ಭಾನುವಾರ, ಮೇ 9, 2021
19 °C

ಪಾಕ್ ಸೈನಿಕರ ಹಿಮ ಸಮಾಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್(ಪಿಟಿಐ): ಸಿಯಾಚಿನ್ ಪ್ರದೇಶದ ಸೇನಾ ಶಿಬಿರದ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಹಿಮ ಸಮಾಧಿಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.ಪೂರ್ವ ಕರಕೊರಮ್ ಶಿಖರ ಪ್ರದೇಶದ ಸ್ಕರ್ದ್ ಎಂಬಲ್ಲಿ ಈ ಘಟನೆ ನಡೆದಿದೆ. ಸಿಯಾಚಿನ್‌ನ ಗ್ಯಾರಿ ಎಂಬಲ್ಲಿ ಪಾಕ್ ಸೇನಾ ಶಿಬಿರ ಇದೆ. ಬೆಳಗಿನ 6 ಗಂಟೆ ವೇಳೆಯಲ್ಲಿ ಹಿಮಕುಸಿತವುಂಟಾಗಿದೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ. ರಕ್ಷಣಾ ಕಾರ್ಯಕ್ಕೆ ಸಹಕರಿಸಲು ಹೆಲಿಕಾಪ್ಟರ್, ಶ್ವಾನದಳ ಹಾಗೂ ಹೆಚ್ಚುವರಿ ಪಡೆಗಳನ್ನು ಕಳುಹಿಸಿಕೊಡಲಾಗಿದೆ ಎಂದು ಸೇನೆ ಮುಖ್ಯ ವಕ್ತಾರ ಮೇಜರ್ ಜನರಲ್ ಅಖ್ತಾರ್ ಅಬ್ಬಾಸ್ ತಿಳಿಸಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ 135 ಸೈನಿಕರು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಾವುನೋವಿನ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.ಗ್ಯಾರಿ ಸೇನಾ ಶಿಬಿರದ ಮುಖ್ಯ ಭಾಗವಾಗಿದ್ದು ಏಕಕಾಲಕ್ಕೆ ಇಲ್ಲಿ ಮೂರು ಸಾವಿರ ಸೈನಿಕರಿಗೆ ಆಶ್ರಯ ನೀಡಬಹುದಾಗಿದೆ. ಹಿಮಕುಸಿತ ಹಿನ್ನೆಲೆಯಲ್ಲಿ ಪಾಕ್ ಗಡಿಯಲ್ಲಿ ಸೇನಾ ಪಡೆಗಳ ಸಂಖ್ಯೆ ಕಡಿತ ಮಾಡಲಾಗಿದೆ.ಸಿಯಾಚಿನ್ ಪ್ರದೇಶ ವಿಶ್ವದ `ಅತಿ ಎತ್ತರದ ಹಾಗೂ ಶೀತ ಯುದ್ಧಭೂಮಿ~ ಎನಿಸಿದೆ. ಪರಸ್ಪರ ಕಾರ್ಯಾಚರಣೆಗಿಂತ ಪ್ರತಿಕೂಲ ಹವಾಮಾನದಿಂದಾಗಿಯೇ ಈ ಭಾಗದಲ್ಲಿ ಎರಡೂ ದೇಶಗಳ ಸಾಕಷ್ಟು ಸೈನಿಕರು ಸಾವನ್ನಪ್ಪುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.