ಭಾನುವಾರ, ಏಪ್ರಿಲ್ 11, 2021
23 °C

ಪಾರಮ್ಯ ಮೆರೆದ ಆಳ್ವಾಸ್ ಸ್ಪರ್ಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಅಥ್ಲೆಟಿಕ್ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ಪ್ರಚುರಪಡಿಸಿದ ಮೂಡುಬಿದಿರೆಯ ಆಳ್ವಾಸ್ ತಂಡದವರು ಬುಧವಾರ ಇಲ್ಲಿ ಕೊನೆಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದ 24ನೇ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಭುತ್ವ ಮೆರೆದರು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಕೂಟದಲ್ಲಿ ಆಳ್ವಾಸ್ ತಂಡ 10 ವಿಭಾಗಗಳಲ್ಲಿ ಆರರಲ್ಲೂ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕೊನೆಯ ದಿನ ಏಳು ಕೂಟ ದಾಖಲೆಗಳು ನಿರ್ಮಾಣಗೊಂಡವು.ಪುರುಷರ ವಿಭಾಗದ ಪೋಲ್‌ವಾಲ್ಟ್‌ನಲ್ಲಿ ಪಿ. ಬಾಲಕೃಷ್ಣ (ಎಸ್‌ಡಬ್ಲ್ಯುಆರ್; ಎತ್ತರ: 4.80 ಮೀ.), ಹೈಜಂಪ್‌ನಲ್ಲಿ ಚೇತನ್ (ವೈಎಸ್‌ಸಿ, ಎತ್ತರ: 2.12 ಮೀ.), ಮಹಿಳೆಯರ ವಿಭಾಗದ ಪೋಲ್‌ವಾಲ್ಟ್‌ನಲ್ಲಿ ಖ್ಯಾತಿ ವಿ. (ಎಸ್‌ಎಐ- ಬೆಂಗಳೂರು; ಎತ್ತರ: 3.40 ಮೀ.), ಬಾಲಕರ 20 ವರ್ಷದೊಳಗಿನವರ ವಿಭಾಗದ ಡೆಕಾಥ್ಲಾನ್‌ನಲ್ಲಿ ಅಭಿಷೇಕ್ ಎನ್. ಶೆಟ್ಟಿ (ಆಳ್ವಾಸ್; ಪಾಯಿಂಟ್: 6153), ಬಾಲಕಿಯರ 18ವರ್ಷದೊಳಗಿನವರ ವಿಭಾಗದ 5000 ಮೀ. ನಡಿಗೆಯಲ್ಲಿ ಪ್ರತೀಕ್ಷಾ (ಡಿವೈಎಸ್‌ಎಸ್- ಬೆಂಗಳೂರು; ಕಾಲ: 28:39.1 ಸೆ.), 20 ವರ್ಷದೊಳಗಿನವರ ವಿಭಾಗದ 400 ಮೀ. ಹರ್ಡಲ್ಸ್‌ನಲ್ಲಿ ಎಂ. ಅರ್ಪಿತಾ (ಡಿವೈಎಸ್‌ಎಸ್ ಬೆಂಗಳೂರು; ಕಾಲ: 1:01.3 ಸೆ.), ಬಾಲಕರ 14 ವರ್ಷದೊಳಗಿನವರ ವಿಭಾಗದ 600 ಮೀ. ಓಟದಲ್ಲಿ ಆರ್.ಟಿ. ಹನುಮಂತ (ಡಿವೈಎಸ್‌ಎಸ್- ವಿದ್ಯಾನಗರ; ಕಾಲ: 1:28.2 ಸೆ) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.ಅಂತಿಮ ದಿನ ಚಿನ್ನ ಗೆದ್ದವರು:


