ಸೋಮವಾರ, ಜನವರಿ 20, 2020
24 °C

ನೈಟ್ ರೈಡರ್ಸ್ ನೂತನ ಕೋಚ್ ಟ್ರೆವರ್ ಬೇಲಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಸ್ಟ್ರೇಲಿಯ ಟ್ರೆವರ್ ಬೇಲಿಸ್ ಐಪಿಎಲ್ ತಂಡ ಕೋಲ್ಕತ್ತ ನೈಟ್ ರೈಡರ್ಸ್‌ನ (ಕೆಕೆಆರ್) ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಡೇವ್ ವಾಟ್ಮೋರ್ ರಾಜೀನಾಮೆಯಿಂದಾಗಿ ತೆರವಾದ ಸ್ಥಾನಕ್ಕೆ ಬೇಲಿಸ್ ಆಯ್ಕೆ ನಡೆದಿದೆ.ಬೇಲಿಸ್ ನಾಲ್ಕು ವರ್ಷಗಳ ಕಾಲ ಶ್ರೀಲಂಕಾ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಲಂಕಾ ತಂಡ ಟ್ವೆಂಟಿ-20 ವಿಶ್ವಕಪ್ (2009) ಮತ್ತು ಐಸಿಸಿ ಏಕದಿನ ವಿಶ್ವಕಪ್ (2011) ಟೂರ್ನಿಗಳ ಫೈನಲ್ ಪ್ರವೇಶಿಸಿತ್ತು.`ಬೇಲಿಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿರುವುದು ಸಂತಸದ ವಿಷಯ. ಅಪಾರ ಅನುಭವ ಹೊಂದಿರುವ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಉಪಭೂಖಂಡದ ಪರಿಸ್ಥಿತಿಯ ಜ್ಞಾನವನ್ನು ಹೊಂದಿದ್ದಾರೆ. ಇದರಿಂದ ಕೋಚ್ ಹುದ್ದೆಗೆ ಅವರು ಸೂಕ್ತ ವ್ಯಕ್ತಿ~ ಎಂದು ಕೆಕೆಆರ್ ಒಡೆಯ ಶಾರೂಖ್ ಖಾನ್ ತಿಳಿಸಿದ್ದಾರೆ.ಪಾಕಿಸ್ತಾನ ರಾಷ್ಟ್ರೀಯ ತಂಡದ ಕೋಚ್ ಆಗುವ ಉದ್ದೇಶದಿಂದ ವಾಟ್ಮೋರ್ ಕೆಲ ದಿನಗಳ ಹಿಂದೆ ನೈಟ್ ರೈಡರ್ಸ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು.

ಪ್ರತಿಕ್ರಿಯಿಸಿ (+)