ಶುಕ್ರವಾರ, ಜೂನ್ 25, 2021
30 °C

ಪಡಿತರ ವಂಚಿತ ಬಡವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ, ಹುಣಸೂರು, ಎಚ್. ಡಿ. ಕೋಟೆ ತಾಲ್ಲೂಕುಗಳ ಮದ್ಯದಂಗಡಿಗಳ ಅಲ್ಲಿನ ಬಡವರು ರೇಷನ್ ಕಾರ್ಡ್‌ಗಳನ್ನು  ಅಡ ಇಟ್ಟಿರುವುದು ಬೆಳಕಿಗೆ ಬಂದಿದೆ. ಪಡಿತರ ಚೀಟಿ ಅಡ ಇಟ್ಟು `ಕುಡಿಯುವ~ ಅನಿವಾರ್ಯತೆ ನಿಜಕ್ಕೂ ದುರದೃಷ್ಟಕರ.ಪಡಿತರ ಚೀಟಿ ಅಡ ಇಟ್ಟಿದ್ದರಿಂದ ಅನೇಕರಿಗೆ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಮಕ್ಕಳು ಹಾಗು ಕುಟುಂಬ ಸದಸ್ಯರು ಹಸಿವು ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಾರೆ.ಸರ್ಕಾರ ಕೊಟ್ಟ ರೇಷನ್ ಕಾರ್ಡ್‌ಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯುವುದು ಹೇಗೆ? ಮದ್ಯದ ಅಂಗಡಿಯವರು ಈ ಪಡಿತರ ಕಾರ್ಡುಗಳನ್ನು ಬಳಸಿಕೊಂಡು ಆಹಾರ ಧಾನ್ಯ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಮದ್ಯದ ಅಂಗಡಿಗಳ ಮೇಲೆ ನಿಗಾ ಇಡಬೇಕು. ಪಡಿತರದಾರಿಗೆ ನೀಡಿದ ಆಹಾರ ಧಾನ್ಯ ಬೇರೆಯವರ ಪಾಲಾಗುವುದಕ್ಕೆ ಅವಕಾಶ ಕೊಡಬಾರದು.ಪಡಿತರ ಕಾರ್ಡು ಅಡ ಇಟ್ಟು ಕುಡಿಯುವವರು ಬಹುತೇಕ ಗಂಡಸರು. ಸರ್ಕಾರ ಪಡಿತರ ಚೀಟಿಗಳನ್ನು ಕುಟುಂಬದ ಹಿರಿಯ ಮಹಿಳೆಯ ಹೆಸರಿಗೆ ವರ್ಗಾಯಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.       

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.