ಶನಿವಾರ, ಜನವರಿ 18, 2020
26 °C

ನೈಜ ಪರಿಶಿಷ್ಟರಿಗೆ ಸೌಲಭ್ಯ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಪರಿಶಿಷ್ಟರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೈಜ ಪರಿಶಿಷ್ಟರಲ್ಲದವರಿಗೆ ನೀಡದಂತೆ ಭಟ್ಕಳ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಜಾಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಲ್ಲಾಸ ನಾಯ್ಕರಿಗೆ ಮನವಿ ಸಲ್ಲಿಸಿದರು.ಜಾಲಿ ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟರಿಗೆ ಕಾಯ್ದಿರಿಸಿದ ಅನುದಾನ­ದಿಂದ ಮತ್ತು ಸರ್ಕಾರದಿಂದ ಬಂದ ಸವಲತ್ತುಗಳನ್ನು ನೈಜ ಪರಿಶಿಷ್ಟರಿಗೆ ನೀಡದೇ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಈ ಸೌಲಭ್ಯಗಳು ನೈಜ ಪರಿಶಿಷ್ಟರಿಗೆ ನೀಡು­ವಂತೆ ಮಾಡುವುದು ಅಧಿಕಾರಿಗಳ ಜವಾ­ಬ್ದಾರಿ­ಯಾಗಿದೆ ಎಂದು ಆಗ್ರಹಿಸಿದರು.ಕಳೆದ ಹಲವು ವರ್ಷಗಳಿಂದ ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೇ,  ಕರ್ತವ್ಯಲೋಪ ಎಸಗಿ ನೈಜ ಪರಿಶಿಷ್ಟರಿಗೆ ನೀಡಬೇಕಾದ ಸವ­ಲತ್ತುಗಳನ್ನು ಪರಿಶಿಷ್ಟರಲ್ಲದವರಿಗೆ ನೀಡು­ತ್ತಿದ್ದಾರೆ ಎಂದು ಆರೋಪಿಸಿದರು.ಮೂಲತಃ ಮೀನುಗಾರಿಕೆ ವೃತ್ತಿ ಮಾಡುವ ಮೊಗೇರ ಜನಾಂಗದವರು ಪರಿಶಿಷ್ಟ ಜಾತಿಗೆ ಸೇರಿದವ­ರಲ್ಲವೆಂದು ಹೈಕೋರ್ಟ್‌ ಆದೇಶ ನೀಡಿದೆ.  ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪರಿಶಿಷ್ಟ­ರಲ್ಲದ ಮೊಗೇರ ಸಮಾಜದವರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಬೇಕು ಹಾಗೂ ಅವರಿಗೆ ಈವರೆಗೆ ನೀಡಿರುವ ಸೌಲಭ್ಯ­ಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ದ.ಸಂ.ಸ ಮಿತಿಯ ಪ್ರಮುಖ ನಾರಾಯಣ ಶಿರೂರ್‌, ಕಿರಣ ಶಿರೂರ್‌, ಮಹೇಶ ಪಾಲನಕರ್‌, ಭಾಸ್ಕರ ಚಂದಾವರಕರ್, ಅನಿತಾ ಪಾಲೇಕರ್‌, ಲಲಿತಾ ಪಾವಸ್ಕರ್, ಶ್ರೀಧರ ಹಳ್ಳೇರ್‌,ಗಣೇಶ ಹಳ್ಳೇರ್‌, ದೇವೇಂದ್ರ ಬಾಕಡ ಇತರರಿದ್ದರು.

ಪ್ರತಿಕ್ರಿಯಿಸಿ (+)