ಬೀದರ್: ಪಂಚಾಯಿತಿಗಳ ಅಭಿವೃದ್ಧಿಗಾಗಿ ಇರುವ ಹಣವನ್ನು ಏಪ್ರಿಲ್ ಮೂರನೇ ವಾರದಲ್ಲಿ ಬೀದರ್ನಲ್ಲಿ ನಡೆಯಲಿರುವ ಅಖಿಲ ಭಾರತ ಜಾನಪದ ಸಮ್ಮೇಳನಕ್ಕೆ ನೀಡುವಂತೆ ಸರ್ಕಾರ ಆದೇಶಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ಜಾನಪದ ಅಕಾಡೆಮಿಯು ಆಯೋಜಿಸಲಿರುವ ಸಮ್ಮೇಳನಕ್ಕಾಗಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಅನ್ವಯ ಆಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಗ್ರಾಮ ಪಂಚಾಯಿತಿಯಿಂದ 10 ಸಾವಿರ ರೂಪಾಯಿ ಮತ್ತು ಪ್ರತಿ ತಾಲ್ಲೂಕು ಪಂಚಾಯಿತಿಯಿಂದ ತಲಾ 15 ಸಾವಿರ ರೂಪಾಯಿ ನೀಡಬೇಕು. ಹಾಗೆಯೇ ಪ್ರತಿ ಜಿಲ್ಲಾ ಪಂಚಾಯಿತಿಯಿಂದ 50 ಸಾವಿರ ರೂಪಾಯಿ ಕೊಡುವಂತೆ ಸರ್ಕಾರ ಆದೇಶಿಸಿದೆ.

ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 814 ಗ್ರಾಮ ಪಂಚಾಯಿತಿಗಳು ಬರುತ್ತವೆ. ಇದರಿಂದ ಒಟ್ಟು 81.40 ಲಕ್ಷ ರೂಪಾಯಿ ಹಣ ಬರಲಿದೆ. ಹಾಗೂ ಐದು ಜಿಲ್ಲಾ ಪಂಚಾಯಿತಿಗಳಿಂದ ಒಟ್ಟು 2.50 ಲಕ್ಷ ರೂಪಾಯಿ, 24 ತಾಲ್ಲೂಕು ಪಂಚಾಯಿತಿಗಳಿಂದ 3.50 ಲಕ್ಷ ರೂಪಾಯಿ ಸಮ್ಮೇಳನಕ್ಕೆ ದೊರೆಯಲಿದೆ. ಈ ಸ್ಥಳೀಯ ಸಂಸ್ಥೆಗಳು ಸಮ್ಮೇಳನದ ಸ್ವಾಗತ ಸಮಿತಿಗೆ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿಯೇ ಸಮ್ಮೇಳನಕ್ಕೆ ನೀಡಲಾಗುವ ಹಣವನ್ನು ಮುರಿದುಕೊಂಡು ವರ್ಗಾವಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸುತ್ತಾರೆ.

ಇಷ್ಟು ಮಾತ್ರವಲ್ಲದೆ ಈ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರವು 25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೇ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಿದೆ.
ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಂದ ತಲಾ 200 ರೂಪಾಯಿ ಸಂಗ್ರಹಿಸಲಾಗಿದೆ.

‘ಗ್ರಾಮ ಪಂಚಾಯಿತಿಗಳ ಬಳಿ ಈ ರೀತಿಯ ಕಾರ್ಯಕ್ರಮಗಳಿಗೆ ನೀಡುವುದಕ್ಕಾಗಿ ಅಗತ್ಯವಿರುವಷ್ಟು ಹಣ ಇರುವುದಿಲ್ಲ’ ಎನ್ನುವ ಡಾವರಗಾಂವ್ ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್ ಸೋನಾರೆ ಅವರು ‘ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಬೇಸಿಗೆಯ ದಿನಗಳಲ್ಲಿ ಪಂಚಾಯಿತಿಗಳಿಗೆ ಹೆಚ್ಚು ಹಣ ನೀಡಬೇಕಾದ ಸರ್ಕಾರವೇ ಬರುವ ಅನುದಾನದಲ್ಲಿಯೇ ಕಡಿತ ಮಾಡುತ್ತಿರುವುದು ನ್ಯಾಯ ಸಮ್ಮತವಲ್ಲ. ಇದನ್ನು ವಿರೋಧಿಸುತ್ತೇವೆ’ ಎಂದು ಹೇಳುತ್ತಾರೆ.

‘ಸಮ್ಮೇಳನ ನಡೆಸುವ ಬಗ್ಗೆ ಮತ್ತು ಅದಕ್ಕೆ ಸರ್ಕಾರ ಹಣ ನೀಡುವ ಬಗ್ಗೆ ಯಾವುದೇ ತಕರಾರು ಇಲ್ಲ. ರಾಜ್ಯ ಸರ್ಕಾರವೇ ನೇರವಾಗಿ ಸಮ್ಮೇಳನಕ್ಕೆ ತಗುಲುವ ಹಣವನ್ನು ಬಿಡುಗಡೆ ಮಾಡಲಿ. ಅದು ಬಿಟ್ಟು ಪಂಚಾಯಿತಿಗಳ ಬಳಿಯಿಂದ ಹಣ ತೆಗೆದುಕೊಳ್ಳುವುದು ಒಳ್ಳೆಯ ಸಂಪ್ರದಾಯ ಅಲ್ಲ.

ರಾಜ್ಯದಲ್ಲಿ ಕೇವಲ ಜಾನಪದ ಅಕಾಡೆಮಿ ಮಾತ್ರ ಇಲ್ಲ. ಇಂತಹ ಹಲವು ಸಂಸ್ಥೆಗಳಿವೆ. ಎಲ್ಲರೂ ಹೀಗೆ ಹಣ ಕೇಳುತ್ತ ಹೋದರೆ ಅದಕ್ಕೊಂದು ತಾರ್ಕಿಕ ಅಂತ್ಯವೇ ಇರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಪಂಚಾಯಿತಿಗಳಿಗೆ ನೀಡಿದ ಅನುದಾನ ಕಡಿತ ಮಾಡುವುದರ ಬದಲು ನೇರ ಹಣ ನೀಡಿ ಸಮ್ಮೇಳನ ನಡೆಸಲಿ. ಇಲ್ಲದಿದ್ದರೆ ಮೊದಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ಹಿಂದುಳಿದ ಪ್ರದೇಶಗಳಿಗೆ ಇಂತಹ ಆದೇಶ ‘ಶಾಪ’ ಆಗಿ ಪರಿಣಮಿಸಲಿದೆ ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯರಾದ ಕಾಜಿ ಅರ್ಷದ್ ಅಲಿ.

ಸಾಂಸ್ಕೃತಿಕ ಚಟುವಟಿಕೆಗಳಿಗೆ ಪಂಚಾಯಿತಿಗಳ ಹಣ ನೀಡುವ ಸರ್ಕಾರದ ನಿರ್ಧಾರವೇ ಸರಿಯಿಲ್ಲ. ಇದು ಸರ್ಕಾರದ ಪಂಚಾಯಿತಿ ವಿರೋಧಿ ಮತ್ತು ಪ್ರಗತಿವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ.

ಈ ಪರಿಪಾಠ ಮುಂಬರುವ ದಿನಗಳಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಿಗೂ ಹಣ ಬಿಡುಗಡೆ ಮಾಡುವದರಲ್ಲಿಯೂ ಮುಂದುವರೆಯಬಹುದು’ ಎಂದು ಲೇಖಕ ಶಿವರಾಜ ಕಾಡೋದೆ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.