ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿ ತನ್ನ ಪತ್ನಿಯ ಮುಖಕ್ಕೆ ಆಸಿಡ್ ಎರಚಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಗೌರಮ್ಮ(36) ಅವರನ್ನು ಕೆಂಗೇರಿ ಉಪನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆರೋಪಿ ಕುಮಾರ್(55)ನನ್ನು ಕೆಂಗೇರಿ ಪೊಲೀಸರು ಭಾನುವಾರ ಬಿಡದಿಯಲ್ಲಿ ಬಂಧಿಸಿದ್ದಾರೆ.

ಹಿನ್ನೆಲೆ: ಮೂಲತಃ ಬಿಡದಿಯವನಾದ ಕುಮಾರ್, 17 ವರ್ಷಗಳ ಹಿಂದೆ ಕುಣಿಗಲ್ ತಾಲ್ಲೂಕಿನ ಗೌರಮ್ಮ ಅವರನ್ನು ಪ್ರೀತಿಸಿ ವಿವಾಹವಾಗಿದ್ದ.

ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮೊದಲ ಮಗ ರಾಜೇಶ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಷ್ಣು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ. ತೇಜಸ್ ಒಂಬತ್ತನೇ ತರಗತಿ ಓದುತ್ತಿದ್ದರೆ ಕೊನೆಯ ಮಗ ಪೃಥ್ವಿ ನಾಲ್ಕನೇ ತರಗತಿ ವಿದ್ಯಾರ್ಥಿ.

ಪೇಯಿಂಟರ್ ಕೆಲಸ ಮಾಡುತ್ತಿದ್ದ ಕುಮಾರ್ ತನ್ನ ನಾಲ್ಕು ಮಕ್ಕಳನ್ನು ದೇವಗಿರಿಯ ವಿದ್ಯಾರ್ಥಿ ನಿಲಯಕ್ಕೆ ಸೇರಿಸಿ, ಪತ್ನಿಯೊಂದಿಗೆ ನಗರದ ಮುತ್ತುರಾಯನಪಾಳ್ಯದಲ್ಲಿ ವಾಸಿಸುತ್ತಿದ್ದರು. ಗೌರಮ್ಮ , ಕೆಂಚನಹಳ್ಳಿಯಲ್ಲಿರುವ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕುಮಾರ್ ಆರೋಪಿಸಿದ್ದಾನೆ. ಬೆಳಿಗ್ಗೆ 8.30ಕ್ಕೆ ಪತ್ನಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ತನ್ನ ಜತೆ ಬಾಳುವಂತೆ ಬೇಡಿಕೊಂಡಿದ್ದು, ಆಕೆ ನಿರಾಕರಸಿದ ಹಿನ್ನೆಲೆಯಲ್ಲಿ ಆಸಿಡ್ ಎರಚಿ ಪರಾರಿಯಾಗಿದ್ದಾಗಿ ಕುಮಾರ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.

`ನಾನು ಅವರಿಂದ ದೂರವಾಗಬೇಕು ಎಂದು ನಿರ್ಧರಿಸಿದ್ದೆ. ಆರ್.ವಿ ಕಾಲೇಜ್ ಬಳಿ ನನ್ನನ್ನು ಕರೆದುಕೊಂಡು ಹೋದ ಅವರು, ಬಾಡಿಗೆ ಮನೆ ನೋಡಿದ್ದೇನೆ, ಹೊಸದಾಗಿ ಬದುಕು ನಡೆಸೋಣ. ಇನ್ನು ಮುಂದೆ ನನ್ನಿಂದ ಸಮಸ್ಯೆಗಳು ಬರುವುದಿಲ್ಲ ಎಂದು ಮನವೊಲಿಸುವ ಪ್ರಯತ್ನ ನಡೆಸಿದರು. ಕುಬಾಸಿಪಾಳ್ಯ ಸಮೀಪ ನನ್ನ ಮುಖಕ್ಕೆ ಆಸಿಡ್ ಎರಚಿದರು. ಕೂಡಲೇ ಸಾರ್ವಜನಿಕರು ನನ್ನನ್ನು ಆಸ್ಪತ್ರೆಗೆ ಸಾಗಿಸಿದರು~ ಎಂದು ಗೌರಮ್ಮ ಹೇಳಿದರು.

