ಶನಿವಾರ, ಏಪ್ರಿಲ್ 10, 2021
29 °C

ಪಟಾಕಿ ಸಿಡಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಪಟಾಕಿ ಸಿಡಿಸಲು ಹೋದ ಬಾಲಕ ಮೃತಪಟ್ಟ ಮೃತಪಟ್ಟ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಮೋಟರ್ ಮೆಕ್ಯಾನಿಕ್ ಸಿಕಂದರ್ ಅವರ ಪುತ್ರ ಸಾಧಿಕ್ ಪಾಷಾ (9) ಮೃತಪಟ್ಟವನು. ಸಾಧಿಕ್ ಸಂಜೆ 6 ಗಂಟೆಗೆ ಪಟಾಕಿ ಸಿಡಿಸುತ್ತಿದ್ದ. ಪಟಾಕಿ ನಂತರ ಅಟಂಬಾಂಬ್ ಹಚ್ಚಿ ಅದರ ಮೇಲೆ ಸ್ಟೀಲ್ ಲೋಟ ಮುಚ್ಚಿದ್ದಾನೆ. ಅದು ಸಿಡಿಯದ ಕಾರಣ ಹತ್ತಿರ ಹೋಗಿ ಲೋಟ ತೆಗೆಯಲು ಪ್ರಯತ್ನಿಸಿದ್ದಾನೆ. ಅದೇ ವೇಳೆಗೆ ಅಟಂಬಾಂಬ್ ಸಿಡಿದಿದೆ.ಪರಿಣಾಮವಾಗಿ ಮುಚ್ಚಿಟ್ಟ ಸ್ಟೀಲ್ ಲೋಟ ಬಾಲಕನ ಕುತ್ತಿಗೆಯನ್ನು ತೀವ್ರ ಗಾಯಗೊಳಿಸಿತು. ಪೋಷಕರು ಕೂಡಲೇ ಚಿಕಿತ್ಸೆಗಾಗಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು. ಅಷ್ಟರಲ್ಲಿ ಸಾಧಿಕ್ ಮೃತಪಟ್ಟನು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.