ಬುಧವಾರ, ಜೂನ್ 16, 2021
21 °C

ಪಕ್ಷಾಂತರ ಯತ್ನ ತಡೆದ ರಾಹುಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕಾಂಗ್ರೆಸ್ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸೇರಲು ಯತ್ನಿಸಿದ್ದ ಮೇದಕ್‌ ಜಿಲ್ಲೆಯ ಪಠಾನ್‌ಚೆರುವು ಕ್ಷೇತ್ರದ ಶಾಸಕ ನಂದೀಶ್ವರ ಗೌಡ್‌ ಅವರು ರಾಹುಲ್‌ ಗಾಂಧಿ ಅವರಿಂದ ಬಂದ ಅಚ್ಚರಿಯ ದೂರ­ವಾಣಿ ಕರೆಯಿಂದಾಗಿ ಪಕ್ಷದಲ್ಲೇ ಉಳಿದಿದ್ದಾರೆ.ಗೌಡ್‌ ಅವರೊಂದಿಗೆ ಎರಡು ಬಾರಿ ಮಾತನಾಡಿದ ರಾಹುಲ್‌ ಗಾಂಧಿ, ಗೌಡ್‌ ಅವರ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದರು. ಪಕ್ಷದ ಉಪಾಧ್ಯಕ್ಷರ ಕರೆ ಬಂದ ನಂತರ ಕಾಂಗ್ರೆಸ್‌ ಮುಖಂಡ ಪೊನ್ನಾಲ ಲಕ್ಷ್ಮಯ್ಯ ಅವರ ಜತೆ ಸುದ್ದಿಗಾರ­ರೊಂದಿಗೆ ಮಾತನಾಡಿದ ಗೌಡ್‌, ತಾವು ಪಕ್ಷ ತೊರೆಯುವುದಿಲ್ಲ ಎಂದು ಘೋಷಿಸಿದರು.ವಿಲೀನದ ಕುರಿತಾಗಿ ಟಿಆರ್‌ಎಸ್‌ ಕೈಗೊಳ್ಳಲಿರುವ ನಿರ್ಧಾರಕ್ಕೆ ಕಾಯು­ತ್ತಿದ್ದ ಕಾಂಗ್ರೆಸ್‌ ಪಕ್ಷವು ಪ್ರತ್ಯೇಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸ್ಥಾಪಿಸಲು ವಿಳಂಬ ಮಾಡಿತ್ತು. ಇದು ಪಕ್ಷದಲ್ಲಿ ಗೊಂದಲಕ್ಕೆ ಅನುವು ಮಾಡಿಕೊಟ್ಟಿತ್ತು.ರಾಹುಲ್‌ ಗಾಂಧಿ ಅವರು ನೇರವಾಗಿ ಗೌಡ್‌ ಅವರಿಗೆ ಕರೆ ಮಾಡಿದ ನಂತರ ಎಚ್ಚೆತ್ತು­ಕೊಂಡಿ­ರುವ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಮುಖಂಡರು, ಟಿಆರ್‌ಎಸ್‌ನತ್ತ ಮುಖ­ಮಾಡಿದ್ದ ಮತ್ತೊಬ್ಬ ಮುಖಂಡ ಪ್ರತಾಪ್‌ ರೆಡ್ಡಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯಶಸ್ವಿ­ಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.