ಮಂಗಳೂರು: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 22 ರಸ್ತೆ ಹಾಗೂ 5 ಉದ್ಯಾನವನಗಳ ನಿರ್ವಹಣೆಯನ್ನು ಖಾಸಗಿಗೊಪ್ಪಿಸುವ ಸಲುವಾಗಿ ಪಾಲಿಕೆ ವಿನೂತನ ಯೋಜನೆ ಆರಂಭಿಸಿದೆ.

ಮೇಯರ್ ಪ್ರವೀಣ್ ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ಅಭಿವೃದ್ಧಿ ಹೊಂದಿರುವ ರಸ್ತೆ ಹಾಗೂ ಉದ್ಯಾನವನಗಳ ನಿರ್ವಹಣೆಯನ್ನು ಖಾಸಗಿ ಸಂಘ-ಸಂಸ್ಥೆ, ಬ್ಯಾಂಕ್ ಹಾಗೂ ಉದ್ದಿಮೆಗಳಿಗೆ ವಹಿಸುವುದರಿಂದ ಪಾಲಿಕೆಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗಲಿದೆ. ಪಾಲಿಕೆಯ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗದ ರೀತಿ ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.

‘ರಸ್ತೆ ನಿರ್ವಹಣೆ ವಹಿಸಿಕೊಳ್ಳುವ ಸಂಸ್ಥೆಗೆ ರಸ್ತೆ ಪಕ್ಕ ಪ್ರತಿ 250 ಮೀ. ದೂರದಲ್ಲಿ ಒಂದು ಜಾಹೀರಾತು ಫಲಕ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಒಪ್ಪಂದ ಮೂರು ವರ್ಷವಿದ್ದು, ಈ ಅವಧಿಯಲ್ಲಿ ರಸ್ತೆ ಅಗೆತ, ಸ್ವಚ್ಛತೆ ಕಾಪಾಡುವುದು, ಇಕ್ಕೆಲಗಳಲ್ಲಿ ಗಿಡ ಬೆಳೆಸುವುದು ಮತ್ತಿತರರ ಜವಾಬ್ದಾರಿ ಖಾಸಗಿ ಸಂಸ್ಥೆಯದ್ದೇ ಆಗಿರುತ್ತದೆ. ಆದರೆ ಪಾಲಿಕೆ ಜತೆ ಮಾಡಿಕೊಂಡ ಒಪ್ಪಂದ ಉಲ್ಲಂಘಿಸಿ ಜಾಹೀರಾತು ಫಲಕ ಅಳವಡಿಸುವಂತಿಲ್ಲ’ ಎಂದು ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.

‘ಪುರಭವನದಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ 0.87 ಕಿ.ಮೀ. ರಸ್ತೆ ನಿರ್ವಹಣೆಗೆ ಪಾಲಿಕೆ ವರ್ಷಕ್ಕೆ 23.26 ಲಕ್ಷ ವೆಚ್ಚ ತಗುಲುತ್ತದೆ. ಇದೇ ರೀತಿ ಎಲ್ಲ 22 ರಸ್ತೆಗಳ ನಿರ್ವಹಣೆಗೆ ವಾರ್ಷಿಕ ರೂ. 5.5 ಕೋಟಿ ವೆಚ್ಚವಾಗುತ್ತದೆ. ಖಾಸಗಿ ಮಡಿಲಿಗೆ ನಿರ್ವಹಣೆ ಜವಾಬ್ದಾರಿ ಒಪ್ಪಿಸುವುದರಿಂದ, ಸಿಬ್ಬಂದಿ ಸಮಸ್ಯೆ ಎದುರಿಸುತ್ತಿರುವ ಪಾಲಿಕೆ ಮೇಲಿನ ಕೆಲಸದ ಒತ್ತಡವೂ ಕಡಿಮೆ ಆಗಲಿದೆ. ಖಾಸಗಿ ಸಂಸ್ಥೆಗಳಿಗೆ ಇದರಿಂದ ಸಾಮುದಾಯಿಕ ಜವಾಬ್ದಾರಿ ನಿಭಾಯಿಸುವ ಅವಕಾಶ ಲಭಿಸುತ್ತದೆ. ಜತೆಗೆ ಸಂಸ್ಥೆಯ ಸೇವೆಯ ಬಗ್ಗೆ ಜನಾಭಿಪ್ರಾಯ ಮೂಡಿಸಲು ಅವಕಾಶ ಲಭಿಸುತ್ತದೆ’ ಎಂದರು.

