ಇಸ್ಲಾಮಾಬಾದ್ (ಪಿಟಿಐ): `ಭಾರತವು ಪಾಕಿಸ್ತಾನಕ್ಕೆ ಪ್ರತಿದಿನ 40 ಕೋಟಿ ಘನಅಡಿ ಅನಿಲವನ್ನು ಸರಬರಾಜು ಮಾಡಲು ಮುಂದಾಗಿದ್ದು, ಅದಕ್ಕೆ ಕಡಿಮೆ ಬೆಲೆ ನೀಡಲು ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ' ಎಂದು ಪಾಕ್ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಶಾಹೀದ್ ಖಾಖನ್ ಅಬ್ಬಾಸಿ ತಿಳಿಸಿದ್ದಾರೆ.

`ಅನಿಲ ಉತ್ಪನ್ನಗಳನ್ನು ಅತಿಹೆಚ್ಚು ಸರಬರಾಜು ಮತ್ತು ಮಾರುಕಟ್ಟೆ ಮಾಡುವ ಭಾರತ ಸರ್ಕಾರಿ ಒಡೆತನದ ಗೇಲ್ ಸಂಸ್ಥೆಯ ನಿಯೋಗವು ಈಚೆಗೆ ತಮ್ಮನ್ನು ಭೇಟಿ ಮಾಡಿ ಭಾರತದಿಂದ ಪಾಕ್ಗೆ ಅನಿಲ ಆಮದು ಮಾಡಿಕೊಳ್ಳಲು ಮಾತುಕತೆ ನಡೆಸಿದೆ' ಎಂದು ಹೇಳಿದ್ದಾರೆ.

`ಭಾರತದಿಂದ ಅನಿಲವನ್ನು ಆಮದು ಮಾಡಿಕೊಳ್ಳಬಹುದು. ಆದರೆ ಅದರ ಬೆಲೆ ಅತ್ಯಂತ ಕಡಿಮೆಯಾಗಿರಬೇಕು' ಎಂದೂ ಅವರು ನುಡಿದಿದ್ದಾರೆ.
`ದೇಶಕ್ಕೆ ಅನಿಲದ ಕೊರತೆ ಇದೆ. ಇದಕ್ಕೆ ಪರ್ಯಾಯವಾಗಿ ಭಾರತದಿಂದ ಅನಿಲ ಆಮದು ಮಾಡಿಕೊಳ್ಳಲು ನಾವು ಸಮ್ಮತಿ ಸೂಚಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ತಜ್ಞರು ಭಾರತಕ್ಕೆ ಭೇಟಿ ನೀಡಿ ಈ ಆಮದು ಪ್ರಕ್ರಿಯೆಯ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳಲಿದ್ದಾರೆ.

ತಜ್ಞರ ವರದಿಯ ನಂತರ ಎರಡೂ ದೇಶಗಳು ಈ ಅನಿಲ ಉತ್ಪನ್ನಗಳ ಬೆಲೆಯ ಕುರಿತು ಚರ್ಚಿಸಲಿವೆ' ಎಂದು ಅಬ್ಬಾಸಿ ಹೇಳಿರುವುದಾಗಿ `ದಿ ನ್ಯೂಸ್ ಡೈಲಿ' ಶನಿವಾರ ವರದಿ ಮಾಡಿದೆ.

ಜಲಂಧರ್ನಿಂದ ಅಟ್ಟಾರಿವರೆಗೆ ಮತ್ತು ಅಲ್ಲಿಂದ ವಾಘಾವರೆಗೆ ಅನಿಲ ಕೊಳವೆ ಮಾರ್ಗವನ್ನು ಭಾರತ ನಿರ್ಮಿಸಲಿದೆ. ಈ ಬಗ್ಗೆ ಒಪ್ಪಂದ ಮುಗಿದ ಬಳಿಕ ಯೋಜನೆ ಆರಂಭವಾಗಲಿದ್ದು, ಒಂದೂವರೆ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. ದ್ರವ ನೈಸರ್ಗಿಕ ಅನಿಲವನ್ನು ಭಾರತದಲ್ಲಿ ಅನಿಲೀಕರಿಸಿ ಪಾಕ್ಗೆ ಪಂಪ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

`ಪಾಕ್ಗೆ ಸುಮಾರು 800 ಕೋಟಿ ಘನಅಡಿ ಅನಿಲದ ಅವಶ್ಯಕತೆ ಇದೆ. ಇದರಲ್ಲಿ ದೇಶವು 400 ಕೋಟಿ ಘನಅಡಿ ಅನಿಲವನ್ನು ಉತ್ಪಾದಿಸುತ್ತಿದೆ. ದೇಶದಲ್ಲಿ ಅನಿಲ ಸಂಪನ್ಮೂಲಗಳು ಇಲ್ಲದ ಕಾರಣ ಸಾಧ್ಯವಾದ ಕಡೆಯಿಂದ ಅನಿಲವನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ' ಎಂದು ಅವರು ತಿಳಿಸಿದ್ದಾರೆ.

`ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸರ್ಕಾರವು ಇರಾನ್ ಮತ್ತು ಪಾಕಿಸ್ತಾನದ ನಡುವೆ ಮಾಡಿಕೊಂಡ ಒಪ್ಪಂದವನ್ನು ಈಗಿನ ಪಿಎಂಎಲ್-ಎನ್ ಸರ್ಕಾರ ಗೌರವಿಸುತ್ತದೆ. ಅದೇ ರೀತಿ ನಾವು ಮಾಡಿಕೊಂಡ ಒಪ್ಪಂದವನ್ನು ಇತರರು ಗೌರವಿಸಬೇಕು' ಎಂದು ಅವರು ಪರೋಕ್ಷವಾಗಿ ಪಿಪಿಪಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.