ನವರಾತ್ರಿಯ ಪ್ರಯುಕ್ತ ನಗರದ ವಿವಿಧ ಮಠ-ಮಂದಿರಗಳಲ್ಲಿ ನಿತ್ಯ ಸಂಜೆ ನಡೆದ ವಿಶೇಷ ಅಲಂಕಾರ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳುಮನೋಹರವಾಗಿದ್ದವು.

ಯಶವಂತಪುರದ ಗಾಯಿತ್ರಿ ಮಹಾಯಾಗ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರು ಶುಭಾ ಧನಂಜಯ ಅವರ ನಾಟ್ಯಾಂತರಂಗದ ವಿದ್ಯಾರ್ಥಿಗಳು ದೇವಿಗೆ ನೃತ್ಯ ನಮನ ಸಲ್ಲಿಸಿದರು.

ಧ್ವನಿಮುದ್ರಿತ ಸಂಗೀತದ ಸಹಚರ್ಯದಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ನಟೇಶ ಕೌತುವಂ, ಆನಂದನರ್ತನ, ಯಾರೇರಂಗನ, ಗೋವರ್ಧನಗಿರೀಶಂ (ಹಿಂದೋಳ), ಕಂಜದಳಾಯತಾಕ್ಷಿ (ಕಮಲಾಮನೋಹರಿ) ಮುಂತಾದವುಗಳನ್ನು ಮುದ್ರಾ, ಮಾಯಾ, ಮೇಘನಾ ಭೇಷ್ ಎನ್ನುವಂತೆ ಪ್ರದರ್ಶಿಸಿದರು.

ಶಂಕರಪುರದ ಶಂಕರಮಠದಲ್ಲಿ ಲಯ ಪ್ರವೀಣ ಗಾಯಕ ಸಿ.ವರದರಾಜ್ಅವರು ತಮ್ಮ ಲಯ ಪ್ರಧಾನ ಕಛೇರಿಯಲ್ಲಿ ವಾತಾಪಿ ಗಣಪತಿಂ ಭಜೆ ಮುಂತಾದ ಕೀರ್ತನೆಗಳನ್ನು ಹಾಡಿದರು.

ಗುರು ನರ್ಮದಾ ಸ್ಮರಣೆ
ಬಹು ಜನಪ್ರಿಯ ಹಾಗೂ ಸಂಪ್ರದಾಯನಿಷ್ಠ ವಾತ್ಸಲ್ಯಮಯಿ ನೃತ್ಯ ಗುರುಗಳಾಗಿದ್ದ ನರ್ಮದಾ ಅವರ ನೆನಪಿನಲ್ಲಿ ಅವರ ಜನ್ಮದಿನದಂದು ಅವರ ಆತ್ಮೀಯ ಶಿಷ್ಯ ಮತ್ತು ಖ್ಯಾತ ನೃತ್ಯಪಟು ಸತ್ಯನಾರಾಯಣರಾಜು ಅವರು `ಸಂಸ್ಕೃತಿ ಸಂಸ್ಥೆ~ ಆಶ್ರಯದಲ್ಲಿ ಚಿಕ್ಕ ಹಾಗೂ ಚೊಕ್ಕವಾಗಿದ್ದ ಕಾರ್ಯಕ್ರಮ ಏರ್ಪಡಿಸಿದ್ದರು.

ನರ್ಮದಾ ಅವರೇ ನಟುವಾಂಗ ಮಾಡಿ ಸಂಯೋಜಿಸಿದ್ದ ಕೆಲವು ನೃತ್ಯ ಬಂಧಗಳನ್ನು ಅವರದೇ ಧ್ವನಿಮುದ್ರಿತ ಸಂಗೀತದ ಸಹಕಾರದೊಂದಿಗೆ ಅವರ ಹಿರಿಯ ಶಿಷ್ಯೆಯರಾದ ಪೂರ್ಣಿಮಾ ಗುರುರಾಜ್ ಮತ್ತು ಅನುಪಮಾ ಹೊಸಕೆರೆ ಅವರುಗಳು ಪ್ರದರ್ಶಿಸಿ ಒಂದು ದೊಡ್ಡ ನೃತ್ಯ ಚೇತನದ ವಿಶಿಷ್ಟತೆಯನ್ನು ಮತ್ತೊಮ್ಮೆ ವಿಶದಪಡಿಸಿದರು.

