ಬುಧವಾರ, ಜನವರಿ 29, 2020
29 °C

ನೈಜೀರಿಯಾ: ಕನೊಗೆ ಅಧ್ಯಕ್ಷರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಜಾ (ಪಿಟಿಐ): ಒಬ್ಬ ಭಾರತೀಯ ಸೇರಿದಂತೆ 180 ಜನರ ಸಾವಿಗೆ ಕಾರಣವಾದ ಭಯೋತ್ಪಾದನಾ ದಾಳಿ ನಡೆದ ನೈಜೀರಿಯಾದ ಕನೊ ನಗರಕ್ಕೆ ರಾಷ್ಟ್ರದ ಅಧ್ಯಕ್ಷ ಗುಡ್‌ಲಕ್ ಜೊನಾಥನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಇಂತಹ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದಾಗಿಯೂ  ಘೋಷಿಸಿದರು.ಏತನ್ಮಧ್ಯೆ, ನೈಜೀರಿಯಾದ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕಾರಣಿಗಳು ಕನೊ ನಗರದಲ್ಲಿನ ಮಸೀದಿಯೊಂದರಲ್ಲಿ ಸೋಮವಾರ ಸೇರಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)