ಶುಕ್ರವಾರ, ಮೇ 14, 2021
32 °C

ನೈಜೀರಿಯಾ: ಸ್ಫೋಟ 50 ಜನರ ಸಾವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಜಾ (ಪಿಟಿಐ): ನೈಜೀರಿಯಾದ ಉತ್ತರ ಭಾಗದಲ್ಲಿರುವ ಕಡುನಾ ನಗರದ ಚರ್ಚ್‌ವೊಂದರ ಬಳಿ ನಿಲ್ಲಿಸಿದ್ದ ಎರಡು ಕಾರುಗಳಲ್ಲಿ ಭಾನುವಾರ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 50 ಜನರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ 20 ಶವಗಳು ಘಟನಾ ಸ್ಥಳದಲ್ಲಿ ಪತ್ತೆ ಆಗಿವೆ.ಈಸ್ಟರ್ ಹಬ್ಬದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚರ್ಚ್‌ನಲ್ಲಿ ಸೇರಿದ್ದರು. ಆಗ ಈ ದುಷ್ಕೃತ್ಯ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ತುರ್ತು ಸೇವಾ ಸಿಬ್ಬಂದಿ ತಿಳಿಸಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿಯಂತೂ ಗಂಭೀರವಾಗಿದೆ. ಈ ಸ್ಫೋಟದಿಂದ ಚರ್ಚ್ ಕಟ್ಟಡದ ಕೆಲವು ಭಾಗಗಳಿಗೂ ಹಾನಿಯಾಗಿದೆ. ಭಾರಿ ಸ್ಫೋಟದ ಕಾರಣ ಕಡುನಾ ನಗರದ ಹಲವೆಡೆ ಕಂಪನದ ಅನುಭವೂ ಆಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.