ಮಂಗಳವಾರ, ಏಪ್ರಿಲ್ 13, 2021
31 °C

ಪವನ್‌ಕುಮಾರ್ ಕಳೇಬರ ನಾಳೆ ನಗರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕದಲ್ಲಿ ಸಾವನ್ನಪ್ಪಿರುವ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪವನ್‌ಕುಮಾರ್ ಶವವನ್ನು ದೇಶಕ್ಕೆ ತರಿಸುವ ನಿಟ್ಟಿನಲ್ಲಿ ಅಗತ್ಯ ದಾಖಲೆಗಳಿಗೆ ಅವರ ಕುಟುಂಬ ಸದಸ್ಯರು ಕೊನೆಗೂ ಸಹಿ ಮಾಡಿದ್ದು, ಪವನ್ ಶವ ಸೋಮವಾರ ನಗರಕ್ಕೆ ಬರುವ ಸಾಧ್ಯತೆ ಇದೆ.`ಪವನ್ ಶವದ ಜತೆಗೆ ಮರಣೋತ್ತರ ಪರೀಕ್ಷೆಯ ವರದಿ, ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆತ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದಾನೆ ಎನ್ನಲಾದ ಪತ್ರವನ್ನು ತರಿಸಿ ಕೊಡಬೇಕು. ಆ ಎಲ್ಲಾ ದಾಖಲೆಗಳ ಖುದ್ದು ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು. ಈ ಷರತ್ತುಗಳಿಗೆ ಒಪ್ಪದಿದ್ದರೆ ದಾಖಲೆಗಳಿಗೆ ಸಹಿ ಮಾಡುವುದಿಲ್ಲ~ ಎಂದು ಪವನ್ ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದರು.`ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈ ಎಲ್ಲಾ ದಾಖಲೆಗಳನ್ನು ನೀಡಲು ಕನಿಷ್ಠ ಎರಡು ತಿಂಗಳಾದರೂ ಬೇಕು. ಸಂಬಂಧಪಟ್ಟ ದಾಖಲೆಗಳಿಗೆ ಪವನ್ ಪೋಷಕರ ಸಹಿ ಇಲ್ಲದೇ ಶವವನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಅವರು ಷರತ್ತುಗಳನ್ನು ಸಡಿಲಿಸದೆ ಪಣ ತೊಡುವುದಾದರೆ ಶವಕ್ಕಾಗಿ ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತದೆ~ ಎಂದು ನ್ಯೂಜೆರ್ಸಿ ಪೊಲೀಸರು ಕಂಪೆನಿಗೆ ತಿಳಿಸಿದ್ದಾರೆ.ಈ ವಿಷಯ ತಿಳಿದ ಪವನ್ ಕುಟುಂಬ ಸದಸ್ಯರು ಮತ್ತು ಅವರ ಕಾನೂನು ಸಲಹೆಗಾರರು ಶುಕ್ರವಾರ ಸಂಜೆ ಕಾಗ್ನಿಜಂಟ್ ಟೆಕ್ನಾಲಜೀಸ್ ಕಂಪೆನಿಯ ನಗರ ಶಾಖೆ ಅಧಿಕಾರಿಗಳನ್ನು ಭೇಟಿಯಾಗಿ ದಾಖಲೆಗಳಿಗೆ ಸಹಿ ಮಾಡಿದ್ದಾರೆ. ದಾಖಲೆಗಳು ಭಾನುವಾರ ಅಲ್ಲಿನ ಸ್ಥಳೀಯ ಪೊಲೀಸರ ಕೈಸೇರಲಿದ್ದು, ಶವ ಸೋಮವಾರ ನಗರಕ್ಕೆ ಬರಲಿದೆ ಎಂದು ಮೂಲಗಳು ಹೇಳಿವೆ.`ಪವನ್ ಶವಕ್ಕಾಗಿ 2 ತಿಂಗಳು ಕಾಯಲು ಸಾಧ್ಯವಿಲ್ಲ. ಆದ್ದರಿಂದ ದಾಖಲೆಗಳಿಗೆ ಸಹಿ ಮಾಡಿದ್ದೇವೆ. ಅಂತ್ಯಕ್ರಿಯೆ ಮುಗಿದ ನಂತರ ಕಾನೂನು ಹೋರಾಟ ಮುಂದುವರಿಸುತ್ತೇವೆ~ ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.