ಒಬ್ಬರಿಗೆ ಭಾರತದ ಮೇಲೆ ಅಭಿಮಾನ ಮತ್ತು ಪ್ರೀತಿ, ಮತ್ತೊಬ್ಬರಿಗೆ ಸಂಗೀತದ ಮೇಲೆ ಒಲವು. ಗತಕಾಲದ ನಂಟು ಈ ಇಬ್ಬರ ಸಂಗಮಕ್ಕೆ ನಾಂದಿಯಾಗಿ, ಬಿಸಿಲ ನಾಡು ಕಲಬುರ್ಗಿಯಲ್ಲಿ ನೀಲ್ಸನ್ ಸಂಗೀತ ಕಂಪೆನಿ ಜನ್ಮ ತಳೆದಿದೆ. ಇಂಥ ಪ್ರಯತ್ನ ಮಾಡಿರುವುದು ಸ್ವೀಡನ್ನ ಟಾಮಿ ನೀಲ್ಸನ್ ಮತ್ತು ಕಲಬುರ್ಗಿಯವರೇ ಆದ ಶಾಂತರಾಜ್ ಜಾನ್.

ಏಷಿಯನ್ ಬಿಸಿನೆಸ್ ಸೆಂಟರ್ನಲ್ಲಿ 2015ರ ಮೇನಲ್ಲಿ ನೀಲ್ಸನ್ ಮ್ಯೂಸಿಕ್ ಆರಂಭವಾಗಿದ್ದು, ಇದುವರೆಗೆ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿವಿಧ ಕಂಪೆನಿ ಮತ್ತು ಸರ್ಕಾರಿ ಉದ್ಯೋಗಿಗಳು ಇಲ್ಲಿ ಗಿಟಾರ್, ಕೀಬೋರ್ಡ್ಗಳಿಂದ ಹೊಮ್ಮುವ ನಾದದಲ್ಲಿ ಮಿಂದೆದ್ದಿದ್ದಾರೆ. ಆರಂಭದಲ್ಲಿ ಆರು ಮಂದಿಯೊಂದಿಗೆ ಆರಂಭವಾದ ನೀಲ್ಸನ್ ಮ್ಯೂಸಿಕ್ನಲ್ಲಿ ಇಂದು 25 ಮಂದಿ ವಿವಿಧ ವಾದ್ಯ ನುಡಿಸುವುದನ್ನು ಕಲಿಯುತ್ತಿದ್ದಾರೆ. ಸಂಸ್ಥೆಯಲ್ಲಿ ಲಂಡನ್ನ ಟ್ರಿನಿಟಿ ಸಂಗೀತ ಕಾಲೇಜಿನ ಪಠ್ಯಕ್ರಮವನ್ನೂ ಅಳವಡಿಸಿಕೊಳ್ಳಲಾಗಿದೆ. 27 ವರ್ಷದ ಶಾಂತರಾಜ್ ಅವರು ಸಂಗೀತ ಸಾಧನ ನುಡಿಸುವುದನ್ನು ಹೇಳಿಕೊಡುತ್ತಾರೆ.

ಶಾಲೆ, ಕಾಲೇಜುಗಳಲ್ಲಿಯೂ ಗಿಟಾರ್, ಕೀಬೋರ್ಡ್ ಮತ್ತು ಡ್ರಮ್ ಬಗ್ಗೆ ತಿಳಿಸುವ ಮೂಲಕ ಮಕ್ಕಳಲ್ಲಿ ಹೊಸ ಹುರುಪು ತುಂಬುವ ಕೆಲಸವನ್ನೂ ಶಾಂತರಾಜ್ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಶಾಲಾ, ಕಾಲೇಜುಗಳಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಟಾಮ್–ಶಾಂತ್ ಸಂಗಮ
ಉದ್ಯಮಿ, ಹವ್ಯಾಸಿ ಪತ್ರಕರ್ತ, ಸಂವಹನಕಾರನಾಗಿ ಕೆಲಸ ಮಾಡುತ್ತಿರುವ ನೀಲ್ಸನ್ ಪತ್ನಿ ಸುಸಾನ್ ಅವರ ತಂದೆ ಉಲ್ಲೆ ಫ್ರೋಬರ್ಗ್, ತಾಯಿ ಸ್ಟೀನಾ ಫ್ರೋಬರ್ಗ್ ದಶಕಗಳ ಹಿಂದೆ ಭಾರತದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ವರ್ಷಗಳ ಕಾಲ ಅವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನೆಲೆಸಿದ್ದರು. ಸುಸಾನ್ ಸೊಲ್ಲಾಪುರದಲ್ಲಿ ಜನಿಸಿದ್ದು, ಇದರಿಂದ ಅವರಲ್ಲಿ ಭಾರತದ ಬಗ್ಗೆ ವಿಶೇಷ ಅಭಿಮಾನ ಇದೆ.

