ಪಡುಬಿದ್ರಿ: ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಬೈಪಾಸ್ ನಿರ್ಮಿಸಲು ಮುಂದಾಗಿರುವ ಕ್ರಮದ ವಿರುದ್ಧ ಆಕ್ರೋಶಗೊಂಡಿರುವ ನಾಗರಿಕರು ಇದೇ 18ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಉಪ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಗುರುದೇವ್ ಟಾಕೀಸ್ ಬಳಿ ಚುನಾವಣಾ ಬಹಿಷ್ಕಾರದ ಮಾಹಿತಿ ಇರುವ ಬ್ಯಾನರ್ ಅಳವಡಿಸಲಾಗಿದೆ. ಸುರತ್ಕಲ್-ಕುಂದಾಪುರ ಮಧ್ಯೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು.

ಪಡುಬಿದ್ರಿ ಗ್ರಾ.ಪಂ ವ್ಯಾಪ್ತಿಯ ಪಾದೆಬೆಟ್ಟು ಪರಿಶಿಷ್ಠ ಕಾಲನಿ, ರಾಮನಗರ, ದೀನ್ಸ್ಟ್ರೀಟ್ ವ್ಯಾಪ್ತಿಯ 60ಕ್ಕೂ ಅಧಿಕ ಕುಟುಂಬಗಳು ಬೈಪಾಸ್ ಯೋಜನೆ ವಿರೋಧಿಸಿದ್ದಾರೆ. ಚುನಾವಣೆ ಬಹಿಷ್ಕಾರ ನಿರ್ಧಾರಕ್ಕೆ ಅಕ್ಕಪಕ್ಕದ ನಿವಾಸಿಗಳು ಬೆಂಬಲಿಸಿದ್ದು, ಸುಮಾರು 200ರಷ್ಟು ಮನೆಗಳ ಸಾವಿರಾರು ಮತದಾರರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

`ಸಂಸದರಾಗಿದ್ದ ವೇಳೆ ಡಿ.ವಿ.ಸದಾನಂದ ಗೌಡ ಅವರು ಬೈಪಾಸ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಬೈಪಾಸ್ ಯೋಜನೆಯನ್ನು ವಿರೋಧಿ ಹೋರಾಟದಲ್ಲಿ ಕೈಜೋಡಿಸುವುದಾಗಿಯೂ ಹೇಳಿದ್ದರು. ಆದರೆ ಮುಖ್ಯಮಂತ್ರಿ ಆದ ಬಳಿಕ ಏಕಾಏಕಿ ಬೈಪಾಸ್ ನಿರ್ಮಿಸಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಇದರಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಅವರ ಕೈವಾಡವೂ ಇದೆ~ ಎಂದು ಸ್ಥಳೀಯರಾದ ನವೀನ್ ಭಟ್ ಆರೋಪಿಸಿದ್ದಾರೆ.

`ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ, ಜನಪ್ರತಿನಿಧಿ, ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಭೂಕಬಳಿಕೆ ಮಾಡಿದವರ ಮೇಲೆ ಕ್ರಮಕೈಗೊಂಡು ಚತುಷ್ಪಥ ಕಾಮಗಾರಿ ನಡೆಸುವ ಬದಲು ನ್ಯಾಯಯುತ ಜೀವನ ನಡೆಸುವ ನಮ್ಮಂತಹ ಬಡಪಾಯಿಗಳ ಮೇಲೆ ಸರ್ಕಾರ ಸವಾರಿ ಮಾಡಲು ಮುಂದಾಗಿದೆ~ ಎಂದು ದಲಿತ ಕಾಲನಿಯ ನಿವಾಸಿ ಸುರೇಶ್ ದೂರಿದರು.

