ಗುರುವಾರ , ಜನವರಿ 23, 2020
23 °C

ನೀರಿನ ಸಮಸ್ಯೆ: ಮುಂಜಾಗ್ರತೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು:  ಮುಂದಿನ ಬೇಸಿಗೆಯಲ್ಲಿ ಪಟ್ಟಣದ ಜನತೆಗೆ  ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮವಾಗಿ ಬರ ಪರಿಹಾರ ನಿಧಿಯಿಂದ ಬಿಡುಗಡೆಯಾಗಿರುವ ರೂ. 10 ಲಕ್ಷವನ್ನು ಸಮರ್ಪಕವಾಗಿ ಖರ್ಚು ಮಾಡಲಾಗುವುದೆಂದು ಪುರಸಭಾ ಉಪಾಧ್ಯಕ್ಷ ಎ.ರಾಜಪ್ಪ ತಿಳಿಸಿದರು.

 

ಇಲ್ಲಿನ ಪುರಸಭಾ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಪೂರೈಕೆ ಕುರಿತ ತುರ್ತು ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿನ 23 ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ ವಾರ್ಡಿನ ಸದಸ್ಯರು ಮತ್ತು ಅಲ್ಲಿನ ಸಿಬ್ಬಂದಿ ನಿಗಾವಹಿಸಿ ಸಾರ್ವಜನಿಕರಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.ಜಿಲ್ಲಾಧಿಕಾರಿಗಳು ಸಿ.ಆರ್.ಎಫ್ ನಿಧಿಯಿಂದ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆ ನೀಗಿಸಲು 10 ಲಕ್ಷ ರೂಪಾಯಿ ಮಂಜೂರು ಮಾಡಿದ್ದು, ಪುರಸಭೆಯ 4 ಟ್ಯಾಂಕರ್‌ಗಳಿಂದ ಖಾಸಗಿಯವರ ಬಳಿ ನೀರು ಖರೀದಿಸಿ ಸಮಸ್ಯೆ ಇರುವ ಪ್ರತಿ ವಾರ್ಡಿಗೂ ಪೂರೈಕೆ ಮಾಡಲಾಗುವುದು. ಪುರಸಭಾ ವ್ಯಾಪ್ತಿಯಲ್ಲಿ ಕೊರೆಯಿಸಲಾಗಿರುವ ಕೆಲವು ಕೊಳವೆ ಬಾವಿಗಳಲ್ಲಿ  ನೀರು ಬತ್ತಿ ಹೋಗಿರುವುದರಿಂದ ಮೋಟಾರು ಗಳನ್ನು ಹೊರತೆಗೆದು ನೂತನವಾಗಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. 11 ನೂತನ ಕೊಳವೆ ಬಾವಿಗಳನ್ನು ಕೊರೆಯಿಸಲು ಹಾಗೂ 7 ಕೊಳವೆ ಬಾವಿಗಳಲ್ಲಿ ಡ್ರಿಲ್ಲಿಂಗ್ ಮಾಡಲು ಅನುದಾನ ಬಿಡುಗಡೆಯಾಗಿದೆ ಎಂದರು.ಪಟ್ಟಣದ 1, 9, 15 ಮತ್ತು 23ನೇ ವಾರ್ಡಿನಲ್ಲಿ ತಲಾ 4.50 ಲಕ್ಷ ರೂ. ವೆಚ್ಚದಲ್ಲಿ ತೊಟ್ಟಿ ಕಾಮಗಾರಿ ಪೂರ್ಣಗೊಂಡಿದ್ದು,  ಶೀಘ್ರವಾಗಿ ಪೈಪ್‌ಲೈನ್ ಅಳವಡಿಸಿ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗು ತ್ತದೆ. ಪಟ್ಟಣದ ದೊಡ್ಡಕೆರೆಯಲ್ಲಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಲೀ ಸಾಮರ್ಥ್ಯವುಳ್ಳ ದೊಡ್ಡಗಾತ್ರದ ತೊಟ್ಟಿ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿ ಸಲಾಗುವುದು.

 

ಜನತೆಯ ಕುಡಿಯುವ ನೀರಿನ ಸರಬರಾಜು ಸಮಸ್ಯೆ ನೀಗಿಸಲು ನೀರು ಪೂರೈಕೆ ಮಾಡುವ 20 ಮಂದಿಗೆ ಉಚಿತವಾಗಿ ಮೊಬೈಲ್ ಫೋನ್ ನೀಡುವ ಮುಖಾಂತರ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಲು ಸಹಕಾರಿಯಾಗು ತ್ತದೆ ಎಂದು ಹೇಳಿದರು.ಪುರಸಭಾ ಅಧ್ಯಕ್ಷೆ ಗುಲಾಬ್ ಜಾನ್, ಮುಖ್ಯಾಧಿಕಾರಿ ರುದ್ರಮುನಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ, ಕಿರಿಯ ಎಂಜಿನಿಯರ್ ವಿಶ್ವನಾಥ್ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.

ಪ್ರತಿಕ್ರಿಯಿಸಿ (+)