ತುಮಕೂರು: ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ನಿಶ್ಚಿತ, ನಿರಂತರ ಆದಾಯ ತರಲು ಹಾಗೂ ಆರ್ಥಿಕ ಭದ್ರತೆಯ ಆಸರೆ ನೀಡಲು ನಬಾರ್ಡ್ ಮೂಲಕ ಕೇಂದ್ರ ಸರ್ಕಾರ ಜಾರಿ ಮಾಡಿರುವ `ಸಮಗ್ರ ಪಶುಸಂಗೋಪನೆ ಅಭಿವೃದ್ಧಿಗೆ ಆರ್ಥಿಕ ನೆರವು~ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಹತ್ವದ ಸಭೆ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆಯಲಿದೆ.

ಬ್ಯಾಂಕ್ ಅಧಿಕಾರಿಗಳ ಅಸಹಕಾರ ಧೋರಣೆ ಯಿಂದಾಗಿ ಈ ಯೋಜನೆ ವಿಫಲವಾಗುತ್ತಿದೆ. ರೈತರಿಗೆ ನೆರವು ನೀಡುವ ಸರ್ಕಾರದ ಆಶಯ ಈಡೇರುತ್ತಿಲ್ಲ ಎಂಬ ದೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಶುಕ್ರವಾರ ನಡೆಯಲಿರುವ ಮಹತ್ವದ ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಎಲ್ಲ ಬ್ಯಾಂಕ್ನ ವ್ಯವಸ್ಥಾಪಕರು, ಪಶು ಸಂಗೋಪನಾ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು, ನಂದಿನಿ ಒಕ್ಕೂಟದ ವಿಸ್ತರಣಾಧಿಕಾರಿ ಗಳು, ನಬಾರ್ಡ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಗ್ರಾಮೀಣ ಹಾಲು ಉತ್ಪಾದಕರ ಪರಿಸ್ಥಿತಿ, ಬ್ಯಾಂಕಿಂಗ್ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುವ ನಿರ್ಣಯಗಳು ಮೂಡಿಬರಲಿವೆ ಎಂದು ಮೂಲಗಳು ಹೇಳಿವೆ.

ನೆರವು: ಹವಾಮಾನ ವೈಪರಿತ್ಯ ಮತ್ತು ಅನಿಶ್ಚಿತ ಮಳೆಯಿಂದ ಹೈರಾಣಾಗಿರುವ ರೈತರ ನೆರವಿಗೆಂದು ಕೇಂದ್ರ ಸರ್ಕಾರ ಹೈನು ಉದ್ಯಮ ಅಭಿವೃದ್ಧಿ (ಡಿಇಡಿಎಸ್), ಸುಧಾರಿತ ಕುರಿ/ಮೇಕೆ ಮತ್ತು ಮೊಲ ಸಾಕಾಣಿಕೆ, ಕೋಳಿ ಉದ್ಯಮಕ್ಕೆ ಉತ್ತೇಜನ ಎಂಬ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿತು.

ಮಿಶ್ರತಳಿ ಹಸು/ಸುಧಾರಿತ ತಳಿಯ ಎಮ್ಮೆ ಘಟಕಕ್ಕೆ ರೂ.1ರಿಂದ 5 ಲಕ್ಷ, ಕುರಿ/ಮೇಕೆ ಘಟಕಕ್ಕೆ ರೂ.1ರಿಂದ 25 ಲಕ್ಷ, ಮಿಶ್ರತಳಿ ಕಡಸು (ಪಡ್ಡೆ) ಸಾಕಾಣಿಕೆಗೆ ಮುಂದಾಗುವ ರೈತರಿಗೆ ರೂ.1.20ರಿಂದ ರೂ.4.80 ಲಕ್ಷದವರೆಗೆ ಆರ್ಥಿಕ ನೆರವು ಒದಗಿಸುವ ಅತಿ ಮುಖ್ಯ ಅಂಶ ಯೋಜನೆಯಲ್ಲಿ ಉಲ್ಲೇಖವಾಗಿದೆ.

ಪ್ರಸ್ತುತ ಖಾಸಗಿ ಕಂಪೆನಿಗಳ ಒಡೆತನದಲ್ಲಿರುವ ಕೋಳಿ ಸಾಕಾಣಿಕೆ ಉದ್ಯಮವನ್ನು ಅಸಂಘಟಿತ ರೈತರ ಕೈಗೆಟುವಕುವಂತೆ ಮಾಡಿ, ಅವರಿಗೆ ನಿರೀಕ್ಷಿತ ಆದಾಯ ತಂದುಕೊಡಲು, ಮಾಂಸದ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 1000ದಿಂದ 5000 ಕೋಳಿಗಳ ಸಾಕಾಣಿಕೆಗೆ ರೂ.2.24ರಿಂದ ರೂ.11.20 ಲಕ್ಷದವರೆಗೆ, 2000 ಮೊಟ್ಟೆಕೋಳಿ ಅಥವಾ 5000 ಮೊಟ್ಟೆ ಕೋಳಿಮರಿ ಘಟಕ ಸ್ಥಾಪನೆಗೆ ರೂ.8ರಿಂದ ರೂ.20ಲಕ್ಷದವರೆಗೆ, ಕೋಳಿ ಆಹಾರ ತಯಾರಿಕಾ ಘಟಕ ಸ್ಥಾಪನೆಗೆ ರೂ.10 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು.

