ಅಬುಜಾ: ನೈಜೀರಿಯಾದ ಡೆಲ್ಟಾ ಸ್ಟೀಲ್ ಕಂಪೆನಿಯ 117 ಭಾರತೀಯ ಕಾರ್ಮಿಕರಿಗೆ ಕಳೆದ 11 ತಿಂಗಳಿನಿಂದ ವೇತನ ಪಾವತಿಯಾಗದೆ ಕಷ್ಟಕರ ಬದುಕು ಸಾಗಿಸುವಂತಾಗಿದೆ ಎಂದು ಆರೋಪಿಸಲಾಗಿದೆ.

ಅಬುಜಾದಲ್ಲಿರುವ ಇಂಡಿಯನ್ ಹೈ ಕಮಿಷನ್, ಭಾರತದಲ್ಲಿರುವ ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತಿತರ ಸಂಬಂಧಿಸಿದ ಸಂಸ್ಥೆಗಳಿಗೆ ಕಂಪೆನಿಯ ನೌಕರರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ನೈಜೀರಿಯಾದ ಡೆಲ್ಟಾ ಸ್ಟೀಲ್ ಕಂಪೆನಿ, ಎಲ್.ಎನ್. ಮಿಟ್ಟಲ್ ಅವರ ಸೋದರ ಪ್ರಮೋದ್ ಕೆ. ಮಿಟ್ಟಲ್ ಅವರ ಗ್ಲೋಬಲ್ ಸ್ಟೀಲ್ ಹೋಲ್ಡಿಂಗ್ಸ್ ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟಿದೆ. ಭಾರತದಿಂದ ಗ್ಲೋಬಲ್ ಸ್ಟೀಲ್ ಹೋಲ್ಡಿಂಗ್ ಕಂಪೆನಿಯಿಂದ ನೇಮಕ ಮಾಡಿಕೊಳ್ಳಲಾದ ಈ ನೌಕರರು ನೈಜೀರಿಯಾದ ದಕ್ಷಿಣ ರಾಜ್ಯ ವಾರಿಯಲ್ಲಿ 2005ರಿಂದ ದುಡಿಯುತ್ತಿದ್ದಾರೆ.

11 ತಿಂಗಳಿಂದ ವೇತನ ಇಲ್ಲದ ಜೊತೆಗೆ ವಿದೇಶಿ ನೆಲದಲ್ಲಿ ಸರಿಯಾದ ಆಹಾರ, ನೀರು, ವಿದ್ಯುತ್ ಇಲ್ಲದೆ ಕ್ಲಿಷ್ಟಕರ ಪರಿಸ್ಥಿತಿಯನ್ನು ಭಾರತೀಯ ನೌಕರರು ಎದುರಿಸುತ್ತಿದ್ದಾರೆ ಎಂದು ತೊಂದರೆಗೊಳಗಾದ ನೌಕರರ ಪರವಾಗಿ ನಕ್ಕಾ ನೆಹರೂ ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.