ಪುರುಷರ ವಿಭಾಗ: 400 ಮೀ. ಓಟ: ವಿ. ಸಜಿನ್ (ಐಎಎಫ್; ಕಾಲ: 47.6 ಸೆ.), 400 ಮೀ. ಹರ್ಡಲ್ಸ್: ಚಂದ್ರಶೇಖರ್ (ದಕ್ಷಿಣ ಕನ್ನಡ; ಕಾಲ: 53.3 ಸೆ.), 1500 ಮೀ. ಓಟ: ಸ್ಟೀಫನ್ ರಾಜ್ (ಐಎಎ; ಕಾಲ: 4:06.1 ಸೆ.), 10,000 ಮೀ. ಓಟ: ಅಂಬು ಕುಮಾರ್ (ಇಂಡಿಯನ್ ಅಥ್ಲೆಟಿಕ್ ಕ್ಲಬ್; ಕಾಲ: 32:22.5 ಸೆ.), ಶಾಟ್‌ಪಟ್: ಎಂ.ಆರ್. ನಂದೀಶ್ (ಇಪಿಐಸಿ ಕ್ಲಬ್- ಮೈಸೂರು, ದೂರ: 14.72 ಮೀ.), ಡೆಕಾಥ್ಲಾನ್: ಜಿಜೊ (ರೈಲ್ವೇಸ್; ಪಾಯಿಂಟ್: 5170), ಹೈಜಂಪ್: ಚೇತನ್ (ವೈಎಸ್‌ಸಿ, ಎತ್ತರ: 2.12 ಮೀ., ಕೂಟ ದಾಖಲೆ), ಪೋಲ್‌ವಾಲ್ಟ್: ಪಿ. ಬಾಲಕೃಷ್ಣ (ಎಸ್‌ಡಬ್ಲ್ಯುಆರ್; ಎತ್ತರ: 4.80 ಮೀ., ಕೂಟದಾಖಲೆ), ಜಾವೆಲಿನ್ ಥ್ರೋ: ಆರ್. ಶರತ್‌ರಾಜ್ (ದೂರ: 63.55 ಮೀ.)ಮಹಿಳೆಯರ ವಿಭಾಗ: 200 ಮೀ ಓಟ: ಎಂ.ಜಿ. ಪದ್ಮಿನಿ (ಫ್ಯೂಷನ್; ಕಾಲ: 25.66 ಸೆ,), 400 ಮೀ. ಹರ್ಡಲ್ಸ್: ಶ್ಯಾಮಿಲಿ (ಎಸ್‌ಡಿಎಂ ಉಜಿರೆ; ಕಾಲ: 1:12.6 ಸೆ.), 1500 ಮೀ. ಓಟ: ಸಿ. ಸ್ಮಿತಾ (ಆಳ್ವಾಸ್; ಕಾಲ: 4:58.7 ಸೆ.), 10,000 ಮೀ ಓಟ: ತಿಪ್ಪವ್ವ ಸಣ್ಣಕ್ಕಿ (ರೈಲ್ವೇಸ್; ಕಾಲ: 38:18.1 ಸೆ.), ಹ್ಯಾಮರ್ ಥ್ರೋ: ವಿಭಾ ಬಿ. ಶಂಕರ್ (ಆಳ್ವಾಸ್; ದೂರ: 37.55 ಸೆ.), ಟ್ರಿಪಲ್ ಜಂಪ್: ಜಾಯ್ಲಿನ್ ಎಂ ಲೋಬೊ (ಎಲ್‌ಐಸಿ; ದೂರ: 12.54 ಮೀ.), ಪೋಲ್‌ವಾಲ್ಟ್: ಖ್ಯಾತಿ ವಿ. (ಎಸ್‌ಎಐ- ಬೆಂಗಳೂರು; ಎತ್ತರ: 3.40 ಮೀ., ಕೂಟ ದಾಖಲೆ),ಬಾಲಕರ ವಿಭಾಗ: 20 ವರ್ಷ: 400 ಮೀ. ಓಟ: ಎಂ.