ಶುಕ್ರವಾರ, ಏಪ್ರಿಲ್ 23, 2021
22 °C

ನ್ಯಾಕ್ ಎ ಮಾನ್ಯತೆ; ಶೈಕ್ಷಣಿಕ ಪಾರಮ್ಯ

ಉದಯ ಯು. Updated:

ಅಕ್ಷರ ಗಾತ್ರ : | |

ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ಆವರ ಣದಲ್ಲಿ ಶುಕ್ರವಾರ ಮುಂಜಾನೆ ಉಪನ್ಯಾಸಕರು ಕಾಲೇಜಿನ ವಿದ್ಯಾರ್ಥಿಗಳನ್ನು ನಾಚಿಸುವಷ್ಟು ಉತ್ಸಾ ಹದಿಂದ ಓಡಾಡುತ್ತಿದ್ದರು. ಪರಸ್ಪರರಿಗೆ ಅಭಿನಂದನೆ ಹೇಳುತ್ತ, ಸಿಹಿ ತಿನ್ನಿಸುತ್ತ, ಕೈ ಕುಲು ಕುತ್ತ ಪಾದರಸ ದಂತೆ ಓಡಾಡುತ್ತಿದ್ದರು.

 

ನ್ಯಾಕ್ ಸಮಿತಿ ಕಾಲೇಜಿಗೆ `ಎ~ ಗ್ರೇಡ್ ಕೊಟ್ಟಿರು ವುದೇ ಈ ಉತ್ಸಾಹಕ್ಕೆ ಕಾರಣವಾಗಿತ್ತು. ಇಡೀ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗ ಳಲ್ಲಿ `ಎ~ ಗ್ರೇಡ್ ಪಡೆದ ಏಕೈಕ ಕಾಲೇಜು ಎಂಬ ಹೆಗ್ಗ ಳಿಕೆ ಈ ಬಾರಿ ಹಾಸನದ ಕಲಾ ಕಾಲೇಜಿಗೆ ಸಂದಿದೆ.`66 ವರ್ಷ ಹಳೆಯದಾಗಿರುವ ಈ ಸರ್ಕಾರಿ ಕಲಾ ಕಾಲೇಜು, ಈ ಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಪಠ್ಯೇತರವಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ, ಮಕ್ಕಳನ್ನು ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಆ ಮೂಲಕ ವಿಶ್ವವಿದ್ಯಾಲಯಕ್ಕೇ ಮಾದರಿಯಾಗಿದೆ ಎಂದು ಕಳೆದ ಏಪ್ರಿಲ್ ತಿಂಗಳಲ್ಲಿ ಕಾಲೇಜಿಗೆ ಭೇಟಿನೀಡಿದ್ದ ನ್ಯಾಕ್ ಸಮಿತಿಯವರು ವರದಿ ನೀಡಿದ್ದರು. `ಎ~ ಗ್ರೇಡ್ ಬರಲು ಇದೇ ಕಾರಣ ಎಂದು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.ಹಾಸನದ ಸರ್ಕಾರಿ ಕಲಾ ಕಾಲೇಜಿನ ಶಿಕ್ಷಕರು ಮಾತ್ರವಲ್ಲ ವಿದ್ಯಾರ್ಥಿಗಳೂ ಸಂಶೋಧನಾ ಕಾರ್ಯ ದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕಾಲೇಜಿನ ವಿದ್ಯಾ ರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ತಮ್ಮ ಸುತ್ತಲಿನ ಸಮಾಜ, ಉದ್ಯಮಿಗಳ, ರೈತರ, ಆಟೋ ಚಾಲಕರ ಸಮಸ್ಯೆಗಳು, ಸುಖ- ದುಃಖಗಳ ಬಗ್ಗೆ ಅಧ್ಯಯನ ಮಾಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 150ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ. ಉಪನ್ಯಾಸಕರೇ 87 ಪುಸ್ತಕ ಹಾಗೂ 100 ಪ್ರಬಂಧ ಮಂಡಿಸಿದ್ದಾರೆ. ವಿಶ್ವವಿದ್ಯಾ ಲಯದ ಇತರ ಯಾವ ಕಾಲೇಜಿನಲ್ಲೂ ಇಂಥ ಸಾಧನೆ ನಡೆದಿಲ್ಲ.ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಂದು ವರ್ಷದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಸ್ತರಣಾ ಯೋಜ ನೆಗಳಾದ ಎನ್.ಎಸ್.ಎಸ್, ಎನ್‌ಸಿಸಿಗಳಲ್ಲೂ ಈ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.ಎನ್‌ಎಸ್‌ಎಸ್‌ನ ಇಬ್ಬರು ಹಾಗೂ ಎನ್‌ಸಿಸಿಯ 13 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನದ ಪರೇಡ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾಲೇಜಿನ ಅಂಗವಿಕಲ ವಿದ್ಯಾರ್ಥಿಯೊಬ್ಬ ಲಂಡನ್‌ನಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಬಂದಿದ್ದಾರೆ.

