ನೀರಿಲ್ಲದೆ ಮೀನುಗಳ ಸಾವು

ರಾಯಚೂರು: ಮಳೆ ಕೊರತೆ, ಕೆರೆಯಲ್ಲಿ ನೀರು ಕಡಿಮೆ ಆಗುತ್ತಿರುವುದರಿಂದ ರಾಯಚೂರು ತಾಲ್ಲೂಕಿನ ಮರ್ಚಡ್ ಗ್ರಾಮದ 410 ಎಕರೆ ವಿಸ್ತೀರ್ಣದ ಬೃಹತ್ ಕೆರೆಯಲ್ಲಿನ ಸಾವಿರಾರು ಮೀನುಗಳು ನಿತ್ಯ ಸಾವನ್ನಪ್ಪುತ್ತಿವೆ.
ನೀರು ಕಡಿಮೆ ಆಗಿರುವುದರಿಂದ ಇರುವ ನೀರೂ ಕೊಳಚೆಯಾಗಿ ದುರ್ವಾಸನೆ ಬೀರುತ್ತಿದೆ. ಕೆರೆ ದಂಡೆಯಲ್ಲಿ ಸತ್ತ ಮೀನುಗಳು ಎಲ್ಲೆಂದರಲ್ಲಿ ಬಿದ್ದಿವೆ. ಕೆರೆಯಿಂದ ಹೊರಗಡೆ ಹೊಲಕ್ಕೆ ನೀರು ಬಿಡುವ ನಾಲಾ ಮೂಲಕ ಹೋಗುವ ನೀರಿನಲ್ಲೂ ಸತ್ತ ಮೀನುಗಳು ಹೋಗುತ್ತಿವೆ. ದೊಡ್ಡ ಗಾತ್ರದ ಮೀನುಗಳು ಸಾವನ್ನಪ್ಪಿವೆ.
ಚಿಕ್ಕ ಮೀನುಗಳೂ ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ. ಕೆರೆಯಲ್ಲಿ ನೀರು ಕಡಿಮೆ ಆಗಿರುವುದರಿಂದ ಬರೀ ಕೊಕ್ಕರೆಗಳೇ ನಡೆದುಕೊಂಡು ಸಾಗುತ್ತಿವೆ. ಅವುಗಳಿಗೆ ಈ ಸತ್ತ ಮೀನುಗಳು, ಸಾಯುತ್ತಿರುವ ಮೀನುಗಳೇ ಆಹಾರವಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.