ಜಾತಿ ಆಧಾರಿತ ಶೋಷಣೆಗೆ ಗುರಿಯಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರಿಗೆ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಅದನ್ನು ಆಚರಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾರಲಾಗಿದೆ. ಆದರೆ ವಾಸ್ತವವಾಗಿ ಇದೆಲ್ಲ ಆಚರಣೆಯಲ್ಲಿದೆಯೇ ಎಂದು ನೋಡಿದಾಗ ಅಚ್ಚರಿಯಾಗುತ್ತದೆ.

1950ರಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು (ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್-ಪಿ.ಸಿ.ಆರ್) ಜಾರಿಗೆ ತರಲಾಯಿತು. ಆದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. 1989ರಲ್ಲಿ ಸಂಸತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ-ಪ್ರಿವೆನ್ಷನ್ ಆಫ್ ಅಟ್ರಾಸಿಟೀಸ್) ಕಾಯ್ದೆಯನ್ನು ಅಂಗೀಕರಿಸಿತು. ಅದೂ ಪ್ರಯೋಜನವಾಗಿಲ್ಲ.

ಈ ಕಾಯ್ದೆಯನ್ನು ಅಂಗೀಕರಿಸಿ 20 ವರ್ಷಗಳಾಗಿವೆ; ನಿಯಮಗಳು ರಚನೆಯಾಗಿ, ಜಾರಿಗೆ ಬಂದು 15 ವರ್ಷಗಳಾಗಿವೆ. ಆದರೂ, ನ್ಯಾಷನಲ್ ಕ್ರೈಂ ರಿಕಾರ್ಡ್ ಬ್ಯೂರೊ ಪ್ರಕಾರ, ಪರಿಶಿಷ್ಟ ಜಾತಿಗಳವರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಆರನೇ ಸ್ಥಾನ ಇದೆ. ಪರಿಶಿಷ್ಟ ಪಂಗಡಗಳವರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಇದಕ್ಕೆ ಎಂಟನೇ ಸ್ಥಾನ ಇದೆ. ಈ ಜಾತಿ ಮತ್ತು ಪಂಗಡಗಳವರ ಮೇಲೆ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಸರಾಸರಿಯಲ್ಲಿ ಕರ್ನಾಟಕದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುತ್ತಿರುವುದು ದುರದೃಷ್ಟಕರ.

