ಗುರುವಾರ , ಏಪ್ರಿಲ್ 15, 2021
21 °C

ನ್ಯಾಯಾಂಗದ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭ್ರಷ್ಟ ನ್ಯಾಯಾಧೀಶರಿಗೆ ರಕ್ಷಣೆ ಕೊಡಬೇಡಿ’ ಎಂದು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ರಾಜಕಾರಣಿಗಳನ್ನು ಕೇಳಿಕೊಳ್ಳುವ ಪರಿಸ್ಥಿತಿ ನ್ಯಾಯಾಂಗದ ಈಗಿನ ಸ್ವರೂಪಕ್ಕೆ ಹಿಡಿದ ಕನ್ನಡಿಯೇ ಎಂದು ಜನ ಅನುಮಾನಪಡುವಂತಾಗಿದೆ. ಈ ಮೂಲಕ ನ್ಯಾಯಾಂಗದಲ್ಲಿ ಭ್ರಷ್ಟ ನ್ಯಾಯಾಧೀಶರಿದ್ದಾರೆ ಎಂಬುದನ್ನು ಮುಖ್ಯ ನ್ಯಾಯಮೂರ್ತಿಗಳು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.ಪ್ರಜಾಪ್ರಭುತ್ವದ ಬುನಾದಿಯಾದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಕರ್ತವ್ಯ ನಿರ್ವಹಿಸಲು ವಿಫಲವಾದಾಗ ಕಾನೂನಿನ ಚಾವಟಿ ಬೀಸಿ ಅವುಗಳನ್ನು ಸರಿದಾರಿಗೆ ತರುವ ವ್ಯವಸ್ಥೆ ಎಂದೇ ಜನಸಾಮಾನ್ಯರು ನ್ಯಾಯಾಂಗ ಮೇಲೆ ವಿಶ್ವಾಸ ಇರಿಸಿದ್ದಾರೆ.ಲಕ್ಷ ಲಕ್ಷ ಸಂಖ್ಯೆಯ ಮೊಕದ್ದಮೆಗಳು ಕೆಳಹಂತದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ಹತ್ತಾರು ವರ್ಷಗಳಿಂದ ಇತ್ಯರ್ಥ ಕಾಣದೆ ಉಳಿದುಕೊಂಡು ನ್ಯಾಯ ಕೊಡಿಸುವಲ್ಲಿ ವಿಫಲವಾಗುತ್ತಿದ್ದರೂ ಜನ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ. ಇದಕ್ಕೆ ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಹೆಚ್ಚಳವೇ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವದ ನೈಜ ಆಧಾರವಾದ ಜನತೆ, ನ್ಯಾಯಾಂಗದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು, ನ್ಯಾಯಾಧೀಶರು ಕರ್ತವ್ಯ ಪ್ರಜ್ಞೆ, ಕಾನೂನು ಬದ್ಧತೆ ಮತ್ತು ಪ್ರಾಮಾಣಿಕ ನಡವಳಿಕೆಯನ್ನು ರಕ್ಷಾಕವಚವನ್ನಾಗಿ ಮಾಡಿಕೊಳ್ಳಬೇಕು. ಅಂಥ ಪರಿಸ್ಥಿತಿ ಈಗ ಉಳಿದಿಲ್ಲ ಎಂಬುದು ನ್ಯಾಯಮೂರ್ತಿ ಕಪಾಡಿಯಾ ಅವರ ಹೇಳಿಕೆಯಿಂದ ಧ್ವನಿತವಾಗುತ್ತಿದೆ.