ಆರ್. ಮಧುಸೂಧನ್ (ಐಎಎ; ಕಾಲ: 49.2 ಸೆ.), 400 ಮೀ. ಹರ್ಡಲ್ಸ್: ಕೆ.ಬಿ. ಚರಣ್ (ಆಳ್ವಾಸ್; ಕಾಲ: 57.3 ಸೆ.), 1500 ಮೀ. ಓಟ: ಭರತ್‌ರಾಮ್ (ಡಿವೈಎಸ್‌ಎಸ್- ಬೆಂಗಳೂರು; ಕಾಲ: 4:15.4 ಸೆ.),  10,000 ಮೀ. ಓಟ: ಶ್ರೀಓಂ ಪಟೇಲ್ (ಯುವ; ಕಾಲ: 32:29.3 ಸೆ.), ಡೆಕಾಥ್ಲಾನ್: ಅಭಿಷೇಕ್ ಎನ್. ಶೆಟ್ಟಿ (ಆಳ್ವಾಸ್; ಪಾಯಿಂಟ್: 6153, ಕೂಟದಾಖಲೆ), ಶಾಟ್‌ಪಟ್: ಬಿ.ಸಿ. ನಂದೇಶ್ ಕುಮಾರ್ (ಮೈಸೂರು; ದೂರ: 14.24 ಸೆ.), ಹೈಜಂಪ್: ಬಿ.ಎಸ್. ರಮೇಶ್ (ಆಳ್ವಾಸ್, ಎತ್ತರ: 1.85 ಮೀ.), ಪೋಲ್‌ವಾಲ್ಟ್: ನಿತ್ಯಾನಂದ (ಉಡುಪಿ; ಎತ್ತರ: 3.40 ಮೀ.),

18 ವರ್ಷ: 400 ಮೀ. ಓಟ: ಎ.ಕೆ. ರಘು (ಡಿವೈಎಸ್‌ಎಸ್- ಬೆಂಗಳೂರು; ಕಾಲ: 51.5 ಸೆ.), 400 ಮೀ. ಹರ್ಡಲ್ಸ್: ಎ.ಕೆ. ರಘು (ಡಿವೈಎಸ್‌ಎಸ್- ಬೆಂಗಳೂರು; ಕಾಲ: 57.1 ಸೆ.), ಅಕ್ಟಾಥ್ಲಾನ್: ಎನ್.ಮಂಜುನಾಥ್ (ಕೊಡಗು; 4280 ಪಾಯಿಂಟ್ಸ್), ಜಾವೆಲಿನ್ ಥ್ರೋ: ಕಾರ್ತಿಕ್ (ಉಡುಪಿ; ದೂರ: 53.23 ಸೆ.), ಪೋಲ್‌ವಾಲ್ಟ್: ಶರತ್ ಪೂಜಾರಿ (ಉಡುಪಿ; ಎತ್ತರ: 2.50 ಮೀ.),

16 ವರ್ಷ: 400 ಮೀ. ಓಟ: ಬಿ. ಕಾನ್ರಾಯ್ ಪೌಲ್ (ದಕ್ಷಿಣ ಕನ್ನಡ; ಕಾಲ: 53.9 ಸೆ.), 5000 ಮೀ. ನಡಿಗೆ: ಬಿ.ಡಿ. ಹೇಮಂತ್ (ಕೊಡಗು; ಕಾಲ: 28:04.7 ಸೆ.), ಲಾಂಗ್‌ಜಂಪ್: ಅದೃಶಪ್ಪ (ಆಳ್ವಾಸ್; ದೂರ: 6.29 ಮೀ.),14 ವರ್ಷ: 600 ಮೀ. ಓಟ: ಆರ್.