ಅನುಪಮ ಅವರು ಜಯಜಾನಕೀ ರಮಣ ಮತ್ತು ಪೂರ್ಣಿಮಾ ಅವರು ಜನನೀ ನಿನುವಿನಾ (ರೀತಿಗೌಳ) ಕೀರ್ತನೆಯನ್ನು ಪ್ರೌಢವಾಗಿ ಪ್ರಸ್ತುತಪಡಿಸಿದರು.

ಅವರಿಬ್ಬರೂ ಕೂಡಿ ಮಂಡಿಸಿದ ಅರುಣಾಚಲ ಕವಿಯ ಕೃತಿ (ಪಳ್ಳಿಕೊಂಡಿರಯ್ಯ)ಯಲ್ಲಿ ಅವರ ನೃತ್ತ, ನೃತ್ಯ ಮತ್ತು ಅಭಿನಯಗಳು ಘನವಾಗಿದ್ದು ಗುರು ನರ್ಮದಾ ಅವರ ಹಿರಿಮೆಯನ್ನು ಎತ್ತಿತೋರುವಂತಿದ್ದವು.

ನರ್ಮದಾ ಅವರ ಶಿಷ್ಯ ವಾತ್ಸಲ್ಯ ಮತ್ತು ವಿಶಿಷ್ಟ ವ್ಯಕ್ತಿತ್ವದ ಬಗೆಗೆ ನುಡಿ ನಮನ ಸಲ್ಲಿಸಲಾಯಿತು. ರಾಜು ಅವರ ಶಿಷ್ಯರಾದ ಶಿಶಿರ್, ಅಂಜು ನಾಯರ್, ನಿಖಿತ, ಅದಿತಿ ಮತ್ತು ಪೃಥ್ವಿ ಅವರು ಆನಂದ ನರ್ತನ ಮತ್ತು ನರ್ಮದಾ ಪ್ರಚುರಪಡಿಸಿದ್ದ ಶ್ರೀಕಷ್ಣ ಕಮಲಾನಾಥೋ (ರಾಗಮಾಲಿಕೆ) ವರ್ಣದ ಕೆಲವು ನೃತ್ತ ಭಾಗಗಳನ್ನು ಸೊಗಸಾಗಿ ನಿರೂಪಿಸಿ ಮನಗೆದ್ದರು.

ವಿಭಿನ್ನ ವೀಣಾವಾದನ
ಕರ್ನಾಟಕ ಗಾನಕಲಾ ಪರಿಷತ್ತಿನ 42ನೆಯ ಸಂಗೀತ ಸಮ್ಮೇಳನದಲ್ಲಿ ಹಿರಿಯ ವೈಣಿಕ ಮೈಸೂರಿನ ಪ್ರೊ. ಆರ್. ವಿಶ್ವೇಶ್ವರನ್ ವಿಶೇಷ ಲಕ್ಷಣ, ಘನತೆಯಿಂದ ಕೂಡಿದ ಮಹತ್ವದ ವೀಣಾ ಕಛೇರಿಯನ್ನು ಸಾದರಪಡಿಸಿದರು.

ತಮ್ಮ ಸವಿಶೇಷವಾದನ ವೈಖರಿಯ ಜೊತೆಗೆ ಗಾಯನ, ರಾಗ ಮತ್ತು ಕೃತಿಗಳ ಸತ್ವಪೂರ್ಣ ಆಯ್ಕೆ, ಉಪಯುಕ್ತ ಟಿಪ್ಪಣಿಗಳು ಮತ್ತು ವರ್ಣನೆಗಳೊಂದಿಗೆ ತಮ್ಮ ಕಛೇರಿಯನ್ನು ಭಿನ್ನವಾಗಿಸಿದರು.