ಉಲ್ಲೆ ಮತ್ತು ಸ್ಟೀನಾ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಹಳ್ಳಿಗಳಲ್ಲಿ ಆರೋಗ್ಯ ಸೌಲಭ್ಯ, ಕುಡಿಯುವ ನೀರಿಗಾಗಿ ಬಾವಿ ಕೊರೆಸುವುದು, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಲಬುರ್ಗಿಯಲ್ಲಿರುವ ಹಿಂದೂಸ್ತಾನಿ ಕವನೆಂಟ್ ಚರ್ಚ್ಗೆ ಭೇಟಿ ನೀಡುತ್ತಿದ್ದರು. ದಶಕಗಳ ನಂತರ ನೀಲ್ಸನ್ ಅವರು 2012ರಲ್ಲಿ ಅತ್ತೆ–ಮಾವ, ಪತ್ನಿ ಮತ್ತು ಮಕ್ಕಳೊಂದಿಗೆ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕವನೆಂಟ್ ಚರ್ಚ್ಗೆ ಭೇಟಿ ನೀಡಿದಾಗ ಶಾಂತರಾಜ್ ಮತ್ತು ನೀಲ್ಸನ್ ಭೇಟಿಯಾಗುತ್ತದೆ.

ಈ ವೇಳೆಗಾಗಲೇ ಶಾಂತರಾಜು ಕಲಬುರ್ಗಿಯಲ್ಲಿ ಬಿ.ಇ. ಮೆಕ್ಯಾನಿಕಲ್ನಲ್ಲಿ ಪದವಿ ಪೂರೈಸಿದ್ದರು. ಬಿಡುವಿನ ಸಮಯ ಕಳೆಯುತ್ತಿದ್ದಾಗ ನೀಲ್ಸನ್ ಭೇಟಿಯಾಗುತ್ತದೆ. ಕೀಬೋರ್ಡ್ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಶಾಂತರಾಜ್ ಅವರನ್ನು ಸ್ವೀಡನ್ಗೆ ಬರುವಂತೆ 35 ವರ್ಷದ ನೀಲ್ಸನ್ ಆಹ್ವಾನಿಸುತ್ತಾರೆ.

ಕವನೆಂಟ್ ಚರ್ಚ್ನ ವಿನಿಮಯ ಯೋಜನೆಯ ಲಾಭ ಪಡೆದ ಶಾಂತರಾಜ್ ಎರಡು ವರ್ಷಗಳ ಹಿಂದೆ ಸ್ವೀಡನ್ಗೆ ತೆರಳುತ್ತಾರೆ. ಸ್ವೀಡನ್ನಿನ ಜಾಂಕೋಪಿಂಗ್ ಎಂಬಲ್ಲಿ ಆರು ತಿಂಗಳು ಗಿಟಾರ್, ಕಿಬೋರ್ಡ್ ಮತ್ತು ಡ್ರಮ್ ತರಬೇತಿ ಪಡೆಯುತ್ತಾರೆ.

ಇಷ್ಟೊತ್ತಿಗಾಗಲೇ ಭಾರತದಲ್ಲಿ ಉದ್ಯಮ ಆರಂಭಿಸಬೇಕು ಎಂದು ಕನಸು ಕಂಡಿದ್ದ ನೀಲ್ಸನ್, ತಮ್ಮ ಮನದ ಇಚ್ಛೆಯನ್ನು ಶಾಂತರಾಜ್ಗೆ ತಿಳಿಸುತ್ತಾರೆ. ಈ ಪ್ರಸ್ತಾವವನ್ನು ಶಾಂತರಾಜ್ ಸ್ವೀಕರಿಸಿ 2015ರ ಮೇನಲ್ಲಿ ನೀಲ್ಸನ್ ಮ್ಯೂಸಿಕ್ ಆರಂಭಿಸುತ್ತಾರೆ.