‘ಒಂದು ಎಕರೆ ವಿಸ್ತೀರ್ಣದ ಉದ್ಯಾನವನ ನಿರ್ವಹಣೆಗೆ ವಾಷಿರ್ಕ ರೂ. 2.91 ಲಕ್ಷ ವೆಚ್ಚವಾಗುತ್ತದೆ. ಮಣ್ಣಗುಡ್ಡೆಯ ಮಹಾತ್ಮ ಗಾಂಧಿ ಉದ್ಯಾನವನ, ಹ್ಯಾಮಿಲ್ಟನ್ ವೃತ್ತದ ಮಕ್ಕಳ ಉದ್ಯಾನವನ, ಮಲ್ಲಿಕಟ್ಟೆ ಜಂಕ್ಷನ್ನ ಉದ್ಯಾನವನ, ಜೆಪ್ಪು ಮಾರುಕಟ್ಟೆಯ ಭಾರತ್ ಮೈದಾನ್ ಉದ್ಯಾನವನ ಹಾಗೂ ಅತ್ತಾವರ ಮೇಲಿನಮೊಗ್ರುವಿನ ಎಸ್.ಎಲ್.ಮಥಾಯಸ್ ಉದ್ಯಾನವನ ನಿರ್ವಹಣೆ ಖಾಸಗಿ ಸಂಶ್ಥೆಗೆ ವಹಿಸಲು ನಿರ್ಧರಿಸಲಾಗಿದೆ’ ಎಂದರು.

‘ಈ ಬಗ್ಗೆ ವಿಸ್ತೃತ ಕರಡು ಸಿದ್ಧ ಪಡಿಸಲಾಗಿದೆ. ರಸ್ತೆ ಹಾಗೂ ಉದ್ಯಾನವನದ ನಿರ್ವಹಣೆಯ ಉಸ್ತುವಾರಿ ವಹಿಸಿಕೊಳ್ಳಲು ಆಸಕ್ತರು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿಯನ್ನು (ದೂ: 0824-2220215) ಸಂಪರ್ಕಿಸಬಹುದು. ಪಾಲಿಕೆ ವೆಬ್ಸೈಟ್ www.mangalorecity.gov.in ನಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿ ಇದೆ’ ಎಂದರು.
ಉಪ ಮೇಯರ್ ಗೀತಾ ನಾಯಕ್, ವಿರೋಧ ಪಕ್ಷದ ನಾಯಕ ಲ್ಯಾನ್ಸಿ ಲಾಟ್ ಪಿಂಟೊ ಇದ್ದರು.

‘ಶೇ 93.6 ಗುರಿ ಸಾಧನೆ’
‘ಪ್ರಸಕ್ತ ಸಾಲಿನಲ್ಲಿ ರೂ 27.58 ಕೋಟಿ ಸ್ವಯಂಘೋಷಿತ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಫೆಬ್ರುವರಿ ಅಂತ್ಯಕ್ಕೆ ರೂ 25.82 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಶೇ 93.63 ಗುರಿ ಸಾಧನೆ ಆಗಿದೆ’ ಎಂದು ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.

‘2008-09ರಲ್ಲಿ ರೂ 16 ಕೋಟಿ ಹಾಗೂ 2009- 10 ರಲ್ಲಿ ರೂ 24 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚಳವಾಗುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಪರಿಷ್ಕರಿಸಬೇಕೆಂಬ ನಿರ್ದೇಶನವಿದೆ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.