ಸೋಮವಾರ, ಜನವರಿ 27, 2020
28 °C

ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮನೆಯಿಂದ ಬೆಳ್ಳಿ ವಿಗ್ರಹ, ಪೂಜಾ ಸಾಮಗ್ರಿ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಕಳ್ಳರು ಮೂರು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಿಗ್ರಹಗಳು ಮತ್ತು ಪೂಜಾ ಸಾಮಗ್ರಿಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಕಳ್ಳರು ಕಾಂಪೌಂಡ್ ಗೋಡೆಯನ್ನು ಏರಿ ಹಿಂಬದಿಯ ಬಾಗಿಲು ಮುರಿದು ಮನೆಯೊಳಕ್ಕೆ ನುಗ್ಗಿದ್ದಾರೆ. ಬೆಳ್ಳಿ ವಿಗ್ರಹಗಳು ಮತ್ತು ಕೆಲವು ಪೂಜಾ ಸಾಮಗ್ರಿಗಳನ್ನು ಬಿಟ್ಟು ಬೇರೆ ಏನನ್ನೂ ಕಳವು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಘಟನೆ ನಡೆದಾಗ ಕುಟುಂಬದ ಸದಸ್ಯರೆಲ್ಲರೂ ಗಾಢ ನಿದ್ದೆಯಲ್ಲಿದ್ದರು ಎಂದೂ ಅವರು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)