ಬುಧವಾರ, ಜೂನ್ 16, 2021
23 °C

ನೌಕಾಪಡೆಗೆ ‘ಸುಮೇಧಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಹೊಸ ಮಾದರಿಯ, ಸಂಪೂರ್ಣ ಸ್ವದೇಶಿ ನಿರ್ಮಿತ ಕಡಲು ಗಸ್ತು ನೌಕೆ ‘ಐಎನ್‌ಎಸ್‌ ಸುಮೇಧಾ’ ಶುಕ್ರವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.



ಈ ನೌಕೆಯ ವಿನ್ಯಾಸ ಹಾಗೂ ನಿರ್ಮಾ­ಣವನ್ನು ಗೋವಾ ಶಿಪ್‌­ಯಾರ್ಡ್ ಲಿಮಿಟೆಡ್‌ (ಜಿಎಸ್‌ಎಲ್‌) ಕೈಗೊಂ­ಡಿದೆ. ನೌಕಾಪಡೆಯ ವೈಸ್‌ ಅಡ್ಮಿರಲ್‌ ಅನಿಲ್‌ ಚೋಪ್ರಾ ಉಪಸ್ಥಿತಿ­ಯಲ್ಲಿ ಇಲ್ಲಿ ನಡೆದ ಸಮಾರಂಭದಲ್ಲಿ ನೌಕೆ­­-ಯನ್ನು ಸೇರ್ಪಡೆ ಮಾಡ­ಲಾಯಿತು. ಈ ಸಂದರ್ಭದಲ್ಲಿ ಮಾತನಾ­ಡಿದ ಚೋಪ್ರಾ, ‘ಸ್ವದೇಶಿ ನಿರ್ಮಿತ ಈ ನೌಕೆಯನ್ನು  ನಿಗದಿತ ಕಾಲಾವಧಿ­ಯೊಳಗೆ ನೌಕಾ ಪಡೆಗೆ ಸೇರ್ಪಡೆ ಮಾಡ­ಲಾಗಿದ್ದು ಇದಕ್ಕಾಗಿ ಜಿಎಸ್‌­ಎಲ್‌ ಕಾರ್ಯ ಅಭಿನಂದನಾರ್ಹ’ ಎಂದರು.



105 ಮೀಟರ್‌ ಉದ್ದದ ಈ ನೌಕೆ ಜಿಎಸ್‌ಎಲ್‌ ನಿರ್ಮಿತ 200ನೇ ನೌಕೆ­ಯಾಗಿದೆ. ಜಿಎಸ್‌ಎಲ್‌ ವ್ಯವ­ಸ್ಥಾಪಕ ನಿರ್ದೇಶಕ, ನಿವೃತ್ತ ನೌಕಾ ಅಧಿಕಾರಿ ಶೇಖರ್‌ ಮಿಟಾಲ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.