‘ಉದ್ಯಮ ಆರಂಭಿಸಲು ಭಾರತ ಪ್ರಶಸ್ತ ಸ್ಥಳ. ಅದರಲ್ಲೂ ಕಲಬುರ್ಗಿ ಯಂತಹ ಎರಡನೆ ಹಂತದ ನಗರಗಳು ವ್ಯವಹಾರಕ್ಕೆ ಹೇಳಿ ಮಾಡಿಸಿದ ಸ್ಥಳಗಳು. ಸಂಸ್ಥೆಯ ಬೆಳವಣಿಗೆಗೆ ಇಲ್ಲಿ ಹೇರಳ ಅವಕಾಶವಿದೆ. ಇದೇ ಉದ್ದೇಶದಿಂದ ಕಲಬುರ್ಗಿಯಲ್ಲಿ ಉದ್ಯಮ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಪ್ರತಿಭೆಗಳು ಇದ್ದಾರೆ ಎಂದು ತಿಳಿದಿದೆ. ಪ್ರತಿಭಾ ಶೋಧನಾ ಕೆಲಸವೂ ನಡೆಯುತ್ತಿದೆ. ಜನರಿಗೆ ಹತ್ತಿರವಾಗುವ ಸ್ಥಳದಲ್ಲಿ ಅವರಿಗೆ ಅವಶ್ಯವಿರುವುದನ್ನು ನೀಡುವ ಮೂಲಕ ಅವರ ವಿಶ್ವಾಸ ಗಳಿಸಿದರೆ ಉದ್ಯಮ ಯಶಸ್ವಿಯಾದಂತೆ. ಸದ್ಯ ಆಗಾಗ್ಗೆ ಭಾರತಕ್ಕೆ ಬಂದು ವ್ಯವಹಾರ ನೋಡಿಕೊಳ್ಳುತ್ತಿದ್ದೇನೆ’ ಎಂದು ಸ್ವೀಡನ್ನಿಂದ ದೂರವಾಣಿ ಮೂಲಕ ನೀಲ್ಸನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಸಮಸ್ಯೆಗಳಿಗೆ ಸಂಗೀತ ಮದ್ದು. ಅದರಲ್ಲೂ ವಿವಿಧ ವಾದ್ಯಗಳನ್ನು ನುಡಿಸುವುದರಿಂದ ಅನೇಕ ಲಾಭಗಳಿವೆ. ಯಾವುದೇ ಗೀತೆಗೆ ನಮ್ಮದೇ ರೀತಿಯಲ್ಲಿ ಸಂಗೀತ ನೀಡಬಹುದು. ಗಿಟಾರ್, ಡ್ರಮ್ಸ್ ಮತ್ತು ಕೀಬೋರ್ಡ್ ಇಂದಿನ ಬಹುತೇಕ ಸಿನಿಮಾಗಳಲ್ಲಿ ಬಳಕೆಯಲ್ಲಿದೆ. ಹವ್ಯಾಸ ಮುಂದೊಂದು ದಿನ ವೃತ್ತಿಯಾದರೂ ಆಶ್ಚರ್ಯವಿಲ್ಲ’ ಎನ್ನುತ್ತಾರೆ ಅವರು.

ಸಂಸ್ಥೆಯನ್ನು ಬೆಳೆಸಿ ಅಲ್ಲಿ ಸಾಧ್ಯವಾದಷ್ಟು ಮಂದಿಗೆ ಉದ್ಯೋಗ ನೀಡುವುದು ತಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಅವರು.

ಶಾಂತರಾಜಗೆ ಕೀಬೋರ್ಡ್ ವ್ಯಾಮೋಹ
ಬಾಲ್ಯದಿಂದಲೆ ಶಾಂತರಾಜು ಅವರಿಗೆ ಕೀಬೋರ್ಡ್ ಮೇಲೆ ಎಲ್ಲಿಲ್ಲದ ವ್ಯಾಮೋಹ ಇತ್ತು. ‘ಬಿ.ಇ. ಮುಗಿಸಿದ ಬಹುತೇಕ ಸ್ನೇಹಿತರು ಬೆಂಗಳೂರು, ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಕೆಲಸ ಮಾಡುವ ಮನಸಿರಲಿಲ್ಲ. ಅಂದ ಮಾತ್ರಕ್ಕೆ ಉದ್ಯಮ ಆರಂಭಿಸುವ ಯೋಚನೆಯೂ ಇರಲಿಲ್ಲ.
ಕಲಬುರ್ಗಿಯಲ್ಲಿ ಇದ್ದುಕೊಂಡೆ ಏನಾದರೂ ಮಾಡಬೇಕು ಎಂಬ ಆಸೆ.

