ನವದೆಹಲಿ (ಪಿಟಿಐ): ಆಗಸ್ಟ್ 22ರಂದು ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನೆಹರೂ ಕಪ್ ಫುಟ್ಬಾಲ್ ಟೂರ್ನಿಗೆ ಭಾರತ ತಂಡದ 27 ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು, ಫಾರ್ವರ್ಡ್ ಆಟಗಾರ ಸುನಿಲ್ ಚೆಟ್ರಿ ಅವರಿಗೆ ಸ್ಥಾನ ನೀಡಲಾಗಿದೆ.

ಭಾರತ ತಂಡದ ಆಟಗಾರರು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ, ಚೆಟ್ರಿ ಸರಿಯಾದ ಸಮಯಕ್ಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದ ಕಾರಣ ತಂಡದಿಂದ ಕೈ ಬಿಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು.

ಆದರೆ, ಆಗಸ್ಟ್ 12ರಂದು ತರಬೇತಿ ಶಿಬಿರ ಸೇರಿಕೊಳ್ಳುವುದಾಗಿ ಚೆಟ್ರಿ ಅಖಿಲ ಭಾರತ ಫುಟ್ಬಾಲ್ ಫೆಡೆರೇಷನ್ಗೆ (ಎಐಎಫ್ಎಫ್) ಲಿಖಿತ ಭರವಸೆ ನೀಡಿದ ನಂತರವಷ್ಟೇ ಅವರಿಗೆ ಸ್ಥಾನ ನೀಡಲಾಗಿದೆ.
ಹ್ಯಾಟ್ರಿಕ್ ಕನಸಲ್ಲಿ: 2007 ಹಾಗೂ 2009ರಲ್ಲಿ ನೆಹರೂ ಕಪ್ ಚಾಂಪಿಯನ್ ಆಗಿದ್ದ ಭಾರತ ಈಗ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.