ಅದೊಂಥರಾ ವಾಸನೆ. ಸಹಪಾಠಿಗಳಲ್ಲಿ ಒಬ್ಬನಂತೂ ಅದನ್ನು ಪರೀಕ್ಷೆಯ ವಾಸನೆ ಎಂದು ಕರೆಯುತ್ತಿದ್ದ. ಅದನ್ನು ಕೇಳಿದ ಇನ್ನೊಬ್ಬ ಗೆಳತಿ ವಾಸನೆಗೂ ಪರಿಮಳಕ್ಕೂ ಇರುವ ವ್ಯತ್ಯಾಸದ ಕುರಿತು ಒಂದು ಉಪನ್ಯಾಸ ಶುರುವಿಟ್ಟುಕೊಳ್ಳುತ್ತಿದ್ದಳು.

ಶಿವರಾತ್ರಿಗೆ ಒಂದೆರಡು ವಾರ ಮುಂಚಿನಿಂದಲೇ ಆ ವಾಸನೆ ಅಥವಾ ಪರಿಮಳ ಶುರುವಾಗುತ್ತಿತ್ತು. ಹಿಮ ಮೆತ್ತಿದ ಮಣ್ಣಿನ ಮೇಲೆ ಸೂರ್ಯ ರಶ್ಮಿ ಬಿದ್ದಮೇಲೆ ಅದು ಆವಿಯಾಗುವ ದಿವ್ಯವಾದ ಪರಿಮಳ ಅದು. ಪರಿಮಳದ ಅಥವಾ ವಾಸನೆಯ ಚರ್ಚೆ ಕಾಲೇಜು ಹೈಕಳಲ್ಲಿ ವಿಚಿತ್ರವಾದ ತಿರುವುಗಳನ್ನು ಪಡೆದುಕೊಳ್ಳುತ್ತಿತ್ತು. ಕೆಲವರಿಗೆ ಪೆಟ್ರೋಲ್ ವಾಸನೆ ಇಷ್ಟ. ರಾತ್ರಿರಾಣಿ ಹೂವಿನ ಘಮದ ಅನುಭೂತಿಯ ಬಗೆಗೆ ಇನ್ನೊಬ್ಬಳು ಭಾಷಣ ಹೊಡೆಯುತ್ತಿದ್ದಳು.

ಇಷ್ಟದ ಹುಡುಗನ ಬೆವರಿಗೂ ಒಂದು ಆಕರ್ಷಣೆಯಿದೆ ಎಂದು ಇನ್ನೊಬ್ಬಳು ಹೇಳಿ, ಬೈಯಿಸಿಕೊಳ್ಳುತ್ತಿದ್ದಳು. ವಾಸನೆಯ ಅಲರ್ಜಿ ಕಡೆಗೆ ಮಾತು ಹೊರಳುತ್ತಿತ್ತು. ಮಲ್ಲಿಗೆ ಕೆಲವರಿಗೆ ಆಗಿಬರುವುದಿಲ್ಲ. ಸಂಪಿಗೆ ವಾಸನೆ ಆಗದವರೂ ಇದ್ದಾರೆ. ಹೀಗೆ ಮಾತು ಮಾತಿಗೂ ಒಂದೊಂದು ತಿರುವು. ಅದೇ ಹೊತ್ತಿಗೆ ಸಿನಿಮಾ ಮೋಹಿಯೊಬ್ಬ ‘ಪರ್ಫ್ಯೂಮ್’ ಎಂಬ ಸಿನಿಮಾದಲ್ಲಿ ಮನುಷ್ಯರ ಚರ್ಮದ ಗ್ರಂಥಿಗಳಿಂದ ತೆಗೆದ ಅಂಶಗಳಿಂದ ಒಬ್ಬ ದಿವ್ಯವಾದ ಪರಿಮಳವನ್ನು ಹೇಗೆ ಸಿದ್ಧಪಡಿಸುತ್ತಾನೆ ಎಂಬುದನ್ನು ಬಣ್ಣಿಸತೊಡಗಿದ.

ಮಾತು ಪರೀಕ್ಷೆಯ ವಾಸನೆಯತ್ತ ಮರಳಲೇಬೇಕಿತ್ತು. ಯಾಕೆಂದರೆ, ಪರೀಕ್ಷೆ ಸಮೀಪಿಸುತ್ತಿದ್ದ ಕಾಲವದು. ಕಂಬೈನ್ಡ್ ಸ್ಟಡಿಗೆ ಈಗಿನಷ್ಟು ಮಡಿವಂತಿಕೆ ಆಗ ಇರಲಿಲ್ಲ. ಚಳಿಗಾಲ ಕಳೆದು ಬೇಸಿಗೆ ಬರುವ ಸಂದರ್ಭ ಅದು. ಹುತ್ತದ ಹಸಿಮಣ್ಣು ಹೆಚ್ಚಾಗಿದ್ದ ಹಳ್ಳಿಯಲ್ಲಿ ಬೆಳೆದ ಹುಡುಗನ ಮೂಗಿಗೆ ಅಡರುತ್ತಿದ್ದ ಭೂಮಿಯ ಪರಿಮಳ ಪರೀಕ್ಷೆಯ ವಾಸನೆಯಾದದ್ದು ಸಹಜವೇ ಆಗಿತ್ತು.