ಆರ್ಥಿಕ ನೆರವು ಪಡೆದ ಸಾಮಾನ್ಯ ವರ್ಗದ ರೈತರಿಗೆ ಶೇ.25ರಷ್ಟು ಮತ್ತು ಪರಿಶಿಷ್ಟ ಜಾತಿ/ವರ್ಗಕ್ಕೆ ಶೇ.33.33ರಷ್ಟು ಸಹಾಯಧನ ಸಿಗಲಿದೆ. ಘಟಕದ ಒಟ್ಟು ವೆಚ್ಚದ ಶೇ.10ರಷ್ಟು ವಂತಿಕೆಯನ್ನು ರೈತರು ಭರಿಸಬೇಕು.

ಹಿಂಜರಿಕೆ: ಯೋಜನೆ ಕುರಿತು ಜನಪ್ರತಿನಿಧಿಗಳು, ರೈತ ಸಂಘಟನೆಗಳು, ಪಶು ಸಂಗೋಪನಾ ಇಲಾಖೆ, ಬ್ಯಾಂಕ್ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಕಳೆದ ಒಂದು ವರ್ಷದಲ್ಲಿ ಕೇವಲ 200 ಮಂದಿ ಮಾತ್ರ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಪಶು ಸಂಗೋಪನಾ ಇಲಾಖೆಯ ಮೂಲಗಳು ಹೇಳುತ್ತವೆ.

ಮಧುಗಿರಿ ತಾಲ್ಲೂಕಿನಲ್ಲಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, 160 ಫಲಾನುಭವಿಗಳಿದ್ದಾರೆ. ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಕುರಿ ಸಾಕಾಣಿಕೆಗೆ ಉತ್ತಮ ಅವಕಾಶ ಇದ್ದರೂ ರೈತರು ಆರ್ಥಿಕ ನೆರವಿಗೆ ಅರ್ಜಿ ಹಾಕುತ್ತಿಲ್ಲ.

ಈ ಕುರಿತು ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಿಸ್ತರಣಾಧಿಕಾರಿಗಳನ್ನು ಪ್ರಶ್ನಿಸಿದರೆ, `ಬ್ಯಾಂಕ್ನವರು ರೇಗಾಡುತ್ತಾರೆ. ಯಾವುದಕ್ಕೂ ಸ್ಪಂದಿಸುವುದಿಲ್ಲ. ಸಿಬ್ಬಂದಿ ಕೊರತೆಯ ನೆಪ ಹೇಳಿ ನೂರೆಂಟು ಸಲ ಅಲೆಸುತ್ತಾರೆ. ಜಾಮೀನು- ಆಧಾರವಾಗಿ ಆಸ್ತಿ ಪತ್ರ ಕೇಳುತ್ತಾರೆ. ಯಾವುದನ್ನೂ ತಾಳ್ಮೆಯಿಂದ ವಿವರಿಸಿ ಹೇಳುವುದಿಲ್ಲ. ಬ್ಯಾಂಕಿನವರಿಗೆ ಹೆದರಿಯೇ ಅರ್ಧದಷ್ಟು ರೈತರು ಯೋಜನೆಯಿಂದ ದೂರ ಉಳಿದಿದ್ದಾರೆ~ ಎಂದು ದೂರುತ್ತಾರೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿದ ಬ್ಯಾಂಕ್ ಅಧಿಕಾರಿಗಳು, `ಇದು ಬ್ಯಾಂಕ್ ಅಡ್ಜೆಸ್ಟ್ಮೆಂಟ್ ಸಬ್ಸಿಡಿ ಇರುವ ಯೋಜನೆ. ಸಬ್ಸಿಡಿಯನ್ನು ನಬಾರ್ಡ್ ನೇರವಾಗಿ ಬ್ಯಾಂಕ್ಗಳಿಗೆ ಪಾವತಿಸುತ್ತದೆ. ನೆರವು ಪಡೆದ ರೈತರು ಉತ್ತಮ ತಳಿಯ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಖರೀದಿಸಿರುವ ಬಗ್ಗೆ ಪಶು ವೈದ್ಯಾಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ಗಮನಿಸುತ್ತಾರೆ. ರೈತರ ಕೈಗೆ ನೇರವಾಗಿ ಹಣ ಸಿಗುವುದಿಲ್ಲ. ನಾವು ಕೊಟ್ಟ ಸಾಲದ ಸದುಪಯೋಗ ವಾಗುತ್ತದೆ. ಹೀಗಾಗಿ ರೈತರಿಗೆ ಈ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ವಿಶ್ಲೇಷಿಸುತ್ತಾರೆ.

ಮುಂದೆ ಬನ್ನಿ...
ಹಾಲಿಗೆ ಖಾತ್ರಿಯಾದ ಮಾರುಕಟ್ಟೆ ಇದೆ. ಹೀಗಾಗಿ ರೈತರು ಹೈನುಗಾರಿಕೆ ಅಭಿವೃದ್ಧಿಗೆ ಧೈರ್ಯವಾಗಿ ಆರ್ಥಿಕ ನೆರವು ಪಡೆಯಬಹುದು. ಜಿಲ್ಲೆಯಲ್ಲಿ ಕುರಿ ಸಾಕಾಣಿಕೆಗೆ ಉತ್ತಮ ಅವಕಾಶವಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಇನ್ನಾದರೂ ರೈತರು ಸ್ಪಂದಿಸಬೇಕು. ಮಾಹಿತಿಗೆ (0816) 2278616 ಸಂಪರ್ಕಿಸಿ.

- ಡಾ.ಆರ್.ಆರ್.ರವೀಂದ್ರ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ತುಮಕೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.