ಕರ್ನಾಟಕ ಸರ್ಕಾರವೇ 2007ರಲ್ಲಿ ಗುರುತಿಸಿರುವಂತೆ ‘ರಾಜ್ಯದ ಒಟ್ಟು 29 ಜಿಲ್ಲೆಗಳ ಪೈಕಿ 15 ಜಿಲ್ಲೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳವರ ಮೇಲೆ ದೌರ್ಜನ್ಯ ನಡೆಯುವ ಸೂಕ್ಷ್ಮ ಜಿಲ್ಲೆಗಳು’ ಎಂಬ ಹಣೆಪಟ್ಟಿ ಹೊತ್ತಿವೆ. ಈ ಜನರ ಮೇಲೆ ದೌರ್ಜನ್ಯ ನಡೆದು ನೋಂದಾವಣೆಗೊಂಡಿರುವ ಒಟ್ಟು ಪ್ರಕರಣಗಳು 2007ರಲ್ಲಿ 1157; 2008ರಲ್ಲಿ 1543 ಮತ್ತು 2009ರಲ್ಲಿ 1450.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಪ್ರಕಾರ ರಾಜ್ಯ ಮಟ್ಟದಲ್ಲಿ ರಾಜ್ಯ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ (ಸ್ಟೇಟ್ ವಿಜಿಲೆನ್ಸ್ ಅಂಡ್ ಮಾನಿಟರಿಂಗ್ ಕಮಿಟಿ-ಎಸ್ವಿಎಂಸಿ) ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ, ವಿವಿಧ ಜಿಲ್ಲೆಗಳಲ್ಲಿ ಈ ವರ್ಗಗಳ ಜನರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಆಡಳಿತಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡಬೇಕು. ಇದಕ್ಕೆ ಮುಖ್ಯಮಂತ್ರಿಯವರೇ ಅಧ್ಯಕ್ಷರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೇ ಸದಸ್ಯ ಕಾರ್ಯದರ್ಶಿ. ಇದರಲ್ಲಿ ಪೊಲೀಸ್ ಇಲಾಖೆ ಗೃಹ ಇಲಾಖೆ ಕಾರ್ಯದರ್ಶಿಗಳು, ಪ್ರಾಸಿಕ್ಯೂಷನ್ಸ್ ಇಲಾಖೆ ನಿರ್ದೇಶಕರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಲೋಕಸಭೆ ಹಾಗೂ ವಿಧಾನಸಭಾ ಸದಸ್ಯರು ಇದ್ದಾರೆ. ಇವರೆಲ್ಲ ಇದ್ದರೂ ವಾಸ್ತವವಾಗಿ ಈ ಸಮಿತಿ ಹಲ್ಲಿಲ್ಲದ ಹಾವಿನಂತಾಗಿರುವುದು ಈ ವರ್ಗಗಳ ಬಾಯುಪಚಾರಕ್ಕಷ್ಟೇ ಎನಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ಸಮಿತಿ 2007ರಿಂದ ಎರಡೂವರೆ ವರ್ಷ ಕಾಲ ಸಭೆಯನ್ನೇ ನಡೆಸಿಲ್ಲ. ಅಂದ ಮಾತ್ರಕ್ಕೆ ಈ ಅವಧಿಯಲ್ಲಿ ಈ ಜನರ ಮೇಲೆ ಎಲ್ಲಿಯೂ ದೌರ್ಜನ್ಯಗಳು ನಡೆದಿಲ್ಲ ಎಂದರ್ಥವಲ್ಲ. 2010ರ ಸೆಪ್ಟೆಂಬರ್ನಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿಯವರೇ ವಿಷಾದ ವ್ಯಕ್ತಪಡಿಸಿದರು; ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದೆಂಬ ಭರವಸೆಯೂ ಅವರಿಂದ ಬಂತು. ಆದರೆ, ಅವರ ಬಾಯಿಮಾತಿನ ಭರವಸೆ ಗಾಳಿಯಲ್ಲಿ ಕರಗಿಹೋಯಿತೆಂದೇ ತಿಳಿಯಬೇಕಿದೆ.

ಜಿಲ್ಲಾ ಮಟ್ಟದಲ್ಲಿಯೂ ‘ಜಿಲ್ಲಾ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ’ (ಡಿಸ್ಟಿಕ್ಟ್ ವಿಜಿಲೆನ್ಸ್ ಅಂಡ್ ಮಾನಿಟರಿಂಗ್ ಕಮಿಟಿ- ಡಿವಿಎಂಸಿ) ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ವರ್ಗಗಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇದಕ್ಕೆ ಜಿಲ್ಲಾಧಿಕಾರಿಯವರೇ ಅಧ್ಯಕ್ಷರು. ಆದರೆ ಈ ಸಭೆಗಳು ಯಾವ ವರ್ಷವೂ ಜಿಲ್ಲೆಗಳಲ್ಲಿ ನಡೆದ ಉದಾಹರಣೆಗಳಿಲ್ಲ.

ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ವಿಚಾರಣೆ ಮಾಡಲು ಈಗ ಏಳು (ಬೆಳಗಾವಿ, ಮೈಸೂರು, ಕೋಲಾರ, ರಾಯಚೂರು, ಬಿಜಾಪುರ, ಗುಲ್ಬರ್ಗ ಮತ್ತು ತುಮಕೂರು) ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ವಾಸ್ತವದಲ್ಲಿ ಇವುಗಳು ಸ್ವತಂತ್ರ ನ್ಯಾಯಾಲಯಗಳಲ್ಲ. ಹಾಲಿ ಈ ಜಿಲ್ಲೆಗಳಲ್ಲಿ ಇರುವ ನ್ಯಾಯಾಲಯಗಳಿಗೇ ‘ವಿಶೇಷ ನ್ಯಾಯಾಲಯಗಳು’ ಎಂಬ ಬೋರ್ಡ್ ಹಾಕಲಾಗಿದೆ. ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯಬಲ್ಲ ಸೂಕ್ಷ್ಮ ಜಿಲ್ಲೆಗಳು ಎಂದು ಸರ್ಕಾರವೇ ಗುರುತಿಸಿರುವುದು 15 ಜಿಲ್ಲೆಗಳನ್ನು; ಈ ಎಲ್ಲ ಜಿಲ್ಲೆಗಳಲ್ಲಾದರೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು ಸರ್ಕಾರದ ಕರ್ತವ್ಯ; ಆದರೆ ಈ ಬಗ್ಗೆ ಅದು ನಿರ್ಲಕ್ಷ್ಯವನ್ನೇ ತೋರುತ್ತಾ ಬಂದಿರುವುದು ಈ ವರ್ಗಗಳ ರಕ್ಷಣೆ ಬಗೆಗೆ ಇರುವ ನಿಜವಾದ ಕಾಳಜಿ ಎಂತಹದ್ದು ಎನ್ನುವುದನ್ನು ತೋರಿಸುತ್ತದೆ.

2008ರಲ್ಲಿ 1289 ದೌರ್ಜನ್ಯ ಪ್ರಕರಣಗಳು ಇತ್ಯರ್ಥ ಆದವು. ಈ ಪೈಕಿ 36 ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರಿಗೆ ಶಿಕ್ಷೆ ಆಯಿತು; 980 ಪ್ರಕರಣಗಳಲ್ಲಿ ಆರೋಪ ಸಾಬೀತಾಗಲಿಲ್ಲ. ಆರೋಪಿಗಳಿಗೆ ಶಿಕ್ಷೆ ಆಗಲಿಲ್ಲ. ಇತರ ಕಾರಣಗಳಿಂದಾಗಿ 273 ಪ್ರಕರಣಗಳಲ್ಲೂ ಆರೋಪಿಗಳಿಗೆ ಶಿಕ್ಷೆ ಆಗಲಿಲ್ಲ.

ಈ ಒಟ್ಟು 1289 ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ 146 ಪ್ರಕರಣಗಳು ಗುಲ್ಬರ್ಗ ಜಿಲ್ಲೆಯಲ್ಲಿ ನಡೆದಿದ್ದವು. ನಂತರದ ಸ್ಥಾನಗಳನ್ನು ಕ್ರಮವಾಗಿ ಬೆಂಗಳೂರು ನಗರ ಜಿಲ್ಲೆ (141 ಪ್ರಕರಣಗಳು) ಮತ್ತು ಬಿಜಾಪುರ ಜಿಲ್ಲೆ (109 ಪ್ರಕರಣಗಳು) ಪಡೆದುಕೊಂಡವು!
2007ರಲ್ಲಿ ಕೋರ್ಟಿನ ಮುಂದೆ 235 ಪ್ರಕರಣಗಳು ವಿಚಾರಣೆಗೆ ಬಂದವು. ಈ ಪೈಕಿ ಆರೋಪ ಸಾಬೀತಾಗಿದ್ದು ಕೇವಲ ಶೇ 2.55ರಷ್ಟು ಪ್ರಕರಣಗಳಲ್ಲಿ! ಅಂದರೆ ಶೇ 88.94ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ನಿರ್ದೋಷಿ ಎಂದು ತೀರ್ಮಾನವಾಯಿತು!!
2008ರಲ್ಲಿ 262 ಪ್ರಕರಣಗಳು ವಿಚಾರಣೆಗೆ ಒಳಪಟ್ಟವು; ಶೇ 3.44ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಯಿತು. ಶೇ 87.79ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡರು. 2009ರಲ್ಲಿ 65 ಪ್ರಕರಣಗಳನ್ನು ಕೋರ್ಟು ವಿಚಾರಣೆಗೆ ತೆಗೆದುಕೊಂಡಿತು; ಶೇ 4.62ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿ, ಶೇ 55.38 ಪ್ರಕರಣಗಳಲ್ಲಿ ಆರೋಪಿಗಳು ಬಿಡುಗಡೆಯಾದರು.

