ಸೋಮವಾರ, ಮೇ 23, 2022
24 °C

ಪಿಕಾರ್ಡ್ ಬ್ಯಾಂಕ್: ಬಾಕಿ ಹಣ 31ರೊಳಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಗಳು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಡ್ಡಿ ರಿಯಾಯಿತಿ ಸಂಬಂಧ ನೀಡಬೇಕಾಗಿರುವ ಬಾಕಿ ಮೊತ್ತ ರೂ 142.70 ಕೋಟಿ ಹಣವನ್ನು ಇದೇ ತಿಂಗಳ 31ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.



ವಿಧಾನಪರಿಷತ್ತಿನಲ್ಲಿ ಮಂಗಳ  ವಾರ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಸವದಿ ಉತ್ತರಿಸಿದರು.



2007-08ರ ವರೆಗಿನ ಎಲ್ಲ ಮೊತ್ತಗಳನ್ನು ಪೂರ್ಣವಾಗಿ ಬಿಡುಗಡೆ ಮಾಡಲಾಗಿದೆ. 2008-09ನೇ ಸಾಲಿನ ಒಟ್ಟು ಬೇಡಿಕೆಗಳ ಪೈಕಿ ರೂ 14.33 ಕೋಟಿ ಹಾಗೂ 2009-10ನೇ ಸಾಲಿನ ಮೊತ್ತ ರೂ 128.38 ಕೋಟಿ ಹೀಗೆ ಒಟ್ಟಾರೆಯಾಗಿ ರೂ 142.70 ಕೋಟಿ ಬಿಡುಗಡೆಗೆ ಬಾಕಿ ಇದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.