ಭಾನುವಾರ, ಮೇ 9, 2021
25 °C

ಪಾಕ್‌ಗೆ ಆರ್ಥಿಕ ನೆರವು ನಿಲ್ಲಿಸಿ: ಇಮ್ರಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಪಾಕಿಸ್ತಾನಕ್ಕೆ ಕೋಟ್ಯಂತರ ರೂಪಾಯಿಯ ಆರ್ಥಿಕ ನೆರವನ್ನು ಬ್ರಿಟನ್ ನಿಲ್ಲಿಸಬೇಕು ಎಂದು ಮಾಜಿ ಕ್ರಿಕೆಟಿಗ, ರಾಜಕೀಯ ಮುಖಂಡ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.ಬ್ರಿಟನ್ ನೀಡುವ ಹಣದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ ಹೊರತು ಇದರಿಂದ ಜನಸಾಮಾನ್ಯರಿಗೆ ಎಳ್ಳಷ್ಟು ಉಪಯೋಗವಾಗುತ್ತಿಲ್ಲ ಎಂದು ಅವರು ಸೋಮವಾರ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಇದೇ ವೇಳೆ ಪಾಕಿಸ್ತಾನಕ್ಕೆ ವಾರ್ಷಿಕ ನೀಡಲಾಗುವ ಸಹಾಯದ ಮೊತ್ತವನ್ನು 140 ದಶಲಕ್ಷ ಪೌಂಡ್‌ಗಳಿಂದ 350 ದಶಲಕ್ಷ ಪೌಂಡ್‌ಗಳಿಗೆ  ಹೆಚ್ಚಿಸಲು ಬ್ರಿಟನ್ ಯೋಚಿಸಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.