ವಾಸನೆಯ ಸಂವಾದ ಇನ್ನೂ ಒಂದು ಸುತ್ತು ಮುಂದುವರಿದು ಬರೆಯುವ ಇಂಕ್ನ ವಾಸನೆ, ಪ್ರಶ್ನೆಪತ್ರಿಕೆ ಮೇಲೆ ಮೂಡಿದ ಕಪ್ಪುಶಾಯಿಯ ಬೆಚ್ಚಿಬೀಳಿಸುವ ವಾಸನೆ, ಉತ್ತರ ಪತ್ರಿಕೆಗಳನ್ನು ಪೋಣಿಸಲು ಬಳಸುವ ದಾರಕ್ಕೆ ಮೆತ್ತಿದ್ದ ನುಸಿಗುಳಿಗೆಯ ವಾಸನೆ, ಹಳೆಯ ಕಾಲದ ಮೇಷ್ಟರು ಮೂಗಿಗೆ ನಶ್ಯ ಏರಿಸಿ, ಅದನ್ನು ಸರಿಯಾಗಿ ಒರೆಸಿಕೊಳ್ಳದೆ ಉತ್ತರ ಪತ್ರಿಕೆಗೆ ಮೆತ್ತಿಕೊಂಡು, ಅದನ್ನು ಇಸಿದುಕೊಳ್ಳುವ ಹುಡುಗನಿಗೆ ಸೀನು ಬರುವ ಸಂದರ್ಭ ಎಲ್ಲವೂ ‘ವಾಸನಾ ಸಂವಾದ’ದಲ್ಲಿ ಗಿರಕಿ ಹೊಡೆದದ್ದೇ ಹೊಡೆದದ್ದು.

ಇನ್ನೊಬ್ಬ ಸಹಪಾಠಿ ಕುಡುಮಿ ಸ್ನೇಹಿತನನ್ನು ಕಿಚಾಯಿಸಲು ಬಳಸಿದ್ದೂ ವಾಸನಾ ಪ್ರಸಂಗವನ್ನೇ. ಪರೀಕ್ಷೆ ಬಂದಾಗ ಓದುವುದನ್ನು ಬಿಟ್ಟು ಬೇರೆ ಎಲ್ಲ ಕೆಲಸಗಳೂ ನಗಣ್ಯ ಎಂದು ಭಾವಿಸಿದ್ದ ಒಬ್ಬನಿದ್ದ. ಅವನು ಒಂದೇ ಅಂಗಿಯನ್ನು ಅಷ್ಟೂ ಪರೀಕ್ಷೆಗಳಿಗೆ ಹಾಕಿಕೊಂಡು ಬರುತ್ತಿದ್ದ. ಆ ಅಂಗಿ ತನ್ನ ಪಾಲಿಗೆ ಅದೃಷ್ಟದ್ದು ಎಂದು ಭಾವಿಸಿದ್ದ ಅವನು ಅದನ್ನೇ ಪದೇಪದೇ ಹಾಕಿಕೊಳ್ಳುತ್ತಿದ್ದುದನ್ನು ಕಂಡವರು ಆಡಿಕೊಳ್ಳುತ್ತಿದ್ದರು. ಓದುವುದೊಂದನ್ನೇ ಮಾಡುತ್ತಿದ್ದ ಅವನಿಗೆ ಒಂದೇ ಅಂಗಿಯನ್ನು ಒಗೆಯಲು ಆಗ ಪುರುಸೊತ್ತೆಲ್ಲಿಂದ ಸಿಗಬೇಕು? ಅವನ ಪಕ್ಕ ಕೂತ ಹುಡುಗನೋ ಹುಡುಗಿಯೋ ಮೂಗು ಮುಚ್ಚಿಕೊಳ್ಳಬೇಕು ಎಂದು ಆಡಿಕೊಳ್ಳುತ್ತಿದ್ದರು. ‘ವಾಸನೆ ಅಂದುಕೊಂಡು ಕೂತರೆ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ’ ಎಂದು ಅವನು ತನ್ನ ಅದೃಷ್ಟದ ನೆಚ್ಚಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ.

ಈಗ ಮತ್ತೆ ಪರೀಕ್ಷೆ ಬಂದಿದೆ. ಕಾಲೇಜಿನ ಆ ಕಾಲದ ಪರೀಕ್ಷೆಯ ವಾಸನೆ ನೆನಪಾಗಲು ಇದು ಸುಸಂದರ್ಭ. ಮಾವಿನ ಚಿಗುರು, ಸಂಪಿಗೆ ಹೂವು, ಕೂಗುವ ಕೋಗಿಲೆ ಈ ಎಲ್ಲವುಗಳ ನಡುವೆ ಪರೀಕ್ಷೆಯ ವಾಸನೆಯೇ ವಿದ್ಯಾರ್ಥಿಗಳನ್ನು ಹೆಚ್ಚು ಕಾಡುತ್ತದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.