ಕುಂದಾಪುರ: ಭಾರತದಲ್ಲಿ 1990ರ ದಶಕದಲ್ಲಿ ತರಲಾದ ನೂತನ ಆರ್ಥಿಕ ನೀತಿ ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾವನ್ನು ಬೀರಿದೆ.

ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಸ್ವಲ್ಪ ಮಟ್ಟಿನ ರಾಜಕೀಯ ಶಕ್ತಿ ಪಡೆಯುತ್ತಿದ್ದ ಅಂಚಿನ ಸಮುದಾಯಗಳ ಮೇಲೆ ಈ ಆರ್ಥಿಕ ನೀತಿ ಆಗಾಧ ಪರಿಣಾಮ ಬೀರಿದ್ದರಿಂದ, ಅಭಿವೃದ್ಧಿಯಲ್ಲಿ ಚೇತರಿಕೆ ಕಾಣುತ್ತಿದ್ದ ಈ ಸಮುದಾಯಗಳು ಮತ್ತೆ ಹಿನ್ನಡೆ ಕಾಣುವಂತಾಗಿದೆ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಪ್ರೊ. ವಲೇರಿಯನ್ ರಾಡ್ರಿಗಸ್ ಹೇಳಿದರು.

ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಅಧ್ಯಾಪಕರ ಸಂಘದ ಸಹಭಾಗಿತ್ವ ದೊಂದಿಗೆ ನಡೆದ `ಲಿಬ್ರಲೈಸ್ಡ್ ಇಂಡಿಯಾ : ಪೊಲಿಟಿಕ್ಸ್, ಸೊಸೈಟಿ ಎಂಡ್ ಇಕಾನಮಿ' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಜಾಗತೀಕರಣ ಹಾಗೂ ಇದಕ್ಕೆ ಪೂರಕವಾಗುತ್ತಿರುವ ಖಾಸಗೀಕರಣದಿಂದ ಸಾರ್ವಜನಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳು ಕ್ಷೀಣಿಸುತ್ತಿದೆ. ಈ ರೀತಿಯ ಬದಲಾವಣೆ ಯಿಂದ ಸಮಾಜದ ಅಂಚಿನ ಸಮುದಾ ಯಗಳು ಉದ್ಯೋಗ ಹಾಗೂ ಬದುಕಿನ ಹಕ್ಕಿಗಾಗಿ ಮೇಲ್ವರ್ಗದ ಸಮುದಾ ಯಗಳೊಂದಿಗೆ ಪೈಪೋಟಿಗೆ ಇಳಿಯು ವಂತಾಗಿದೆ ಎಂದು ವಿಶ್ಲೇಷಣೆ ಮಾಡಿದ ಅವರು, ಈ ನೀತಿಯ ಅನುಷ್ಠಾನ ದಿಂದಾಗಿ ಆರೋಗ್ಯ ಹಾಗೂ ಶಿಕ್ಷಣ ದಂತಹ ಮೂಲಭೂತ ಕ್ಷೇತ್ರಗಳಲ್ಲಿಯೂ ಹೋರಾಟ ಮಾಡ ಬೇಕಾದ ಅನಿವಾರ್ಯತೆ ತಲೆದೋರಿದೆ ಎಂದು ಅವರು ಹೇಳಿದರು.

ವಿಚಾರ ಸಂಕಿರಣದ ಸಂಯೋಜಕ ಡಾ.ಎಂ.ದಿನೇಶ್ ಹೆಗ್ಡೆ ರಚಿಸಿ, ದೆಹಲಿಯ ಜವಾಹರಲಾಲ್ ಪಬ್ಲಿಷರ್ಸ್ ಪ್ರಕಟಿಸಿದ `ಬ್ಯಾಕ್ವರ್ಡ್ ಕ್ಲಾಸ್ ಮೂವ್ಮೆಂಟ್ ಇನ್ ಇಂಡಿಯಾ' ಗ್ರಂಥವನ್ನು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ.ಎಂ. ಚಂದ್ರಪ್ರಭಾ ಆರ್.ಹೆಗ್ಡೆ ಸ್ವಾಗತಿಸಿದರು. ಉಪನ್ಯಾಸಕ ರಾಧಾ ಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಹೆಚ್.ಜಗದೀಶ್ ವಂದಿಸಿದರು. ಕಾಲೇ ಜಿನ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.