`ಕುಮಾರ್ಗೆ ತುಂಬಾ ಗೌರವ ಕೊಡುತ್ತಿದ್ದೆ. ನಾನು ಯಾರೊಂದಿಗೂ ಅನೈತಿಕ ಸಂಬಂಧ ಹೊಂದಿಲ್ಲ. ತಾನು ಅನಾಥನೆಂದು ಹೇಳಿಕೊಂಡು ನನ್ನನ್ನು ಪ್ರೀತಿಸಿ ಕಾಮಾಕ್ಷಿಪಾಳ್ಯದ ದೇವಸ್ಥಾನದಲ್ಲಿ ವಿವಾಹವಾದರು. ಮೂರನೇ ಮಗ ತೇಜಸ್ ಹುಟ್ಟಿದ ನಂತರ ಕುಮಾರ್ ನನಗೆ ಕಿರುಕುಳ ನೀಡಲು ಆರಂಭಿಸಿದರು. ಪ್ರತಿನಿತ್ಯ ಮದ್ಯಪಾನ ಮಾಡಿಕೊಂಡು ಮನೆಗೆ ಬರುತ್ತಿದ್ದ ಅವರು, ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು~ ಎಂದು ಗೌರಮ್ಮ ಅಳಲು ತೋಡಿಕೊಂಡರು.

`ಆರು ವರ್ಷಗಳ ಹಿಂದೆ ಮಕ್ಕಳನ್ನು ದೂರ ಮಾಡಿದರು. ಅವರನ್ನು ಭೇಟಿ ಮಾಡಲು ನನಗೆ ಬಿಡುತ್ತಿರಲಿಲ್ಲ. ಕುಮಾರ್ನನ್ನು ಯಾವತ್ತಿಗೂ ಕ್ಷಮಿಸುವುದಿಲ್ಲ. ಇನ್ನು ಮುಂದೆ ನನ್ನ ಮಕ್ಕಳೊಂದಿಗೆ ಬದುಕುತ್ತೇನೆ~ ಎಂದು ಗೌರಮ್ಮ ವಿಶ್ವಾಸದ ಮಾತುಗಳನ್ನಾಡಿದರು.

`ಘಟನೆಯಲ್ಲಿ ಗೌರಮ್ಮ ಅವರ ದೇಹ ಶೇ. 20 ರಷ್ಟು ಸುಟ್ಟು ಹೋಗಿದೆ. ಅವರಿಗೆ ಇನ್ನೂ ಐದಾರು ದಿನದ ಚಿಕಿತ್ಸೆಯ ಅವಶ್ಯಕತೆ ಇದೆ. ಅವರ ಜೀವಕ್ಕೆ ಅಪಾಯವೇನು ಇಲ್ಲ~ ಎಂದು ವೈದ್ಯರಾದ ವೆಂಕಟಸ್ವಾಮಿ ತಿಳಿಸಿದರು.

ಘಟನೆ ನಂತರ ಆರೋಪಿ ಪತ್ತೆ ಕಾರ್ಯ ನಡೆಸಿದ ಪೊಲೀಸರು, ಕುಮಾರ್ ಮಾಡಿರುವ ಫೋನ್ ಕರೆಗಳ ವಿವರಗಳ ಮೂಲಕ ಆತನನ್ನು ಬಿಡದಿಯಲ್ಲಿ ಬಂಧಿಸಿದ್ದಾರೆ.ಆರೋಪಿ ವಿರುದ್ಧ ಕೊಲೆ ಯತ್ನ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೊಲ್ಲುವ ಉದ್ದೇಶ ಇರಲಿಲ್ಲ: ಆರೋಪಿ ಪತಿ ಪ್ರತಿಕ್ರಿಯೆ

`ಪತ್ನಿಯನ್ನು ಕೊಲ್ಲುವ ಉದ್ದೇಶ ನನ್ನದಾಗಿರಲಿಲ್ಲ. ಆಕೆಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದೆ. ನನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರೊಂದಿಗೆ ಇರುವಂತೆ ಬೇಡಿಕೊಂಡೆ. ಈ ಕೋರಿಕೆಗೆ ಆಕೆ ಒಪ್ಪದ ಹಿನ್ನೆಲೆಯಲ್ಲಿ ಆಸಿಡ್ ಎರಚಿದೆ. ಇದಕ್ಕಾಗಿ ನನಗೆ ಶಿಕ್ಷೆಯಾದರೂ ಚಿಂತೆ ಇಲ್ಲ~ ಎಂದು ಆರೋಪಿ ಕುಮಾರ್ ಪ್ರತಿಕ್ರಿಯಿಸಿದ್ದಾನೆ.
`ನಾಲ್ಕು ವರ್ಷದ ಹಿಂದೆಯೇ ನನ್ನ ಪತ್ನಿ ನನ್ನಿಂದ ದೂರಾಗಿದ್ದಳು.