ಟಿ. ಹನುಮಂತ (ಡಿವೈಎಸ್‌ಎಸ್- ವಿದ್ಯಾನಗರ; ಕಾಲ: 1:28.2 ಸೆ. ಕೂಟ ದಾಖಲೆ)ಬಾಲಕಿಯರ ವಿಭಾಗ: 20 ವರ್ಷ: 200 ಮೀ. ಓಟ: ರೀನಾ ಜಾರ್ಜ್ (ಡಿವೈಎಸ್‌ಎಸ್- ಮೈಸೂರು; ಕಾಲ: 24:51 ಸೆ.), 400 ಮೀ. ಹರ್ಡಲ್ಸ್: ಎಂ. ಅರ್ಪಿತಾ (ಡಿವೈಎಸ್‌ಎಸ್ ಬೆಂಗಳೂರು; ಕಾಲ: 1:01.3 ಸೆ.. ಕೂಟ ದಾಖಲೆ), ಹೆಪ್ಟಾಥ್ಲಾನ್: ಪ್ರಜ್ಞಾ ಎಸ್. ಪ್ರಕಾಶ್ (ಇಂಡೋ ಜರ್ಮನ್; ಪಾಯಿಂಟ್: 3798), 3000 ಮೀ. ಓಟ: ಶ್ರದ್ಧಾರಾಣಿ ಎಸ್. (ಡಿವೈಎಸ್‌ಎಸ್ ಮೈಸೂರು; ಕಾಲ: 10:35.1 ಸೆ.), ಹ್ಯಾಮರ್ ಥ್ರೋ: ಎಸ್.ಜಿ. ಪುಷ್ಪಾ (ಡಿವೈಎಸ್‌ಎಸ್, ದೂರ: 34.03 ಸೆ.), ಪೋಲ್‌ವಾಲ್ಟ್: ಸೌಮ್ಯಶ್ರೀ (ಆಳ್ವಾಸ್; ಎತ್ತರ: 2.30 ಮೀ.), ಟ್ರಿಪ್‌ಲ್ ಜಂಪ್: ಚಾಂದಿನಿ (ಆಳ್ವಾಸ್; ದೂರ: 11.9 ಮೀ.), 18 ವರ್ಷ: 200 ಮೀ. ಓಟ: ಎಸ್.ಎಸ್. ನಿಶ್ಚಿತಾ (ಡಿವೈಎಸ್‌ಎಸ್- ಬೆಂಗಳೂರು; ಕಾಲ: 26.7ಸೆ.), 400 ಮೀ. ಓಟ: ಕೆ. ಅರ್ಚನಾ (ಎಸ್‌ಎಐ- ಮಡಿಕೇರಿ; 1:00.2 ಸೆ.), 400 ಮೀ. ಹರ್ಡಲ್ಸ್: ವೈಶಾಲಿ ಸೋಮಯ್ಯ (ಇಂಡೋ ಜರ್ಮನ್; ಕಾಲ: 1:12.0 ಸೆ.), 5000 ಮೀ. ನಡಿಗೆ: ಪ್ರತೀಕ್ಷಾ (ಡಿವೈಎಸ್‌ಎಸ್- ಬೆಂಗಳೂರು; ಕಾಲ: 28:39.1 ಸೆ., ಕೂಟ ದಾಖಲೆ), ಹ್ಯಾಮರ್ ಥ್ರೋ: ಪುಣ್ಯಶ್ರೀ (ಆಳ್ವಾಸ್; ದೂರ:37.70 ಮೀ.), ಟ್ರಿಪಲ್ ಜಂಪ್: ಪ್ರಣೀತಾ (ಇಂಡೋ ಜರ್ಮನ್; ದೂರ: 11.99 ಸೆ.), ಶಾಟ್‌ಪಟ್: ರಂಜನಾ ಬದ್ರಿ (ಎಸ್‌ಎಐ- ಧಾರವಾಡ; ದೂರ: 12.08 ಮೀ.), ಪೋಲ್‌ವಾಲ್ಟ್: ಪ್ರೀತಿ (ಆಳ್ವಾಸ್; ಎತ್ತರ: 2.60 ಮೀ.)16 ವರ್ಷ: 400 ಮೀ. ಓಟ: ಆರ್. ವರ್ಷಾ (ದಕ್ಷಿಣ ಕನ್ನಡ; ಕಾಲ: 1:01.4 ಸೆ.), 3000 ಮೀ. ನಡಿಗೆ: ವಿಲ್ಮಾ ಡಿ~ಸೋಜಾ (ಎಸ್‌ಡಿಎಂ ಉಜಿರೆ; ಕಾಲ: 17:31.3 ಮೀ.), ಲಾಂಗ್‌ಜಂಪ್: ಐಶ್ವರ್ಯಾ ಎಚ್. (ಎಸ್‌ಎಐ- ಧಾರವಾಡ; ಕಾಲ: ದೂರ: 5.22 ಮೀ.), ಹೈಜಂಪ್: ದೀಕ್ಷಾ (ದಕ್ಷಿಣ ಕನ್ನಡ; ಎತ್ತರ: 1.48 ಮೀ.),  ಶಾಟ್‌ಪಟ್: ಜಿ.