ದೌರ್ಜನ್ಯ ಪ್ರಕರಣಗಳ ಬಗ್ಗೆ ಎಫ್.ಐ.ಆ. ದಾಖಲಾದ ಬಳಿಕವೂ ಶೇ 25ರಷ್ಟು ಪ್ರಕರಣಗಳನ್ನು ‘ಸುಳ್ಳು ಪ್ರಕರಣಗಳು’ ಎಂದು ತೀರ್ಮಾನಿಸಿ, ಆರೋಪ ಪಟ್ಟಿ ಹಾಕುವುದನ್ನು ಕೈಬಿಡಲಾಗುತ್ತಿದೆ. ಶೇ 17ರಿಂದ 62ರಷ್ಟು ಪ್ರಕರಣಗಳಲ್ಲಿ ಒಂದೊಂದು ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ಬಿ ವರದಿ’ಯನ್ನು ಸಲ್ಲಿಸಲಾಗಿದೆ. ದೌರ್ಜನ್ಯ ಪ್ರಕರಣಗಳ ಬಗ್ಗೆ ನಡೆಸುವ ತನಿಖೆಯನ್ನು 30 ದಿನಗಳ ಒಳಗೆ ಮುಗಿಸಬೇಕು ಎಂಬ ನಿರ್ದೇಶನ ಇದೆ. ಆದರೂ ಎರಡುಮೂರು ವರ್ಷಗಳ ಹಿಂದೆ ನೋಂದಾಯಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ತನಿಖೆ ನಡೆಯುತ್ತಿದೆ’ ಎಂಬ ಷರಾ ಬರೆದು, ಇಡಲಾಗುತ್ತಿದೆ.

ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟೋ ಪೊಲೀಸ್ ಠಾಣೆಗಳೇ ಆರೋಪಿಗಳೊಂದಿಗೆ ರಾಜಿ ಮಾಡಿಸಲು ಒಲವು ತೋರುತ್ತವೆ; ಇದಕ್ಕಾಗಿ ಆಮಿಷ, ಭಯ ಒಡ್ಡಲಾಗುತ್ತದೆ. ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷ್ಯ ನೀಡುವವರು ಮತ್ತು ದೌರ್ಜನ್ಯಕ್ಕೆ ಒಳಗಾದವರು ವಿಚಾರಣೆ ದಿನ ಕೋರ್ಟಿಗೆ ಬಂದು ಹೋಗಲು ಪ್ರಯಾಣ ಮತ್ತು ದಿನಭತ್ಯೆ ಪಡೆಯಲು ಅರ್ಹರು. ಈ ಬಾಬ್ತು ಎಷ್ಟು ಹಣ ಅನುದಾನದಲ್ಲಿ ಹಂಚಿಕೆಯಾಗಬೇಕು ಎಂಬ ಬಗ್ಗೆ ಇಲಾಖೆ ‘ಅಗತ್ಯ ಆಧರಿಸಿ’ ಪ್ರಸ್ತಾವನೆಯನ್ನು ನೀಡದೆ ‘ವಾಡಿಕೆ’ ಆಧಾರದಲ್ಲಿ ಪ್ರಸ್ತಾವನೆಯನ್ನು ನೀಡುವ ಮೂಲಕ ದಿವ್ಯ ನಿರ್ಲಕ್ಷ್ಯವನ್ನು ಮೆರೆದಿದೆ.

