ಹಾಸನ: `ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಡಾ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಪೂರ್ವಗ್ರಹ ಪೀಡಿತವಾಗಿದ್ದು, ಇದನ್ನು ಜಾರಿಗೊಳಿಸಿದರೆ ಇರುವ ಅರಣ್ಯವೂ ನಾಶವಾಗುವುದರಲ್ಲಿ ಸಂದೇಹವಿಲ್ಲ' ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ನುಡಿದಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ಕಸ್ತೂರಿ ರಂಗನ್ ಅವರಿಗಿಂತ ಹಿಂದೆ ಪರಿಸರ ಹಾಗೂ ಜೀವ ವೈವಿಧ್ಯ ತಜ್ಞ ಪ್ರೊ. ಮಾಧವ ಗಡ್ಗಿಳ್ ನೇತೃತ್ವದ ಸಮಿತಿ ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ಎಲ್ಲ ಆರು ರಾಜ್ಯಗಳಲ್ಲಿ 18 ತಿಂಗಳ ಅಧ್ಯಯನ ನಡೆಸಿ ವಿಸ್ತೃತ ವರದಿ ನೀಡಿತ್ತು.

ಅವರು ಇಡೀ ಪಶ್ಚಿಮ ಘಟ್ಟಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ಅತ್ಯಂತ ವೈಜ್ಞಾನಿಕ ವರದಿ ನೀಡಿದ್ದರು. ಆದರೆ ವರದಿ ಸಲ್ಲಿಸುವ ವೇಳೆಗೆ ಕೇಂದ್ರ ಸಂಪುಟ ಪುನಾರಚನೆಯಾಗಿ ಜಯರಾಮ್ ರಮೇಶ್ ಬದಲು ಜಯಂತಿ ನಟರಾಜನ್ ಅರಣ್ಯ ಖಾತೆಯ ಸಚಿವರಾದರು. ಹೊಸ ಸಚಿವರು ವರದಿಯನ್ನು ಬಹಿರಂಗ ಪಡಿಸದೆ ಮೂಲೆಗುಂಪು ಮಾಡಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಮನವಿ ಸಲ್ಲಿಸಿ, ನ್ಯಾಯಾಲಯದ ಮೊರೆ ಹೋದ ಬಳಿಕ ಅನಿವಾರ್ಯವಾಗಿ ಇಲಾಖೆಯ ವೆಬ್ಸೈಟ್ನಲ್ಲಿ ವರದಿ ಪ್ರಕಟಿಸಿ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿತ್ತು. ಒಟ್ಟಾರೆ ಸುಮಾರು 1750 ಪತ್ರಗಳು ಬಂದು ಹೆಚ್ಚಿನವರು ವರದಿ ಜಾರಿ ಮಾಡುವಂತೆ ಆಗ್ರಹಿಸಿದ್ದರು. ಆದರೆ ಆರೂ ರಾಜ್ಯಗಳು ವರದಿಗೆ ವಿರೋಧ ವ್ಯಕ್ತಪಡಿಸಿದ್ದವು.

ಗಾಡ್ಗಿಳ್ ವರದಿ ಜಾರಿಗೊಳಿಸಲು ಇಚ್ಛೆ ಇಲ್ಲದ ಕೇಂದ್ರ ಸರ್ಕಾರ, ಈ ಕ್ಷೇತ್ರದ ಪರಿಚಯವೇ ಇಲ್ಲದ, ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೊಸದೊಂದು ಸಮಿತಿ ರಚಿಸಿ, ಇನ್ನೊಂದು ವರದಿ ತರಿಸಿಕೊಂಡಿದ್ದು ಅತ್ಯಂತ ದುರಂತದ ವಿಚಾರ ಎಂದು ಕಿಶೋರ್ ನುಡಿದರು.

`ಕಸ್ತೂರಿ ರಂಗನ್ ಯಾರಿಗೂ ತಿಳಿಸದೆ ಗೌಪ್ಯವಾಗಿ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಗುಂಡ್ಯಕ್ಕೆ ಅವರು ಬರುತ್ತಿದ್ದಾರೆ ಎಂಬುದು ನಮಗೆ ಬೇರೆ ಮೂಲಗಳಿಂದ ತಿಳಿದು ಅವರನ್ನು ಭೇಟಿ ಮಾಡಲು ಹೋಗಿದ್ದೆವು. ನಮ್ಮ ಭೇಟಿ ಅವರಿಗೆ ಖುಷಿ ತಂದಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಅವರು ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ನೈಸರ್ಗಿಕ ಭೂದೃಶ್ಯಾವಳಿ ಹಾಗೂ ಸಾಂಸ್ಕೃತಿಕ ಭೂದೃಶ್ಯಾವಳಿ ಎಂದು ವಿಂಗಡಿಸಿ, ಸಾಂಸ್ಕೃತಿಕ ಭೂದೃಶ್ಯಾವಳಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ. ಈ ವರದಿಯ ಹಿಂದೆ ಬಂಡವಾಳಶಾಹಿಗಳು ಹಾಗೂ ರಾಜಕಾರಣಿಗಳ ಹಿತಾಸಕ್ತಿ ಕಾಯುವ ಹುನ್ನಾರ ಅಡಗಿದೆ. ಸರ್ಕಾರ ಇದಕ್ಕೆ ಮುಂದಾದರೆ ಕೆಲವೇ ವರ್ಷಗಳಲ್ಲಿ ನಮ್ಮ ಅರಣ್ಯ ಮತ್ತು ಅತ್ಯಂತ ಅಪರೂಪದ ಪ್ರಾಣಿ ಸಂಕುಲಗಳೆಲ್ಲ ನಾಶವಾಗುತ್ತವೆ ಎಂದು ಕಿಶೋರ್ ವಾದಿಸಿದರು.

ಈ ವರದಿಯ ವಿರುದ್ಧ ಎಸ್.ಆರ್. ಹಿರೇಮಠ ಹಾಗೂ ಪಾಂಡುರಂಗ ಹೆಗಡೆ ಎಂಬುವವರು ಈಗಾಗಲೇ ಗ್ರೀನ್ ಟ್ರಿಬ್ಯೂನಲ್ಗೆ ಮೊರೆ ಹೋಗಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಅವರು ನುಡಿದರು.
ಎಚ್.ಪಿ. ಮೋಹನ್, ಯೋಗ ಗುರು ಸುರೇಶ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.