ಪಾದಚಾರಿ ಜಾಗ ಒತ್ತುವರಿ ಆಟೊ ಚಾಲಕರ ಪ್ರತಿಭಟನೆ

ಸೋಮವಾರ, ಮೇ 27, 2019
29 °C

ಪಾದಚಾರಿ ಜಾಗ ಒತ್ತುವರಿ ಆಟೊ ಚಾಲಕರ ಪ್ರತಿಭಟನೆ

Published:
Updated:

ಚಿಕ್ಕಮಗಳೂರು: ನಗರದ ಕೆ.ಎಂ.ರಸ್ತೆ ವಿಸ್ತರಣೆ ಸಂದರ್ಭ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೆ ಮನಸೋ ಇಚ್ಛೆ ಕಾಮಗಾರಿ ಮಾಡಿದ್ದಾರೆ. ಒತ್ತು ವರಿಯಾಗಿರುವ ಪಾದಚಾರಿ ಮಾರ್ಗ ತೆರವು ಮಾಡಿಸಿಲ್ಲ ಎಂದು ನಗರದ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಶಾಮನೂರು ಪೆಟ್ರೋಲ್ ಬಂಕ್ ಮಾಲೀಕರು ಫುಟ್‌ಪಾತ್‌ಗೆ ಜಾಗ ಬಿಡದೆ, ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ. ಅತ್ಯಂತ ಜನ, ವಾಹನ ದಟ್ಟಣೆ ಈ ವೃತ್ತದಲ್ಲಿ ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಅವಘಡ ಸಂಭವಿಸುವ ಅಪಾಯವಿದೆ.

 

ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾ ಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಪ್ರತಿಭಟನೆ ನಂತರ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ಗೆ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ವಿನಯ್ ಹಾಗೂ ಇನ್ನಿತರರು ಇದ್ದರು.ಆಗ್ರಹ: ಚಿಕ್ಕಮಗಳೂರು ಜಿಲ್ಲೆಯಾ ದ್ಯಂತ ಇರುವ ಆಟೋಗಳಿಗೆ ಮೀಟರ್ ಅಳವಡಿಸುವಂತೆ ನೀಡಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ, ಆಟೊ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿ ಕಾರಿಗೆ ಗುರುವಾರ ಮನವಿ ಸಲ್ಲಿಸಿದರು.ರಸ್ತೆಗಳೆಲ್ಲಾ ಹಾಳಾಗಿರುವುದರ ಜತೆಗೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆಟೊಗಳಿಗೆ ಮೀಟರ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಮೊದಲು ಆಟೊ ದರ ನಿಗದಿಪಡಿಸಬೇಕು. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಪದೇ ಪದೇ ಏರುತ್ತಿದೆ. ಚಾಲಕರಿಗೆ ಬಹಳ ತೊಂದರೆಯಾಗಿದೆ ಎಂದು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್. ಅನಿಲ್ ಕುಮಾರ್  ದೂರಿದರು.ಸಂಘದ ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ವಿನಯ್, ಹರಿಹರಪುರದ ಅಧ್ಯಕ್ಷ ವಿಜಯೇಂದ್ರ, ಆಲ್ದೂರು ರಮೇಶ್, ಬಾಳೆಹೊನ್ನಪುರ ಸದಾಶಿವ, ಜಯಪುರ ಅಮ್ಜದ್, ಕೊಪ್ಪದ ಜಗದೀಶ್, ಕಡೂರಿನ ರಮೇಶ್ ಹಾಗೂ ಇತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry