ಗುರುವಾರ , ಆಗಸ್ಟ್ 6, 2020
24 °C

ಪರಮ್‌ಜಿತ್ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಮ್‌ಜಿತ್ ಅಧಿಕಾರ ಸ್ವೀಕಾರ

ಬೆಂಗಳೂರು: ಭಾರತೀಯ ವಾಯುಪಡೆಯ ತರಬೇತಿ ಕೇಂದ್ರದ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಪರಮ್‌ಜಿತ್ ಸಿಂಗ್ ಗಿಲ್ ಅವರು ಕೇಂದ್ರದ ನಿವೃತ್ತ ಮುಖ್ಯಸ್ಥ ಏರ್ ಮಾರ್ಷಲ್ ರಾಜಿಂದರ್ ಸಿಂಗ್ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು.ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಗಿಲ್ 1975ರಲ್ಲಿ ವಾಯುಪಡೆಗೆ ಆಯ್ಕೆಯಾದರು. ವೃತ್ತಿ ಜೀವನ ಆರಂಭದ ದಿನಗಳಲ್ಲಿ ಯುದ್ಧ ವಿಮಾನಗಳ ಚಾಲನೆ ಹಾಗೂ ನಿರ್ವಹಣೆಯಲ್ಲಿ ನೈಪುಣ್ಯ ಸಾಧಿಸಿದ ಅವರು ಮಿಗ್  23 ಬಿಎನ್ ಸೇರಿ ದಂತೆ ಅತ್ಯಾಧು ನಿಕ ಯುದ್ಧ  ವಿಮಾನಗಳ  ಚಾಲನೆಯಲ್ಲಿ  ವಿಶೇಷ ಪರಿಣತಿ  ಹೊಂದಿದ್ದಾರೆ.ವಡ್ಸಾರ್  ವಾಯುಪಡೆ  ಕೇಂದ್ರದ ಕಮಾಂಡೆಂಟ್, ಸಿಕಂದರಾಬಾದ್‌ನ ವಾಯುಪಡೆ ಕಾಲೇಜಿನ ಉಪ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದ ಗಿಲ್ 2009ರಲ್ಲಿ ರಾಷ್ಟ್ರಪತಿಯವರ `ಅತಿ ವಿಶಿಷ್ಟ ಸೇವಾ ಪದಕ' ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.