ಶನಿವಾರ, ಮಾರ್ಚ್ 6, 2021
32 °C

ಪಿಂಚಣಿಗೆ ಆಗ್ರಹಿಸಿ ಫಲಾನುಭವಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಂಚಣಿಗೆ ಆಗ್ರಹಿಸಿ ಫಲಾನುಭವಿಗಳ ಪ್ರತಿಭಟನೆ

ಮೊಳಕಾಲ್ಮುರು: ಸ್ಥಗಿತವಾಗಿರುವ ಸಾಮಾಜಿಕ ಪಿಂಚಣಿ ಯೋಜನೆ ಹಣ ವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕಿನ ಮರ್ಲಹಳ್ಳಿ ಗ್ರಾಮದ ಸಾಮಾಜಿಕ ಪಿಂಚಣಿ ಯೋಜನೆ ಫಲಾನುಭವಿಗಳು ಸ್ಥಳೀಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.



‘4–5 ತಿಂಗಳಿಂದ ಪಿಂಚಣಿ ಸ್ಥಗಿತ ಮಾಡಿರುವ ಪರಿಣಾಮ ಯೋಜನೆ ಫಲಾನುವಿಗಳಾದ ವೃದ್ಧರು, ಅಂಗವಿಕಲ ರಿಗೆ ತೀವ್ರ ತೊಂದರೆ ಯಾಗಿದೆ. ಪಿಂಚಣಿ ಹಣದಲ್ಲಿ ಔಷಧಿ ಕೊಂಡುಕೊಳ್ಳುತ್ತಿ ದ್ದೆವು ಹಾಗೂ ತುರ್ತು ಕಾರ್ಯಗಳಿಗೆ ಬಳಸುತ್ತಿದ್ದೆವು. ಪಿಂಚಣಿ ಸ್ಥಗಿತ ಪರಿಣಾಮ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ’ ಎಂದು ದೂರಿದರು.



ಖಜಾನೆ ಅಧಿಕಾರಿ ಚೌಡಪ್ಪ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಪಿಂಚಣಿ ನೀಡುವಲ್ಲಿ ವಿಳಂಬವಾಗಿದೆ. ಸಮಸ್ಯೆ ಸರಿಪಡಿಸಿ 15 ದಿನಗಳಲ್ಲಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಪಿಐ ಕಾರ್ಯದರ್ಶಿ ಪಟೇಲ್‌ ಪಾಪನಾಯಕ, ಗ್ರಾಮ ಪಂಚಾಯ್ತಿ ಸದಸ್ಯ ದಾನಸೂರನಾಯಕ, ಜಯಣ್ಣ, ನಾಗರಾಜ್‌, ಸಣ್ಣ ಬೋರಮ್ಮ, ಲಕ್ಷ್ಮಮ್ಮ, ಗುಂಡಮ್ಮ, ಪಾಪಮ್ಮ, ತಿಪ್ಪಮ್ಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.