ಆಕೆ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಚಿತರು ಹೇಳಿದ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಿದೆ. ಶಂಕರ್ ಹಾಗೂ ರುದ್ರಪ್ಪ ಎಂಬುವರೊಡನೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದ ಕೂಡಲೇ ನನಗೆ ಆಘಾತವಾಯಿತು~ ಎಂದು ಆರೋಪಿ ಹೇಳಿದ್ದಾನೆ. `ನಾಲ್ಕು ದಿನಗಳ ಹಿಂದೆ ಆಸಿಡ್ ತೆಗೆದುಕೊಂಡು ಬಂದಿದ್ದೆ. ಅಂದುಕೊಂಡಂತೆ ಆಸಿಡ್ ಎರಚಿದೆ. ಮುಂದೆ ನನ್ನ ಪತ್ನಿಗೆ ಹಾಗೂ ಮಕ್ಕಳಿಗೆ ತೊಂದರೆ ಕೊಡುವುದಿಲ್ಲ~ ಎಂದು ತಿಳಿಸಿದನು.

ರಾಜ್ಯದಲ್ಲಿ ಒಟ್ಟು 65 ದಾಳಿ: ಮಹಿಳೆಯರೇ ಬಲಿಪಶು...!

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 65ಕ್ಕೂ ಹೆಚ್ಚು ಆಸಿಡ್ ದಾಳಿ ಪ್ರಕರಣಗಳು ನಡೆ ದಿದ್ದು, ಇದರಲ್ಲಿ ಬಹುಪಾಲು ಬೆಂಗಳೂರಿ ನಲ್ಲೇ ನಡೆದಿವೆ. ನಗರದಲ್ಲಿ ಈವರೆಗೆ 32ಕ್ಕೂ ಹೆಚ್ಚು ಆಸಿಡ್ ದಾಳಿಗಳು ನಡೆದಿವೆ.

ನಗರದ ಬಿಷಪ್ ಕಾಟನ್ ಬಾಲಕಿಯರ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕಾರ್ತಿಕಾ (22) ಎಂಬುವರ ಮೇಲೆ 2008 ರ ಅಕ್ಟೋಬರ್ನಲ್ಲಿ ಆಸಿಡ್ ದಾಳಿ ನಡೆದಿತ್ತು. ಕೇರಳದ ರಾಕೇಶ್ ಎಂಬಾತ ಕಾರ್ತಿಕಾ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ. ಕಾರ್ತಿಕಾ, ಆತನನ್ನು ಪ್ರೀತಿಸಲು ನಿರಾಕರಿಸಿದ್ದ ಕಾರಣಕ್ಕೆ ರಾಕೇಶ್ ಈ ಕೃತ್ಯ ಎಸಗಿದ್ದ.

ಕಾರ್ತಿಕ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಪತ್ನಿ ನೀಲ್ಷು ಅವರ ಮೇಲೆ ದುಷ್ಕರ್ಮಿಗಳ ಮೂಲಕ ಆಸಿಡ್ ದಾಳಿ ನಡೆಸಿದ್ದ. ಕಾರ್ತಿಕ್, ಸ್ನೇಹಿತರಾದ ಸಾದತ್ ಮತ್ತು ಚಾಂದ್ ಎಂಬುವರಿಗೆ 40 ಸಾವಿರ ರೂಪಾಯಿ ಹಣ ಕೊಟ್ಟು ಪತ್ನಿ ನೀಲ್ಷು ಅವರ ಮೇಲೆ ಆಸಿಡ್ ಹಾಕಿಸಿದ್ದ. ನಗರದಲ್ಲಿ ನಡೆದಿರುವ ಆಸಿಡ್ ದಾಳಿಗಳ ವಿವರ ಇಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.