ಬೆಂಗಳೂರು ನಗರ, ಮೈಸೂರು, ತುಮಕೂರು, ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ 2008 ಮತ್ತು 2009 ಎರಡೂ ವರ್ಷಗಳಲ್ಲಿ ಒಂದೇ ಒಂದು ದೌರ್ಜನ್ಯ ಪ್ರಕರಣವೂ ಕೋರ್ಟಿನ ಮೆಟ್ಟಿಲು ಏರಲಿಲ್ಲ. ಈ ಎರಡು ವರ್ಷ ಕಾಲ ಈ ಐದು ಜಿಲ್ಲೆಗಳಲ್ಲಿ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಯಲಿಲ್ಲ. ಏಕೆಂದರೆ ಅಲ್ಲಿ ಆ ಎರಡು ವರ್ಷ ಎಲ್ಲಾ ಪ್ರಕರಣಗಳು ತನಿಖಾ ಹಂತದಲ್ಲಿದ್ದವು; ನೋಂದಾವಣೆಗೊಂಡ ಪ್ರಕರಣಗಳು ಸುಳ್ಳೆಂದೋ, ಪ್ರಕರಣಗಳಲ್ಲಿ ಯಾವುದೇ ಹುರುಳಿಲ್ಲ ಎಂದೋ ‘ಬಿ ವರದಿ’ಯೊಂದಿಗೆ ಮುಚ್ಚಿ ಹಾಕಲ್ಪಟ್ಟಿದ್ದವು. ವಿಪರ್ಯಾಸವೆಂದರೆ ರಾಜ್ಯದ ಒಟ್ಟು ಏಳು ವಿಶೇಷ ನ್ಯಾಯಾಲಯಗಳ ಪೈಕಿ ಎರಡು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ!

ಈ ಬಗ್ಗೆ ಇಲಾಖೆ ಮತ್ತು ಸರ್ಕಾರ ಆತ್ಮವಿಮರ್ಶೆ ಮಾಡಿಕೊಳ್ಳಬಾರದೇ? ತನ್ನ ಕಾರ್ಯವಿಧಾನದಲ್ಲಿ ದೋಷವೇನಾದರೂ ಇದೆಯೇ ಎಂದು ಅದು ಚಿಂತಿಸಬೇಕಿತ್ತು. ಅಂತಹ ಯಾವುದೇ ಲಕ್ಷಣವೂ ಕಾಣದಿರುವುದು ದುರದೃಷ್ಟಕರ.

ಪರಿಹಾರ ಏನು?: ಜಾತಿ ಕಾರಣಕ್ಕೆ ದೌರ್ಜನ್ಯಕ್ಕೆ ಗುರಿಯಾಗುವವರಿಗೆ ನ್ಯಾಯ ಒದಗಿಸಲು ಕೆಲವಾದರೂ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು:

(1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ಕೂಲಂಕಷ ವಿಮರ್ಶೆಗೆ ಒಳಪಡಿಸಬೇಕು. ಇದುವರೆಗಿನ ಆಧಾರದಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಸಮಾಜದ ಬಗೆಗೆ ಸಮಾನ ಕಾಳಜಿ ಇರುವ ದಲಿತ ಚಿಂತಕರನ್ನು ಮತ್ತು ಗ್ರಾಮಗಳಲ್ಲಿನ ವಾಸ್ತವ ಸಾಮಾಜಿಕ ಸ್ಥಿತಿಯನ್ನು ದಿನ ನಿತ್ಯ ಕಾಣುತ್ತಿರುವವರನ್ನು ತೊಡಗಿಸಿಕೊಳ್ಳಬೇಕು.

(2) ಈಗ ಇರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು; ಪ್ರತಿ ವರ್ಷದ ಪ್ರಕರಣಗಳನ್ನು ಪರಾಮರ್ಶೆಗೆ ಗುರಿಪಡಿಸಬೇಕು; ಸರ್ಕಾರೇತರ ಸಂಸ್ಥೆಯಿಂದ ಅಭಿಪ್ರಾಯವನ್ನು ಕೋರಿ, ದಾಖಲಿಸಬೇಕು.

