ಮಂಗಳವಾರ, ಜನವರಿ 21, 2020
28 °C

ಪಟೇಲ್‌ ಪ್ರತಿಮೆಗಾಗಿ ಡಿ.15ಕ್ಕೆ ‘ಏಕತಾ ಓಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ‘ಏಕತಾ ಪ್ರತಿಮೆ’  ನಿರ್ಮಾಣದ ಅಂಗವಾಗಿ  ಡಿ.15ಕ್ಕೆ ದೇಶದ ಎಲ್ಲ ಜಿಲ್ಲೆಗಳಲ್ಲಿ ‘ಏಕತಾ ಓಟ’ ಆಯೋಜಿಸಲಾಗಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಏಕತಾ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುಜರಾತ್‌ ಇಂಧನ ಸಚಿವ ಸೌರಭಭಾಯಿ ಪಟೇಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರತಿಮೆ ನಿರ್ಮಾಣದ ಕುರಿತು ಪ್ರಚಾರ ಕೈಗೊಳ್ಳಲು ಗುಜರಾತ್‌ ರಾಜ್ಯದ ನಿಯೋಗದೊಂದಿಗೆ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 182 ಮೀಟರ್‌ ಎತ್ತರದ ಪ್ರತಿಮೆ­ಯನ್ನು ಗುಜರಾತ್‌ನ ನರ್ಮದಾ ನದಿಯ ಸಮೀಪದ ಸಾಧು ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಪ್ರತಿಮೆಯಾಗಲಿದೆ. ಇದಕ್ಕಾಗಿಯೇ ನರೇಂದ್ರ ಮೋದಿ ಅಧ್ಯಕ್ಷತೆ­ಯಲ್ಲಿ ಏಕತಾ ಟ್ರಸ್ಟ್‌ ರಚಿಸಿದ್ದು ಈ ನಿರ್ಮಾಣ ಕಾರ್ಯದಲ್ಲಿ ಜನರ ಪಾಲ್ಗೊ-­ಳ್ಳುವಿಕೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ­ಕೊಳ್ಳ­ಲಾಗಿದ್ದು, ಏಕತಾ ಓಟವೂ ಇದರ ಭಾಗವಾಗಿದೆ ಎಂದರು.ಪಟೇಲ್‌ ಅವರ ಪುಣ್ಯತಿಥಿಯಾದ ಡಿ.15ರಂದು ಎಲ್ಲ ಜಿಲ್ಲೆಗಳಲ್ಲಿ ‘ಏಕತಾ ಓಟ’ ನಡೆಯಲಿದೆ. ಪ್ರತಿಯೊಂದು ಗ್ರಾಮಕ್ಕೂ ಏಕತಾ ಸಂದೇಶ ತಲುಪಿ­ಸುವುದು ಓಟದ ಉದ್ದೇಶವಾಗಿದೆ. ವಡೋದರಾದಲ್ಲಿ ನರೇಂದ್ರ ಮೋದಿ ಓಟಕ್ಕೆ ಚಾಲನೆ ನೀಡಲಿದ್ದು, ಸುಮಾರು 1.5 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೇಶದ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯ­ಲಿ­ರುವ ಈ ಓಟ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ನುಡಿದರು.

ಪ್ರತಿಕ್ರಿಯಿಸಿ (+)