ಲಕ್ಷ್ಮೇಶ್ವರ: ಮಹಾಕವಿ ಪಂಪ ಹುಟ್ಟಿ ಬೆಳೆದು ಸಾಹಿತ್ಯ ಕೃಷಿ ಮಾಡಿದ ಉತ್ತರ ಕರ್ನಾಟಕದಲ್ಲಿ ನಿಜಕ್ಕೂ ಕನ್ನಡ ಕ್ಷೇಮವಾಗಿದೆ ಎಂದು ಚಲನಚಿತ್ರ ರಂಗದ ಖ್ಯಾತ ಸಾಹಿತಿ ಹಾಗೂ ಸಂಗೀತಗಾರ ಹಂಸಲೇಖ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಭಾನು ಮಾರ್ಕೆಟ್ ಆವರಣದಲ್ಲಿ ಪಟ್ಟಣದ ಯುವ ಗೆಳೆಯರ ಬಳಗದ 23ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ಜರುಗಿದ `ಕನ್ನಡಕ್ಕಾಗಿ ಕಲೆಗಳು' ಕಿರುನಾಟಕ ವರ್ಷ 2013-14ನೇ ರಂಗಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಕುತ್ತು ಎದುರಾಗಿದೆ ಎಂದು ಒಪ್ಪಿಕೊಂಡ ಅವರು ನಾಡಿನ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ ಗ್ರಾಮಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಈಚಿನ ದಿನಗಳಲ್ಲಿ ಹಳ್ಳಿಗಳಲ್ಲಿಯೂ ಇಂಗ್ಲೀಷ್ ಭಾಷೆ ವ್ಯಾಮೋಹ ಹೆಚ್ಚಾಗಿದೆ.

ಇಂಗ್ಲೀಷ್ ಒಂದು ವ್ಯಾಪಾರಿ ಭಾಷೆ. ಅದಕ್ಕೆ ಕೇವಲ 200 ವರ್ಷಗಳ ಇತಿಹಾಸ ಇದೆ. ಆದರೆ ಕನ್ನಡ ಮಾತೃ ಭಾಷೆಯಾಗಿದ್ದು ಅದಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಿದ ಅವರು ವ್ಯಾಪಾರ ಕ್ಷೇತ್ರದಲ್ಲಿ ಸದ್ಯ ಚೀನಾ ದೇಶ ದಾಪುಗಾಲು ಇಡುತ್ತಿದ್ದು, ಅದು ಇಂಗ್ಲೀಷ್ ಭಾಷೆಗೆ ಪ್ರತಿಸ್ಪರ್ಧಿ ಆಗಿ ಬೆಳೆಯುತ್ತಿದೆ. ಕಾರಣ ಮುಂದೊಂದು ದಿನ ಚೈನಾ ಭಾಷೆ ಇಂಗ್ಲೀಷ ಭಾಷೆಯ ಸ್ಥಾನ ಆಕ್ರಮಿಸಿಕೊಂಡರೆ ಆಗ ಇಂಗ್ಲೀಷ್ ವ್ಯಾಮೋಹಿ ಕನ್ನಡಿಗರು ಚೈನಾ ಭಾಷೆಯನ್ನೂ ತಮ್ಮ ಮಕ್ಕಳಿಗೆ ಕಲಿಸಬೇಕಾಗುತ್ತದೆ ಎಂದು ಕೆಣಕಿದರು.

ಕನ್ನಡ ಪ್ರತಿಯೊಬ್ಬ ಕನ್ನಡಿಗನ ಆಸ್ತಿ. ಅದು ನಮ್ಮ ನಮ್ಮೆಲ್ಲರ ಹಕ್ಕು. ಕನ್ನಡದ ಕಿರು ನಾಟಕಗಳನ್ನು ಜಗತ್ಪ್ರಸಿದ್ಧ ಮಾಡುವ ಉದ್ದೇಶ ಹಾಕಿಕೊಳ್ಳಲಾಗಿದ್ದು ಅದಕ್ಕಾಗಿ ನಾಡಿನಾದ್ಯಂತ ಮೂರು ಸಾವಿರ ಕಿರು ನಾಟಕಗಳನ್ನು ಪ್ರದರ್ಶನ ಮಾಡುವ ಯೋಜನೆ ರೂಪಿಸಲಾಗಿದೆ. ಹೀಗೆ ನಾಡಿನ ತುಂಬೆಲ್ಲ ಪ್ರದರ್ಶನಗೊಂಡ ಎಲ್ಲ ನಾಟಕಗಳನ್ನು ಟಿವಿ ಮಾಧ್ಯಮದ ಮೂಲಕ ಇಡೀ ಜಗತ್ತಿನ ಜನರು ನೋಡುವಂತೆ ಮಾಡಲಾಗುವುದು ಎಂದು ಅವರು ತಮ್ಮ ಯೋಜನೆ ಕುರಿತು ವಿವರಿಸಿದರು.

ಮಹಾಕವಿ ಪಂಪ ತನ್ನ ಸಾಹಿತ್ಯ ರಚನೆ ಮಾಡಿದ ಲಕ್ಷ್ಮೇಶ್ವರ ಬಹಳ ಪುಣ್ಯ ಭೂಮಿ ಎಂದು ಅವರು ಹೊಗಳಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ ಜಾನಪದ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದು ಇಂದಿಗೂ ಜಾನಪದ ಸಾಹಿತ್ಯ ತನ್ನ ಪ್ರಭಾವ ಉಳಿಸಿಕೊಂಡಿದೆ. ಈ ಸಾಹಿತ್ಯಕ್ಕೆ ಮರುಳಾಗದವರು ಯಾರೂ ಇಲ್ಲ. ಕಾರಣ ಜಾನಪದ ಸಾಹಿತ್ಯ ಉಳಿಸಲು ಎಲ್ಲ ಪ್ರಯತ್ನ ಆಗಬೇಕಿದೆ ಎಂದು ತಿಳಿಸಿದ ಅವರು ನಾಟಕ, ಸಾಹಿತ್ಯ, ಸಂಗೀತ ವ್ಯಕ್ತಿಗೆ ಉನ್ನತ ಸ್ಥಾನ ದೊರಕಿಸಿಕೊಡುತ್ತದೆ ಎಂದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಸಿ.ವಿ. ಕೆರಿಮನಿ, ಪ್ರಶಾಂತ ನೆಲವಗಿ, ಪುರಸಭೆ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ, ಸಮಾಜ ಸೇವಕ ಚೆಂಬಣ್ಣ ಬಾಳಿಕಾಯಿ, ಆರ್.ಎಫ್. ಪುರಾಣಿಕಮಠ, ಎಸ್.ಎ. ಮಾನ್ವಿ, ರಂಗಕರ್ಮಿ ಮಾಲತೇಶ ಬಡಿಗೇರ, ಎ.ವೈ. ನವಲಗುಂದ, ಪುರಸಭೆ ಸದಸ್ಯೆ ಜಯಕ್ಕ ಕಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಹಂಸಲೇಖ ದಂಪತಿ, ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಸಿ.ವಿ. ಕೆರಿಮನಿ ಅವರನ್ನು ಯುವ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಡಿ.ಎಂ. ಪೂಜಾರ ಸ್ವಾಗತಿಸಿದರು.

ಪುರಸಭೆ ಸದಸ್ಯ ಹಾಗೂ ಬಳಗದ ಸದಸ್ಯ ಮಹೇಶ ಹೊಗೆಸೊಪ್ಪಿನ ಬಳಗದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ನವಲೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.