ಸೋಮವಾರ, ಸೆಪ್ಟೆಂಬರ್ 21, 2020
21 °C

ನೂತನ ಅಧ್ಯಕ್ಷ ಬಾನಂದೂರು ಕೆಂಪಯ್ಯ ಮನವಿ;ಅಕಾಡೆಮಿಗೆ 2 ಕೋಟಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ಅಧ್ಯಕ್ಷ ಬಾನಂದೂರು ಕೆಂಪಯ್ಯ ಮನವಿ;ಅಕಾಡೆಮಿಗೆ 2 ಕೋಟಿ ನೀಡಿ

ಹಾವೇರಿ: ಜಾನಪದ ಅಕಾಡೆಮಿಗೆ ನೀಡುವ 45 ಲಕ್ಷ ರೂ. ಅನುದಾನ ವನ್ನು ಕನಿಷ್ಠ 2 ಕೋಟಿ ರೂ.ಗಳಿಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ ತಿಳಿಸಿದರು.ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಹಾಗೂ ಕಲಾವಿದರ ಹರವು ಬಹಳಷ್ಟು ವಿಸ್ತಾರವಾಗಿದೆ. ನಶಿಸುತ್ತಿರುವ ಜಾನ ಪದ ಕಲೆ ಉಳಿಸಿಕೊಳ್ಳಲು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು.ತೀವ್ರ ಅನಾರೋಗ್ಯದಿಂದ ಬಳ ಲುವ, ಅಪಘಾತ, ಇತ್ಯಾದಿ ಸಂಕಟ ಗಳಿಗೆ ಸಿಲುಕಿದಾಗ ಅವರಿಗೆ ಅಕಾಡೆಮಿ ಮಿತಿಯಲ್ಲಿ ನೆರವು ಒದಗಿಸಲು ಜಾನಪದ ಕಲಾವಿದರ ಕ್ಷೇಮನಿಧಿ ಯೋಜನೆಯನ್ನು ಸ್ಥಾಪಿಸಲಾಗಿದೆ. ಈ ನಿಧಿಗೆ ಮೂಲ ಧನವಾಗಿ ರಾಜ್ಯ ಸರ್ಕಾರ 20 ಲಕ್ಷ ರೂ.ಗಳನ್ನು ಮಂಜೂರಿ ಮಾಡಿದೆ.  ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯ ಹಣವನ್ನು ಜನಪದ ಕಲಾವಿದರ ಕ್ಷೇಮಕ್ಕಾಗಿ ಬಳಸಲಾಗು ವುದು ಎಂದು ಹೇಳಿದರು.ಬಡ ಜಾನಪದ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡಲಾಗುತ್ತಿದೆ. ಮಾಸಾಶನ ಪಡೆಯುವ ವಯಸ್ಸನ್ನು 58ರಿಂದ 50ವರ್ಷಕ್ಕೆ ಇಳಿಸಬೇಕು ಹಾಗೂ ದೇವದಾಸಿಯವರನ್ನು ವಿಶೇಷ ವಾಗಿ ಪರಿಗಣಿಸಿ ಅವರ ವಯಸ್ಸನ್ನು 45ಕ್ಕೆ ಇಳಿಸಲು ಸರ್ಕಾರಕ್ಕೆ ಕೇಳಿಕೊಳ್ಳ ಲಾಗುವುದು ಎಂದು ತಿಳಿಸಿದರು. ಕಾರವಾರದಲ್ಲಿ ಮುಂದಿನ ತಿಂಗಳು  ಬುಡಕಟ್ಟು ಉತ್ಸವ ನಡೆಸಲಾಗು ವುದು. ಮಕ್ಕಳಿಗೆ ಕಥೆ ಹೇಳುವುದು, ಹಾಡು ಹೇಳುವುದನ್ನು ಕಲಿಸುವ ಬಗ್ಗೆ ಶಿಕ್ಷಕರಿಗೆ ಕಾರ್ಯಾಗಾರ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಜಾನಪದ ತಜ್ಞ ಪ್ರಶಸ್ತಿಗೆ ಸರ್ಕಾರ ಕೇವಲ 5000 ರೂ. ನಗದು ನೀಡಲಾಗುತ್ತಿದೆ. ಇದರ ಮೊತ್ತವನ್ನು ಕನಿಷ್ಠ 25 ಸಾವಿರ ರೂಪಾಯಿಗಳಿಗೆ ಏರಿಸಬೇಕು. ಜನಪದಶ್ರೀ ಪ್ರಶಸ್ತಿ ಒಬ್ಬರಿಗೆ ನೀಡುವ ಬದಲಿ ಮಹಿಳೆ ಸೇರಿದಂತೆ ಹಾಗೂ  ಮೂವರಿಗೆ ಪ್ರತ್ಯೇಕ ಪ್ರಶಸ್ತಿ ನೀಡು ವಂತಾಗಬೇಕು ಎಂದರು.ಶಿಫಾರಸ್ಸಿಗೆ ಮನ್ನಣೆ ಇಲ್ಲ: ಜಾನ ಪದ ಪ್ರಶಸ್ತಿಯನ್ನು ರಾಜಕಾರಣಿಗಳ ಶಿಫಾರಸ್ಸು ಪತ್ರ ಆಧರಿಸಿ ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಹಾಗೊಂದು ವೇಳೆ ಅಂತಹ ಸಂದರ್ಭ ಬಂದರೆ, ತಮ್ಮ ಸ್ಥಾನದಿಂದ ನಿರ್ಗಮಿ ಸುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ರಾಜಕಾರಣಿ ಗಳ ಶಿಫಾರಸ್ಸಿಗೆ ಮಣೆ ಹಾಕುವುದಿಲ್ಲ ಎಂದು ಕೆಂಪಯ್ಯ ಸ್ಪಷ್ಟಪಡಿಸಿದರು.  ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಶಶಿಕಲಾ ಹುಡೇದ ಹಾಜರಿದ್ದರು.ದಕ್ಷಿಣ ಭಾರತ ಜಾನಪದ ಸಮಾವೇಶ