 

ಹೀಗೆ ಆರು ದಶಕ ಕಂಡಿರುವ ಈ ಕಾಲೇಜಿನ ಹೆಗ್ಗಳಿಕೆಗಳೇ ಅನೇಕನೀ ಕಾಲೇಜಿನಲ್ಲಿ ನಗರದ ವಿದ್ಯಾರ್ಥಿಗಳಷ್ಟೇ, ಕೆಲವೊಮ್ಮೆ ಅವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿರುತ್ತಾರೆ. ಇಂಗ್ಲಿಷ್ ಸೇರಿದಂತೆ ಕೆಲವು ವಿಷಯಗಳಲ್ಲಿ ಗ್ರಾಮೀಣ ಮಕ್ಕಳು ಸ್ವಲ್ಪ ಹಿಂದೆ ಇರುತ್ತಾರೆ. ಅಂಥವರಿಗೆ ನೆರವಾಗಲು ಕಾಲೇಜಿನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.

 

ಇಲ್ಲಿ ಅತ್ಯುತ್ತಮ ಎನ್ನಬಹುದಾದ ಉದ್ಯೋಗ ಮಾಹಿತಿ ಕೇಂದ್ರ ವಿದೆ. ಕಾಲೇಜಿನಲ್ಲೇ ಉಪನ್ಯಾಸಕ ಮುರಳೀಧರ ಅವರ ನೇತೃತ್ವದ `ಗುಣಮಟ್ಟ ಕಾಯ್ದುಕೊಳ್ಳುವ ಘಟಕ~ವಿದೆ. ಈ ಎಲ್ಲ ವಿಚಾರಗಳನ್ನು ನ್ಯಾಕ್  ಪರಿಗ ಣಿಸಿದೆ ಎಂದು ಲಕ್ಷ್ಮೀನಾರಾಯಣ ನುಡಿಯುತ್ತಾರೆ.ಪಿ.ಜಿ ಯಲ್ಲೂ ಮುಂದೆ: ಪ್ರಸಕ್ತ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಅವಕಾಶ ಇದೆ. ಎರಡೂ ವಿಭಾಗಗಳು ಅತ್ಯುನ್ನತ ಸಾಧನೆ ಮಾಡುತ್ತಿವೆ. ಅರ್ಥಶಾಸ್ತ್ರ ವಿಭಾಗದದಲ್ಲಿ ಮೈಸೂರು ವಿ.ವಿಯ ಮೊದಲ 9 ರ‌್ಯಾಂಕ್‌ಗಳಲ್ಲಿ ಐದು ರ‌್ಯಾಂಕ್ ಈ ಕಾಲೇಜಿಗೆ ಸಂದಿವೆ.ಅಷ್ಟೆಲ್ಲ ಹೊಗಳಿಕೆಗಳ ಜತೆಗೇ ಕಾಲೇಜಿಗೆ ಕೆಲವು ಸಲಹೆಗಳನ್ನೂ ನೀಡಿರುವ ನ್ಯಾಕ್, ಒಂದೆರಡು ಕೊರತೆಗಳನ್ನೂ ಎತ್ತಿ ತೋರಿಸಿದೆ. ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಕ್ಲಬ್  ಆರಂಭಿಸಬೇಕು ಜತೆಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಬೇಕು ಎಂದಿದೆ.ಕಾಲೇಜಿನಲ್ಲಿ ಪ್ರಸಕ್ತ 2067 ವಿದ್ಯಾರ್ಥಿಗ ಳಿದ್ದಾರೆ. ಸಾಕಷ್ಟು ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕಾಲೇಜಿಗೆ ಒಳ್ಳೆ ರಸ್ತೆ ಇಲ್ಲ ಎಂಬ ಕೊರತೆಗಳನ್ನೂ ಬೊಟ್ಟು ಮಾಡಿದೆ.  ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸು ವುದರ ಜತೆಗೆ ಈ ವರ್ಷ ದಿಂದಲೇ ರಾಜ್ಯಶಾಸ್ತ್ರ ದಲ್ಲೂ ಸ್ನಾತಕೋತ್ತರ ಅಧ್ಯಯನ ಆರಂಭವಾಗ ಲಿದೆ. ಇದೇ ಜು.9ರಿಂದ ಇದಕ್ಕೆ ಅರ್ಜಿಗಳನ್ನು ನೀಡ ಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.