಸಿದ್ದಾರೆ.

ಮಂಗಳವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಈ ಕೇಂದ್ರಗಳಲ್ಲಿ ಸ್ವೀಕರಿಸಲಾಗುವ ದೂರುಗಳನ್ನು ಅಯಾ ತಾಲ್ಲೂಕುಗಳಲ್ಲಿರುವ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. ಈ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಹೇಳಿದರು.
ಸಾರ್ವಜನಿಕರು ಈ ಸಹಾಯವಾಣಿಗಳಿಗೆ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಹೇಳಿದರು.

ಸುಸಜ್ಜಿತ ವಾಹನ: ಕೊಳವೆ ಬಾವಿಗಳ ದುರಸ್ತಿಗೆ ಬೇಕಾದ ಎಲ್ಲ ಸಲಕರಣೆ, ಬಿಡಿ ಭಾಗಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದ ಹಾಗೂ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ವಾಹನಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯಿಂದ 3.7 ಲಕ್ಷ ಹಾಗೂ 3.16 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಟ್ರಕ್ಗಳನ್ನು ಖರೀದಿ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ವಾಹನಗಳು ಜಿಲ್ಲೆಯಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ವಿವರಿಸಿದರು.

ಕನಕಗಿರಿ ಹಾಗೂ ಅಳವಂಡಿ ಗ್ರಾಮಗಳಲ್ಲಿ ತಲಾ ಒಂದು ವಾಹನವನ್ನು ನಿಯೋಜನೆ ಮಾಡಲಾಗುವುದು. ಕನಕಗಿರಿಯಲ್ಲಿರುವ ವಾಹನ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ ಕೊಳವೆಬಾವಿಗಳ ದುರಸ್ತಿಗೆ ಬಳಕೆಯಾಗಲಿದೆ. ಅದೇ ರೀತಿ ಅಳವಂಡಿಯಲ್ಲಿರಿಸಲಾಗುವ ವಾಹನವನ್ನು ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದೂ ವಿವರಿಸಿದರು.

ದೂರು ಸ್ವೀಕೃತಿ ಕೇಂದ್ರ-ಅಧಿಕಾರಿಗಳ ವಿವರ
ಕೊಪ್ಪಳ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರು ದಾಖಲಿಸಲು ಜಿಲ್ಲಾ ಪಂಚಾಯಿತಿ ಆರಂಭಿಸಿರುವ ದೂರು ಸ್ವೀಕೃತಿ ಕೇಂದ್ರ, ಸಹಾಯವಾಣಿ ಸಂಖ್ಯೆ ಹಾಗೂ ನಿಯೋಜಿತ ಅಧಿಕಾರಿಗಳ ವಿವರ ಹೀಗಿದೆ:

ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಟ್ಟದ ದೂರು ಸ್ವೀಕೃತಿ ಕೇಂದ್ರ: 08539-221207

ಆಯಾ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆಗಳು: ಕೊಪ್ಪಳ- 220399, ಯಲಬುರ್ಗಾ-220136, ಕುಷ್ಟಗಿ- 267028, ಗಂಗಾವತಿ- 230230. ಜಿಲ್ಲಾ ಕೇಂದ್ರದಲ್ಲಿ ಮೇಲುಸ್ತುವಾರಿಗಾಗಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಕೆ.ಬಿ.ಬಸಪ್ಪ ಅವರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸುವ ಸಲುವಾಗಿ ಪಾಳಿಯ ಆಧಾರದಲ್ಲಿ ನಿಯೋಜನೆಗೊಂಡ ನೌಕರರ ವಿವರ ಹೀಗಿದೆ:

ಬಿ.ಬಸವರಾಜ, ಕಲ್ಲಪ್ಪ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಬಿ.ವಿ.ಮಠ ಹಾಗೂ ಶರಣಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಸೋಮವಾರ, ಜಿ.ಎಸ್.ಕುಲಕರ್ಣಿ ಹಾಗೂ ರಮೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮಾತಂಗೆಪ್ಪ ಹಾಗೂ ಭೋಗೇಶ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಮಂಗಳವಾರ, ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಅಶೋಕ ಹಾಗೂ ಮನೋಜ್ಕುಮಾರ್ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಬುಧವಾರ, ಚಂದ್ರಶೇಖರ ಹಾಗೂ ಕೊಟ್ರೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಎಚ್ಚರಪ್ಪ ಹಾಗೂ ದೇವೇಂದ್ರಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಗುರುವಾರ, ಮೊಹ್ಮದ್ ಖಾಜಿ ಹಾಗೂ ವಿನಾಯಕ ಹೊಂಗಲ್ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಜಿ.ಮಂಜುನಾಥ ಹಾಗೂ ವಿ.ವಿ.ಗಾರವಾಡ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶುಕ್ರವಾರ, ಕೆ.ಗಾಳಿನಾಥ ಹಾಗೂ ಪಿ.ಬಿ.ಕಾಳಗೆ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಪ್ರಸನ್ನ ಹಾಗೂ ಚಂದ್ರಶೇಖರ ತಾಳಿಕೋಟೆ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶನಿವಾರ, ಶರಣಪ್ಪ ಜಾಲಗಾರ ಹಾಗೂ ಮೆಹಬೂಬ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮುಕುಂದಕೃಷ್ಣ ಹಾಗೂ ಗಿರಿಗೌಡರ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಭಾನುವಾರ. ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ದೂರು ಸ್ವೀಕೃತಿ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿ: ಕೊಪ್ಪಳ- ಹುಸೇನಸಾಬ ಕಾಯ್ಗಡ್ಡಿ ಹಾಗೂ ಚಂದ್ರಶೇಖರ, ಕುಷ್ಟಗಿ- ಬಸವರಾಜ ಎಂ.ಪಾಟೀಲ ಹಾಗೂ ಹನುಮಪ್ಪ ಅಗಸಿಮುಂದಿನ, ಗಂಗಾವತಿ- ಚಂದ್ರಶೇಖರ ಪಾಟೀಲ ಹಾಗೂ ರಿಯಾಜ್ ಅಹ್ಮದ್, ಯಲಬುರ್ಗಾ- ಈರಣ್ಣ ಹಾಗೂ ಖಾದರ್ಸಾಬ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.