ಹೆದ್ದಾರಿ ವಿಸ್ತರಣೆ ಸಂದರ್ಭ ಎಲ್ಲಿಯೂ ಬೈಪಾಸ್ ರಚನೆ ಬಗ್ಗೆ ಉಲ್ಲೇಖಿಸಿಲ್ಲ. ಮೂವರು ಸರ್ಕಾರಿ ಅಧಿಕಾರಿಗಳು ಈಗಿರುವ ಹೆದ್ದಾರಿಯ ವಿಸ್ತರಣೆಯೇ ಸೂಕ್ತ ಎಂದು ವರದಿ ಸಲ್ಲಿಸಿದ್ದರೂ ಸರ್ಕಾರ ಬೈಪಾಸ್ ನಿರ್ಮಿಸುವ ನಿರ್ಣಯ ಕೈಗೊಂಡಿದೆ. ಇದರಿಂದ ಅಮಾಯಕರಾದ ನಮಗೆ ಅನ್ಯಾಯವಾಗಿದೆ. ಸ್ಥಳೀಯರ ವಿರೋಧವನ್ನು ನಿರ್ಲಕ್ಷಿಸಿ ಬೈಪಾಸ್ ಜಾರಿಗೊಂಡಲ್ಲಿ ತೀವ್ರ ಹೋರಾಟ ನಡೆಸುತ್ತೇವೆ. ನ್ಯಾಯಾಂಗ ಹೋರಾಟವನ್ನೂ ನಡೆಸುತ್ತೇವೆ~ ಎಂದು ಸ್ಥಳೀಯರು ತಿಳಿಸಿದ್ದಾರೆ.

`ದಲಿತರ ಭೂಮಿ ತೆರವಿಗೆ ಬಿಡುವುದಿಲ್ಲ~

ಪಡುಬಿದ್ರಿ: `ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆಗೆ ದಲಿತರ ಭೂಮಿ ತೆರವುಗೊಳಿಸಲು ಬಿಡುವುದಿಲ್ಲ~ ಎಂದು ಉಡುಪಿ ಜಿಲ್ಲೆಯ ವಿವಿಧ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.

ಉಡುಪಿ ಜಿಲ್ಲಾ ಚಲಿತ ಚಳುವಳಿಗಳ ಒಕ್ಕೂಟದಿಂದ ಚಳುವಳಿಯ ಸಂಘಟನೆಯ ಪ್ರಮುಖರು ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಭೆ ಸೇರಿ ಪಡುಬಿದ್ರಿ ಬೈಪಾಸ್ ಯೋಜನೆಯಿಂದಾಗು ಒಳಿತು ಕೆಡುಕುಗಳ ಬಗ್ಗೆ ಚರ್ಚಿಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರ ನಿವಾಸಕ್ಕೆ ತೆರಳಿ ಯೋಜನೆ ಬಗ್ಗೆ ತಮ್ಮ ವಿರೋಧ ಸೂಚಿಸಿದರು.

`ಪ್ರಸ್ತಾವಿತ ಬೈಪಾಸ್ ಯೋಜನೆಯಿಂದ ಸುಮಾರು 35 ದಲಿತ ಮನೆಗಳ ಹಲವು ಕುಟುಂಬಗಳು ಬೀದಿಪಾಲಾಗುವ ಭೀತಿ ಇದೆ. ಬಂಡವಾಳ ಶಾಹಿಗಳಿಗಾಗಿ ಹಿರಿಯರಿಂದಲೂ ಅದೇ ಜಾಗದಲ್ಲಿ ಜೀವಿಸಿಕೊಂಡು ಬರುತ್ತಿರುವ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಿದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂಧಿಸದಿದ್ದಲ್ಲಿ ದಲಿತರ ಭೂಮಿ ಉಳಿಸಲು ತೀವ್ರ ಹೋರಾಟ ನಡೆಸಲಾಗುವುದು~ ಎಂದು ಎಚ್ಚರಿಸಿದರು.

ಒಕ್ಕೂಟದ ಪ್ರಮುಖರಾದ ಜಯನ್ ಮಲ್ಪೆ, ಸುಂದರ ಮಾಸ್ಟರ್, ಶ್ಯಾಮ್ರಾಜ್ ಬಿರ್ತಿ, ಸುಂದರ ಗುಜ್ಜರಬೆಟ್ಟು, ಪ್ರಶಾಂತ್ ತೊಟ್ಟಂ, ಹೂವಪ್ಪ ಮಾಸ್ಟರ್, ಎಸ್.ವಿಜಯ್, ಗುರುವಪ್ಪ ಕುಂದಾಪುರ, ಉದಯ ನಾಗೂರು ಬೈಂದೂರು, ಗಣೇಶ್ ಬಿರ್ತಿ, ಯುವರಾಜ್ ಪುತ್ತೂರು, ಸುಂದರಿ ಪುತ್ತೂರು, ರವಿಕಲಾ, ಶೇಖರ್ ಹೆಜಮಾಡಿ, ಕೇಶವ ಸಾಲ್ಯಾನ್, ಪಿ.ಕೇಶವ ಮಂಗಳೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.