ಕೆ. ನಮಿತಾ (ಆಳ್ವಾಸ್; ದೂರ: 12.82 ಮೀ.), ಪೆಂಟಾಥ್ಲಾನ್: ಟಿ. ನಿವೇದಿತಾ (ವೈಎಸ್‌ಸಿ; ಪಾಯಿಂಟ್: 2465),14 ವರ್ಷ: 600 ಮೀ. ಓಟ: ಸೆರಾ ಡಿ~ಸೋಜಾ (ದಕ್ಷಿಣ ಕನ್ನಡ; ಕಾಲ: 1:46.6 ಸೆ.), ಹೈಜಂಪ್: ದೀಪ್ತಿ (ಆಳ್ವಾಸ್; ಎತ್ತರ: 1.30 ಮೀ.)ತಂಡ ಪ್ರಶಸ್ತಿ:

ಆಳ್ವಾಸ್ ಮೂಡುಬಿದಿರೆ (ಬಾಲಕರ 16 ವರ್ಷ, ಬಾಲಕರ ಮತ್ತು ಬಾಲಕಿಯರ 18 ವರ್ಷ, ಬಾಲಕರ ಮತ್ತು ಬಾಲಕಿಯರ 20 ವರ್ಷ, ಮಹಿಳೆಯರ ವಿಭಾಗ), ಡಿವೈಎಸ್‌ಎಸ್ ವಿದ್ಯಾನಗರ (ಬಾಲಕರ 14 ವರ್ಷ), ಇಂಡೋ ಜರ್ಮನ್ (ಬಾಲಕಿಯರ 14 ವರ್ಷ), ಡಿಕೆಕೆಎಎ (ಬಾಲಕಿಯರ 16 ವರ್ಷ), ಇಂಡಿಯನ್ ಅಥ್ಲೆಟಿಕ್ ಅಕಾಡೆಮಿ (ಪುರುಷರ ವಿಭಾಗ)ಶ್ರೇಷ್ಠ ಅಥ್ಲೀಟ್‌ಗಳು:


ಮೊಹಮ್ಮದ್ ಅರ್ಶದ್ (ಪುರುಷರ ವಿಭಾಗ, ಐಎಎಫ್), ಶಂಶೀರ್ (ಬಾಲಕರ 20 ವರ್ಷ, ಆಳ್ವಾಸ್), ಫಕೀರಪ್ಪ ಬಂಗಿ (ಬಾಲಕರ 18 ವರ್ಷ, ಧಾರವಾಡ), ತಯ್ಯೆಬ್ ಹುಸೇನ್ (ಬಾಲಕರ 16 ವರ್ಷ, ಎಬೆನೈಜೆರ್ ಸ್ಕೂಲ್), ಹನುಮಂತ (ಡಿವೈಎಸ್‌ಎಸ್ ವಿದ್ಯಾನಗರ, ಬಾಲಕರ 14 ವರ್ಷ), ಎಂ.ಜಿ. ಪದ್ಮಿನಿ (ಮಹಿಳೆಯರ ವಿಭಾಗ, ಫ್ಯೂಷನ್ ಅಥ್ಲೆಟಿಕ್ ಕ್ಲಬ್), ರೀನಾ ಜಾರ್ಜ್ (ಬಾಲಕಿಯರ 20 ವರ್ಷ, ಡಿವೈಎಸ್‌ಎಸ್ ಮೈಸೂರು), ಮೇಘನಾ ಶೆಟ್ಟಿ (ಬಾಲಕಿಯರ 18 ವರ್ಷ, ಇಂಡೋ ಜರ್ಮನ್), ದೇಸ್ನಾ ವಿನಯ್ (ಬಾಲಕಿಯರ 16 ವರ್ಷ, ಇಂಡೋ ಜರ್ಮನ್), ಗಾರ್ಗಿ ಶಿವರಾಂ (ಬಾಲಕಿಯರ 14 ವರ್ಷ, ಫ್ಯೂಷನ್ ಅಥ್ಲೆಟಿಕ್ ಕ್ಲಬ್)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.