ಒಂದೇ ಮೀಟ್ಟಿನಲ್ಲಿ ಸುದೀರ್ಘ ಸಂಗತಿಗಳನ್ನು ಮೂಡಿಸಿದ ಗಾಯನ ಶೈಲಿಯ ವಾದನ ಗಮನಾರ್ಹ ವಾಗಿತ್ತು. ವೀಣೆಯ ತಂತಿ ಮುರಿದು ಹೋದರೂ ಅವರು ತಮ್ಮ ಕಛೇರಿಯನ್ನು ಮುನ್ನಡೆಸಿದ ಪರಿ ಗಣನೀಯ.

ದೇವಕ್ರಿಯರಾಗದ ಎರಡು ಸ್ವರೂಪಗಳನ್ನು ಅವರು ಕೇಳಿಸಿದರು. ದೀಕ್ಷಿತರ ದೇವಕ್ರಿಯೆಯು (ಶಂಕರಾಭರಣ ಜನ್ಯದಂತೆ) ಅವರ `ಶ್ರೀಸರಸ್ವತಿ ವಿಧಿಯುವತಿ~ ಕೀರ್ತನೆಯ ಮೂಲಕ ಹಾಗೂ ತ್ಯಾಗರಾಜರ ದೇವಕ್ರಿಯೆಯು (ಖರಹರಪ್ರಿಯ ಜನ್ಯ) `ನಾಟಿಮಾಟ ಮರಚಿತಿವೇಮೋ~ ರಚನೆಯ ಮೂಲಕ ಸ್ಪಷ್ಟಗೊಂಡಿತು.

ಅಪಾರ ವಿದ್ವತ್ತು ಮತ್ತು ಅನುಭವಗಳ ಗಣಿಯಾಗಿರುವ ವಿಶ್ವೇಶ್ವರನ್ ಅವರು ತಮ್ಮ ಸೃಷ್ಟಿಯಾದ ಸ್ಮೃತಿ (ಕೀರವಾಣಿ ಜನ್ಯ) ರಾಗದಲ್ಲಿ `ಸ್ಮೃತ್ಯೈ ನಮಸ್ತೆ~ ರಚನೆಯನ್ನು ವಿದ್ವತ್ಪೂರ್ಣವಾಗಿ ನಿರೂಪಿಸಿದರು.

`ವಿಳಂಬಕಾಲದ ಅನನ್ಯ ಸೊಬಗನ್ನು ದೀಕ್ಷಿತರ `ಹರಿಯುವತೀಂ ಹೇಮವತೀಂ~ (ಸಿಂಹರವ/ಹೇಮವತಿ, ತ್ರಿಶ್ರ ಏಕತಾಳ) ಕೃತಿಯ ಮೂಲಕ ಸೆರೆಹಿಡಿದರು. ಕಾಂಭೋಜಿಯ (ಸ್ವಂತ ರಚನೆ: ಶಿವೆ ಶ್ರೀತ್ರಿಪುರಸುಂದರಿ ಪಾಹಿಮಾಂ, ಅತೀತಗ್ರಹ ಎಡುಪಿನಲ್ಲಿ) ರಸಪಾಕವನ್ನು ರಸಿಕರಿಗೆ ಉಣಿಸಿದರು.

ಸಿ.ಚೆಲುವರಾಜು (ಮೃದಂಗ), ಎಂ.ಎ.ಕಷ್ಣಮೂರ್ತಿ (ಘಟ) ಅವರ ಪ್ರೌಢ ಕೊಡುಗೆ ಕಛೇರಿಯನ್ನು ಮತ್ತಷ್ಟು ಅಂದಗಾಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.