ಹೊನ್ನಳ್ಳಿ (ತಾ.ವಿಜಾಪುರ): ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಮಸ್ಯೆ ಪರಿಹಾರಕ್ಕೆ ಆಡಳಿತ ವ್ಯವಸ್ಥೆಯಿಂದ ಗಂಭೀರ ಪ್ರಯತ್ನ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಹೊನ್ನಳ್ಳಿ ಗ್ರಾಮದಲ್ಲಿ ಸುಮಾರು 10 ಸಾವಿರ ಜನ ವಾಸವಾಗಿದ್ದಾರೆ. ಆರು ಜನ ಗ್ರಾಮ ಪಂಚಾಯಿತಿ ಸದಸ್ಯರು ಈ ಗ್ರಾಮವನ್ನು ಪ್ರತಿನಿಧಿಸುತ್ತಿದ್ದಾರೆ.
`ನಮ್ಮೂರಲ್ಲಿ ಒಂಬತ್ತು ಕೊಳವೆ ಬಾವಿಗಳಿವೆ. ಹಲವು ಕೊಳವೆ ಬಾವಿಗಳಿಂದ ನೀರು ಬರುತ್ತಿಲ್ಲ.

ಇದ್ಯಾವುದನ್ನು ಗಮನಿಸದ ಗ್ರಾಮ ಪಂಚಾಯಿತಿಯವರು ನಮ್ಮೂರಿಗೆ ಮಲತಾಯಿ ಧೋರಣೆ ತಾಳಿದ್ದಾರೆ~ ಎಂದು ಕೆಲವರು ದೂರುತ್ತಿದ್ದಾರೆ.

`ಗ್ರಾಮದ ಹಳ್ಳ ಸಂಪೂರ್ಣ ಬತ್ತಿ ಹೋಗಿದೆ. ಬಾವಿ ಮತ್ತು ಕೊಳವೆ ಬಾವಿಗಳಲ್ಲಿಯೂ ನೀರು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಮತ್ತಷ್ಟು ಆಳಕ್ಕೆ ಕುಸಿದಿದೆ. ಇದರಿಂದ ಈ ಭಾಗದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ~ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಉಕ್ಕಲಿ, ಶಂಕರ ಹುಲ್ಲೂರ, ಬಸವರಾಜ ಇಂಗಳೇಶ್ವರ ಅವರ ವಿವರಣೆ.

ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿಗಾಗಿ ತೊಂದರೆಯಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎಂದು ಗ್ರಾಮದ ಭೀಮರಾಯ ತಳವಾರ, ಫಕ್ಕೀರಪ್ಪ ಲೋಗಾಂವಿ ಒತ್ತಾಯಿಸಿದರು.

`ಇಲ್ಲಿಯ ಬಸ್ ನಿಲ್ದಾಣದ ಎದುರಿನ ಕೊಳವೆ ಬಾವಿಯಿಂದ ಮಾತ್ರ ಕುಡಿಯಲು ನೀರು ಸಿಗುತ್ತಿದ್ದು, ಅದೂ ವಿದ್ಯುತ್ ಇದ್ದಾಗ ಮಾತ್ರ. ಇಲ್ಲದಿದ್ದರೆ ಅಲ್ಲಿಯೂ ಸಹ ನೀರು ಸಿಗುವುದಿಲ್ಲ. ನೀರಿಗಾಗಿ ಹೊಲ ಮನೆ ಕೆಲಸ ಬಿಟ್ಟು ನಿಲ್ಲಬೇಕಾಗಿದೆ~ ಎನ್ನುತ್ತಾರೆ ಗ್ರಾಮದ ರವಿಕುಮಾರ ಮಾಳಿ, ವಿಲಾಸ ಕಟ್ಟಿಮನಿ, ಪರಶುರಾಮ ತಳವಾರ, ಅರುಣ ಹುಲ್ಲೂರ, ಸಿದ್ದಯ್ಯ ಕಲ್ಮಠ ಮತ್ತಿತರರು.

`ಹಲವು ದಿನಗಳ ಹಿಂದೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಇಲ್ಲಿಯ ವರೆಗೆ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ. ಇನ್ನೂ ಒಂದು ವಾರದಲ್ಲಿ ಕುಡಿಯುವ ನೀರು ಒದಗಿಸುವ ವ್ಯವಸ್ಥೆಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ~ ಎಂಬುದು ಗ್ರಾಮದ ಕೆಲ ಯುವಕರ ಎಚ್ಚರಿಕೆ.

ಮಾಹಿತಿಗೆ ಸಂಪರ್ಕಿಸಿ
ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ.

ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.