(3) ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ನೇಮಕಾತಿ ಪಾರದರ್ಶಕವಾಗಿರಬೇಕು; ದಕ್ಷತೆ, ಕಾಳಜಿ ಮತ್ತು ಅನುಭವಗಳೇ ಅರ್ಹತೆಗಳಾಗಬೇಕು; ಇವರ ಕಾರ್ಯಶೈಲಿ ತನಿಖೆಗೆ ಒಳಪಡಬೇಕು. ಅದಕ್ಷ, ಕಾಳಜಿಯಿಲ್ಲದ ಮತ್ತು ಕಾನೂನಿನ ಆಶಯವನ್ನು ಈಡೇರಿಸದ ಪ್ರಾಸಿಕ್ಯೂಟರ್ಗಳನ್ನು ವಜಾ ಮಾಡಬೇಕು.

(4) ನ್ಯಾಯಾಲಯಗಳಲ್ಲಿ ‘ಇಂಟೆಂಟ್’, ‘ಮಾಹಿತಿ’, ‘ವಿಲ್ಫುಲ್ನೆಸ್’ ಮುಂತಾದವುಗಳನ್ನು ಸಾಬೀತುಪಡಿಸುವುದಕ್ಕೆ ಒತ್ತು ನೀಡಲ್ಪಡದೆ, ದೌರ್ಜನ್ಯ ಪ್ರಕ್ರಿಯೆ ನಡೆದಿರುವುದೇ ಪ್ರಮುಖ ಮತ್ತು ಪರ್ಯಾಪ್ತ ಅಂಶವಾಗಬೇಕು.

(5) ಪ್ರತಿಯೊಂದು ಜಿಲ್ಲೆಯಲ್ಲಿ ಸ್ವತಂತ್ರ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕು.

(6) ದೌರ್ಜನ್ಯ ಪ್ರಕರಣಗಳು ಒಂದು ವರ್ಷದಲ್ಲಿ ಸಂಪೂರ್ಣ ವಿಚಾರಣೆ ಮುಗಿದು, ತೀರ್ಪು ಹೊರಬೀಳಬೇಕು.

(7) ದೌಜ್ಯನ್ಯಕ್ಕೆ ಒಳಗಾದವರು ಮತ್ತು ಪ್ರಕರಣಗಳಲ್ಲಿ ಸಾಕ್ಷಿ ಹೇಳುವವರು ಎದುರಿಸುತ್ತಿರುವ ಜೀವನ ಅಭದ್ರತೆ ಮತ್ತು ಸಂಕಷ್ಟವನ್ನು ನಿವಾರಿಸಬೇಕು ಮತ್ತು ಅವರ ಮೇಲೆ ಒತ್ತಡ ಬಾರದಂತೆ ಅವರನ್ನು ರಕ್ಷಿಸಬೇಕು.

(8) ಕಾಯ್ದೆಯಂತೆ ನಡೆದುಕೊಳ್ಳದ ಅಧಿಕಾರಿಗಳ ಮೇಲೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರುಗಳ ವಾರ್ಷಿಕ ಗೌಪ್ಯ ವರದಿಯಲ್ಲಿ ಪ್ರತಿಕೂಲ ಷರಾ ನಮೂದಾಗಬೇಕು.

(9) ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಸಭೆಗಳನ್ನು ಸಕಾಲಕ್ಕೆ ನಡೆಸದೇ ಹೋದ ತಪ್ಪಿಗಾಗಿ ಕ್ರಮವಾಗಿ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಬೇಕು. ಇದಲ್ಲದೆ ಪರಿಶಿಷ್ಟರೂ ನಿಮ್ಮಂತೆ ಮನುಷ್ಯರು ಎನ್ನುವಂತೆ ಅವರನ್ನು ಸಮಾನರನ್ನಾಗಿ ಕಾಣುವ ಜಾಗೃತಿಯನ್ನು ಬೇರೆ ಜಾತಿಗಳಲ್ಲಿ ಉಂಟು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಅದಕ್ಕಾಗಿ ದುಡಿಯುವ ದೊಡ್ಡ ಮನಸ್ಸಿನ ಜನರ ಸಹಾಯ ಪಡೆಯಬೇಕು.

(ಲೇಖಕರು ಬುದ್ಧ, ಅಂಬೇಡ್ಕರ್ ಮತ್ತು ಲೋಹಿಯಾ ಚಿಂತಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.