ಹಾವೇರಿ: ಜಾನಪದ ಅಕಾಡೆಮಿಯಿಂದ ದಕ್ಷಿಣ ಭಾರತ ಜಾನಪದ ಸಮಾವೇಶ, ಯುವಜನ ಜಾನಪದ ಮಹೋತ್ಸವ, ಚರ್ಮವಾದ್ಯ ಕಾರ್ಯಾಗಾರ ಸೇರಿದಂತೆ ಜಾನಪದ ಕಲೆ ಹಾಗೂ ಕಲಾವಿದರ ಏಳಿಗೆಗಾಗಿ ಹತ್ತು ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಚಿಂತನೆಯಿದೆ ಎಂದು  ಎಂದು ಜಾನಪದ ಅಕಾಡೆಮಿ ನೂತನ ಅಧ್ಯಕ್ಷ  ಬಾನಂದೂರು ಕೆಂಪಯ್ಯ ತಿಳಿಸಿದರು.ತಮ್ಮ  ಅಧಿಕಾರಾವಧಿಯಲ್ಲಿ ಹಿಂದಿನ ಅಧ್ಯಕ್ಷರು ರೂಪಿಸಿದ ಯೋಜ ನೆಗಳನ್ನು ಮುಂದುವರೆಸುವುದರ ಜತೆಗೆ ತಾವೂ ಕೂಡಾ ಕೆಲವು ನೂತನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು.

ಜನಪದ ಕಲೆಗಳಲ್ಲಿ ಬಳಕೆಯಾಗುವ ನೂರಾರು ವಿಭಿನ್ನ ವಾದ್ಯಗಳಿವೆ. ಆಧುನೀಕರಣದ ಭರಾಟೆಯಲ್ಲಿ ಮೂಲ ವಾಧ್ಯಗಳಿಗೆ ಧಕ್ಕೆಯಾಗಿದೆ. ಅವುಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜಾನಪದ ವಾದ್ಯಗಳ ಪರಿಚಯ, ಅವುಗಳ ತಯಾರಿಕೆ, ಸಂಪನ್ಮೂಲಗಳ ಅರಿವು ಹಾಗೂ ಚರ್ಮವಾದ್ಯಗಳ ಪ್ರಾತ್ಯಕ್ಷಿಕೆ ನಡೆಸುವ ಉದ್ದೆೀಶ ಇಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.