ಸ್ವಾತಂತ್ರ್ಯ ಗಳಿಸಿದ ಆರು ದಶಕಗಳ ನಂತರವೂ ಭ್ರಷ್ಟಾಚಾರ ಸಾಬೀತಾದ ಯಾವ ರಾಜಕಾರಣಿಗೂ ಶಿಕ್ಷೆ ನೀಡಲಾಗಿಲ್ಲ. ಭ್ರಷ್ಟಾಚಾರ ಹಗರಣಗಳ ತನಿಖೆಗೆ ಕಾನೂನಿನ ತಾಂತ್ರಿಕ ಅಂಶಗಳನ್ನು ನೆಪವಾಗಿಟ್ಟುಕೊಂಡು ತಡೆಯಾಜ್ಞೆ ನೀಡುವ ಮೂಲಕ ಅಧಿಕಾರಸ್ಥ ರಾಜಕಾರಣಿಗಳಿಗೆ ಪರೋಕ್ಷವಾಗಿ ನೆರವಾಗುವ ಕೆಳ ಕೋರ್ಟ್‌ಗಳ ತೀರ್ಪುಗಳನ್ನು ಮೇಲಿನ ಕೋರ್ಟುಗಳು ರದ್ದುಪಡಿಸಿ ನ್ಯಾಯವನ್ನು ಎತ್ತಿಹಿಡಿದ ನಿದರ್ಶನಗಳಿದ್ದರೂ ಅಂಥ ತೀರ್ಪು ನೀಡಿದ ನ್ಯಾಯಾಧೀಶರ ವರ್ತನೆ ನ್ಯಾಯಾಂಗದ ಪರಿಶೀಲನೆಗೆ ಒಳಪಡುವುದಿಲ್ಲ.ಪ್ರಭಾವಕ್ಕೋ, ಆಮಿಷಕ್ಕೋ ಒಳಗಾಗಿ ತೀರ್ಪು ನೀಡಿದ್ದೆಂಬುದು ಮೇಲಿನ ಕೋರ್ಟುಗಳಲ್ಲಿ ಸಾಬೀತಾದರೆ ತಪ್ಪು ತೀರ್ಪು ನೀಡಿದ ಕೆಳ ಕೋರ್ಟಿನ ನ್ಯಾಯಾಧೀಶರಿಗೆ ಶಿಕ್ಷೆ ವಿಧಿಸುವಂಥ ವ್ಯವಸ್ಥೆಯೂ ಇಲ್ಲ. ಇಂಥ ಸ್ಥಿತಿ ಜನತೆಯಲ್ಲಿ ಯಾವ ಭರವಸೆಯನ್ನೂ ಮೂಡಿಸಲಾರದು. ತಪ್ಪು ಮಾಡಿದವರು ರಾಜಕಾರಣಿ ಇರಲಿ, ಉನ್ನತ ಅಧಿಕಾರಿ ಇರಲಿ, ನ್ಯಾಯಾಧೀಶರೇ ಇರಲಿ, ಅವರಿಗೆ ಶಿಕ್ಷೆ ಖಚಿತ ಎಂಬುದು ಜನರಲ್ಲಿ ಮನವರಿಕೆಯಾಗುವಂತೆ ನ್ಯಾಯಾಂಗ ವ್ಯವಸ್ಥೆ ಯಶಸ್ವಿಯಾಗಬೇಕು.ತಪ್ಪಾಗಿ ತೀರ್ಪು ನೀಡುವ ನ್ಯಾಯಾಧೀಶರ ವಿರುದ್ಧ ಸಾಮಾನ್ಯ ಜನತೆ ಕೂಡ ದೂರು ನೀಡಲು ಆಸ್ಪದ ಕೊಡುವ ನ್ಯಾಯಾಂಗ ಮಾಪನ ಮತ್ತು ಉತ್ತರದಾಯಿತ್ವ ಮಸೂದೆಯನ್ನು (ಜ್ಯುಡಿಶಿಯಲ್ ಸ್ಟ್ಯಾಂಡರ್ಡ್ ಅಂಡ್ ಅಕೌಂಟಬಲಿಟಿ ಬಿಲ್) ಸಂಸತ್ತು ಅಂಗೀಕರಿಸಿ ಅನುಷ್ಠಾನಕ್ಕೆ ತಂದರೆ ನ್ಯಾಯಾಧೀಶರು ವ್ಯಕ್ತಿಗತವಾಗಿ ಹೊಣೆಗಾರಿಕೆಯಿಂದ ವರ್ತಿಸುವುದು ಅನಿವಾರ್ಯವಾಗುತ್ತದೆ. ಅಂಥ ಒತ್ತಾಸೆ ಮುಖ್ಯ ನ್ಯಾಯಮೂರ್ತಿಗಳಿಂದ ಬರಬೇಕು. ಆದರೆ, ಹೀಗೆ ಜಾರುವ ನೆಲದಲ್ಲಿ ನಿಂತವರಂತೆ ಭ್ರಷ್ಟ ನ್ಯಾಯಾಧೀಶರಿಗೆ ರಕ್ಷಣೆ ನೀಡಬೇಡಿರೆಂದು ರಾಜಕಾರಣಿಗಳಲ್ಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.