ಬುಧವಾರ, ಏಪ್ರಿಲ್ 14, 2021
23 °C

ನೀಲಂ ಮಳೆ: ಒಡಿಶಾ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಐಎಎನ್‌ಎಸ್):  ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಕೆಲವು ಭಾಗಗಳಲ್ಲಿ ಬತ್ತದ ಬೆಳೆಗೆ ಹಾನಿಯುಂಟಾಗಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.



ಬಂಗಾಳ ಕೊಲ್ಲಿಯಲ್ಲಿ ಕಂಡುಬಂದ `ನೀಲಂ~ ಚಂಡಮಾರುತಕ್ಕೆ ಒಡಿಶಾದ ಹಲವು ಭಾಗಗಳು ಸಾಕ್ಷಿಯಾಗಿವೆ. ಚಂಡಮಾರುತ ದುರ್ಬಲಗೊಂಡಿದ್ದರೂ ಇಲ್ಲಿನ ಕೆಲ ಪ್ರದೇಶಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ ಎಂದು ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕ ಎಸ್. ಸಿ. ಸಾಹು ಹೇಳಿದ್ದಾರೆ.



ಒಡಿಶಾದಲ್ಲಿ ಅತಿ ಹೆಚ್ಚಿನ ಮಳೆಯ ಪ್ರಮಾಣವು ಬಂದರು ನಗರಿ ಗೋಪಾಲಪುರದಲ್ಲಿ (123 ಮಿ.ಮೀ.) ದಾಖಲಾಗಿದ್ದು, ಪುರಿ ಮತ್ತು ಬೆಹರಾಂಪುರ್‌ದಲ್ಲಿ ಕ್ರಮವಾಗಿ 116.8 ಮತ್ತು 82 ಮಿ.ಮೀ, ಭುವನೇಶ್ವರದಲ್ಲಿ 88 ಮಿ.ಮೀ. ಮಳೆ ದಾಖಲಾಗಿದೆ.



ಕರಾವಳಿಯಲ್ಲಿ ಬತ್ತದ ಬೆಳೆಗೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.