ಬುಧವಾರ, ಮೇ 25, 2022
22 °C

ನ.9ರಿಂದ ಪದ್ಮನಾಭಸ್ವಾಮಿ ನಿಧಿ ದಾಖಲೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್ಎಸ್): ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಅನಂತಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ದೊರೆತಿರುವ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ನಿಧಿಯನ್ನು ಪಟ್ಟಿ ಮಾಡಿ ದಾಖಲಿಸುವ ಕಾರ್ಯವನ್ನು ನವೆಂಬರ್ 9ರಿಂದ ಆರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯ ಮುಖ್ಯಸ್ಥರು ಶನಿವಾರ ತಿಳಿಸಿದ್ದಾರೆ.

~ದೇವಾಲಯದ ನಿಧಿ ದಾಖಲೆಯ ಮೊದಲು ಸುಪ್ರೀಂ ಕೋರ್ಟ್ ನೀಡುವ ಎಲ್ಲಾ ನಿರ್ದೇಶನಗಳನ್ನು ನಾವು ಪೂರ್ಣಗೊಳಿಸುತ್ತೇವೆ~ ಎಂದು ಸುಪ್ರೀಂ ಕೋರ್ಟ್ ನೇಮಕ ಸಮಿತಿಯ ಐದು ಸದಸ್ಯರನ್ನೊಳಗೊಂಡ ಸಮಿತಿಯ ಮುಖ್ಯಸ್ಥ ನ್ಯಾಷನಲ್ ಮ್ಯೂಸಿಯಂ ನಿರ್ದೇಶಕ ಸಿ.ವಿ. ಆನಂದ ಬೋಸ್ ಹೇಳಿದರು.  ಆನಂದ ಬೋಸ್ ನೇತೃತ್ವದ ಐವರ ಸದಸ್ಯರ ಸಮಿತಿಯೊಂದಿಗೆ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ಮತ್ತೊಂದು ಸಮಿತಿಯನ್ನು ರಚಿಸಲಾಗಿದ್ದು. ಈ ಎರಡೂ ಸಮಿತಿಗಳ ಜಂಟಿ ನೇತೃತ್ವವನ್ನು ಬೋಸ್ ಹೊಂದಿದ್ದಾರೆ.

ಶನಿವಾರ ನಡೆದ ಜಂಟಿ ಸಭೆಯ ನಂತರ ಮಧ್ಯಮ ಮಿತ್ರರೊಂದಿಗೆ ಮಾತನಾಡಿದ ಬೋಸ್ ಅವರು, ~ದೇವಾಲಯದ ನಿಧಿಯ ಪಟ್ಟಿ ಸಿದ್ಧಪಡಿಸುವುದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು. ನಾವು ನಮ್ಮ ಕಾರ್ಯವನ್ನು ನಿರ್ವಹಿಸಲಿದ್ದೇವೆ. ನವೆಂಬರ್ 4ರಂದು ನಾವು ಮತ್ತೊಮ್ಮೆ ಇಲ್ಲಿ ಸಭೆ ಸೇರಿ ನಿಧಿ ದಾಖಲೆಗೆ ಬೇಕಾದ  ಪೂರ್ವಸಿದ್ಧತೆಗಳನ್ನು ಪರಿಶೀಲಿಸುತ್ತೇವೆ~ ಎಂದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.