ಬುಧವಾರ, ಡಿಸೆಂಬರ್ 11, 2019
22 °C

ಪಾಕ್‌ನಲ್ಲಿ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ನಲ್ಲಿ ಭೂಕಂಪ

ಇಸ್ಲಾಮಾಬಾದ್ (ಐಎಎನ್‌ಎಸ್): ಬುಧವಾರ ಮುಂಜಾನೆ ಪಾಕಿಸ್ತಾನದ ಕ್ವೆಟ್ಟಾ, ಮುಲ್ತಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಿಕ್ಟರ್ ಮಾಪಕದ 7.3ರ ಪ್ರಮಾಣದಲ್ಲಿ ಭೂಕಂಪವಾಗಿದ್ದು ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ಬೆಳಿಗ್ಗೆ 1.23ರ ವೇಳೆಗೆ ಈ ಘಟನೆ ನಡೆದಾಗ ಜನ ಗಾಢ ನಿದ್ರೆಯಲ್ಲಿದ್ದರು. ಉತ್ತರ ಪಾಕಿಸ್ತಾನದಲ್ಲಿ 5 ವರ್ಷಗಳ ಹಿಂದೆ ರಿಕ್ಟರ್ ಮಾಪಕದ 7.5ರ ಪ್ರಮಾಣದಲ್ಲಿ ಭೂಮಿ ನಡುಗಿದ್ದಾಗ 70ಸಾವಿರ ಮಂದಿ ಸತ್ತಿದ್ದರು.ಇದೇ  ಪ್ರದೇಶ ಬುಧವಾರ ಮತ್ತೆ ನಡುಗಿದಾಗ ಲಕ್ಷಾಂತರ ಜನ ಮನೆಯಿಂದ ಹೊರಗೆ ಓಡಿ ಬಂದು ದಿನವಿಡೀ ರಸ್ತೆ, ಮೈದಾನಗಳಲ್ಲಿ ನಿಂತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಈ ಘಟನೆಯಿಂದ ಇಬ್ಬರು ಮಹಿಳೆಯರು ಹೃದಯಾಘಾತಕ್ಕೆ ಒಳಗಾಗಿದ್ದರೆ, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾಚಿ ನಗರದಲ್ಲಿ ಕೂಡಾ ಇದೇ ಅನುಭವವಾಗಿದ್ದು ಸಹಸ್ರಾರು ಜನ ಆತಂಕದಿಂದ ಬೀದಿಯಲ್ಲಿ ನಿಂತಿದ್ದರು.ಹಲವು ಮನೆಗಳು ಕುಸಿದಿವೆಯಾದರೂ, ಪ್ರಾಣ ಹಾನಿಯಾಗಿಲ್ಲ.

ಪ್ರತಿಕ್ರಿಯಿಸಿ (+)