ಕೀಬೋರ್ಡ್ ಮೇಲೆ ಅಪಾರ ಪ್ರೀತಿ. ಅದರಲ್ಲೇ ಏನಾದರೂ ಮಾಡಬೇಕು ಎಂದುಕೊಂಡಿದ್ದೆ. ಈ ವೇಳೆಗೆ ನೀಲ್ಸನ್ ಭೇಟಿಯಾಗಿ ಬದುಕೇ ಬದಲಾಗಿದೆ. ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಿನದು ಸಿಕ್ಕಿದೆ. ಬೋಧನೆಯ ಬಗ್ಗೆ ಕಿಂಚಿತ್ತೂ ಒಲವಿಲ್ಲದ ನಾನು ಇಂದು ಮಕ್ಕಳಿಗೆ ಸಂಗೀತದ ಪಾಠ ಹೇಳುವಾಗ ನನಗೇ ಆಶ್ಚರ್ಯವಾಗುತ್ತದೆ’ ಎಂದು ಮುಗುಳ್ನಗುತ್ತಾರೆ ಶಾಂತರಾಜ್.

‘ಸತ್ತಾಗ ವಿವಿಧ ವಾದ್ಯ ನುಡಿಸಿಯೇ ಮೃತದೇಹ ಮೆರವಣಿಗೆ ಮಾಡುತ್ತೇವೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಸಂಗೀತಕ್ಕೆ ಪ್ರಾಮುಖ್ಯ ಇದೆ. ನುಡಿಸುವ ವಾದ್ಯಗಳು ಬೇರೆ ಅಷ್ಟೆ. ಅಂತರಂಗದ ಆಸೆಯನ್ನು ಬೆನ್ನತ್ತಿದರೆ ಸಂತೋಷ ಸಿಗುತ್ತದೆ. ಹವ್ಯಾಸವೇ ವೃತ್ತಿಯಾದರೆ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಬಹುದು. ಸಂಗೀತ ಕ್ಷೇತ್ರದಲ್ಲಿ ಆಸಕ್ತಿಯ ಜೊತೆಗೆ ಬದ್ಧತೆ ಅತ್ಯವಶ್ಯ’ ಎನ್ನುವುದು ಅವರ ಅನುಭವದ ನುಡಿ.

₹ 20 ಲಕ್ಷ ಬಂಡವಾಳ
ಸಂಸ್ಥೆ ಆರಂಭಿಸಲು ಶಾಂತರಾಜ್ ಮತ್ತು ನೀಲ್ಸನ್ ಇಬ್ಬರೂ ಸೇರಿ ₹ 20 ಲಕ್ಷ ಬಂಡವಾಳ ಹೂಡಿದ್ದಾರೆ. ಸದ್ಯ ಒಂದು ತಿಂಗಳಿಗೆ ಒಬ್ಬ ವಿದ್ಯಾರ್ಥಿಗೆ ₹1 ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ವಾರದಲ್ಲಿ ಒಂದು ಗಂಟೆಯ ಎರಡು ತರಗತಿಗಳು ಇರುತ್ತವೆ. ಇದರ ಜೊತೆಗೆ ಯಮಹಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಗಿಟಾರ್, ಕೀಬೋರ್ಡ್ ಮತ್ತು ಡ್ರಮ್ಸ್ ಮಾರಾಟ ಮಾಡಲಾಗುತ್ತಿದೆ. ಶೀಘ್ರದಲ್ಲೇ ಆನ್ಲೈನ್ ಮಾರಾಟ ಆರಂಭಿಸುವ ಚಿಂತನೆ ಅವರಿಗಿದೆ. ಗಿಟಾರ್ ಬೆಲೆ ₹5 ಸಾವಿರ, ಕೀಬೋರ್ಡ್ ₹6 ಸಾವಿರದಿಂದ ಆರಂಭವಾಗುತ್ತವೆ. ಶಾಂತರಾಜ್ ಸಂಪರ್ಕಕ್ಕೆ: ಮೊ. 9845633073. www.nilssons.inಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.