ಭಾನುವಾರ, ಏಪ್ರಿಲ್ 18, 2021
31 °C

ಪಡಿತರ ಅಕ್ಕಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಸಾರ್ವಜನಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಶನಿವಾರ ತಡರಾತ್ರಿ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಐವರನ್ನು ಬಂಧಿಸಿದ್ದಾರೆ.ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗಬೇಕಿದ್ದ ತಲಾ 50 ಕೆ.ಜಿ. ತೂಕದ, 700 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ರೂ 2.5 ಲಕ್ಷ.ಲಾರಿಗಳು ದಾವಣಗೆರೆಯಿಂದ ಹೊರಟು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸೇರಿದ ಗೋದಾಮಿನಲ್ಲಿ ಅಕ್ಕಿ ಇಳಿಸಬೇಕಿತ್ತು. ಆದರೆ, ಪಟ್ಟಣವನ್ನು ದಾಟಿ  ಚಿತ್ರದುರ್ಗದ ಕಡೆಗೆ ಸಾಗುತ್ತಿದ್ದಾಗ ಸಿಪಿಐ ಜೆ.ಎಸ್. ತಿಪ್ಪೇಸ್ವಾಮಿ ಮತ್ತು  ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡರು. ದಾವಣಗೆರೆ ಶಹನಾಜ್ ಎಸ್.ಎನ್. ಕಂಪೆನಿಯ ಗುತ್ತಿಗೆದಾರರಾದ ಖಲಂದರ್, ಸೋಹೈಲ್, ಖಾದರ್ ಅಲಿ,  ಚಾಲಕರಾದ ಸೈಯದ್ ಷಫೀಕ್ ಮತ್ತು ಸಾದಿಕ್ ಬಂಧಿತ ಆರೋಪಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.