ರಾಜ್ಯದಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 1353 ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ’ (ಪಿಡಿಒ) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಗೆ ಕರ್ನಾಟಕ ಲೋಕಸೇವಾ ಆಯೋಗ ಚಾಲನೆ ನೀಡಿದ್ದು, ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಬರುವ ಜುಲೈನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಎರಡು ವರ್ಷದ ಹಿಂದೆ ಹೊಸದಾಗಿ ಸೃಷ್ಟಿಯಾಗಿರುವ 5628 ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ’ ಹುದ್ದೆಗಳ ಪೈಕಿ 2009ರಲ್ಲಿ 2500 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದ್ದು, ಈಗ 1353 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇನ್ನುಳಿದ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲಾಗಿದೆ.

ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮೇಲ್ವಿಚಾರಣೆಯಲ್ಲಿ ಹೊರ ಗುತ್ತಿಗೆ ಮೂಲಕ ನೇರ ನೇಮಕಾತಿ ನಡೆದಿತ್ತು. ಆದರೆ ಈ ಬಾರಿ ನೇಮಕಾತಿ ಜವಾಬ್ದಾರಿಯನ್ನು ಕೆಪಿಎಸ್ಸಿ ಗೆ ವಹಿಸಲಾಗಿದೆ. ಹಿಂದೆ ಇಲಾಖೆ ರೂಪಿಸಿದ್ದ ನೇಮಕಾತಿ ನಿಯಮಾವಳಿಗಳ ಪ್ರಕಾರವೇ ಆಯೋಗವು ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ.

ಜಿಲ್ಲಾವಾರು ಖಾಲಿ ಇರುವ ಹುದ್ದೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ಜಿಲ್ಲಾ ಮಟ್ಟದಲ್ಲಿಯೇ ನೇಮಕಾತಿ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮಗೆ ಬೇಕಾದ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಆಯ್ಕೆಯಾದ ನಂತರ ನೇಮಕಗೊಂಡ ಜಿಲ್ಲೆಯಲ್ಲಿಯೇ ಸೇವಾವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವುದಿಲ್ಲ. ಜಿಲ್ಲೆಯನ್ನು ಕೇಡರ್ ಆಗಿ ಪರಿಗಣಿಸಿ, ಜಿಲ್ಲೆಯ ಒಳಗೆ ವರ್ಗಾವಣೆ ಮಾಡಲಾಗುತ್ತದೆ. ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಇದನ್ನು ಸ್ಪಷ್ಟ ಪಡಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ: ಒಟ್ಟು 150 ಅಂಕಗಳನ್ನು ಒಳಗೊಂಡ ಒಂದು ಪ್ರಶ್ನೆಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಒಳಗೊಂಡಿದ್ದು, ಇದರಲ್ಲಿ ಎರಡು ಭಾಗಗಳು ಇರುತ್ತವೆ. ಭಾಗ -1 ಅರ್ಹತಾ ಪರೀಕ್ಷೆಯಾಗಿದ್ದು, 30 ಅಂಕಗಳ ಕಂಪ್ಯೂಟರ್ ಸಾಕ್ಷರತೆ ವಿಷಯವನ್ನು ಇದು ಒಳಗೊಂಡಿರುತ್ತದೆ. ಭಾಗ -2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಎಂಬ ನಾಲ್ಕು ಉಪ ವಿಭಾಗಗಳು ಇರುತ್ತವೆ. ಪ್ರತಿಯೊಂದು ವಿಭಾಗಕ್ಕೆ ತಲಾ 30 ಅಂಕಗಳನ್ನು ನಿಗದಿಪಡಿಸಲಾಗಿದೆ. ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಕಂಪ್ಯೂಟರ್ ಸಾಕ್ಷರತೆ ವಿಷಯದಲ್ಲಿ ಶೇ.35ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕು. ಒಂದು ವೇಳೆ ಈ ವಿಷಯದಲ್ಲಿ ಅನುತ್ತೀರ್ಣರಾದರೆ, ಉಳಿದ ವಿಷಯಗಳಲ್ಲಿ ಎಷ್ಟೇ ಅಂಕಗಳನ್ನು ಪಡೆದರೂ ಪರಿಗಣಿಸುವುದಿಲ್ಲ. ಆದರೆ ಕಂಪ್ಯೂಟರ್ ಸಾಕ್ಷರತೆ ವಿಷಯದಲ್ಲಿ ಗಳಿಸುವ ಅಂಕಗಳು ಅರ್ಹತೆಯ ಮಾನದಂಡವಾಗಿದ್ದು, ಅಂತಿಮ ಆಯ್ಕೆಗೆ ಪರಿಗಣಿಸುವುದಿಲ್ಲ. ಭಾಗ-2ರಲ್ಲಿನ ನಾಲ್ಕು ವಿಭಾಗಗಳ 120 ಅಂಕಗಳಿಗೆ ಗಳಿಸುವ ಒಟ್ಟಾರೆ ಅಂಕಗಳ ಆಧಾರದ ಮೇಲೆ ನೇಮಕಾತಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಕೇವಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆನ್ಲೈನ್ ಮೂಲಕ ಅರ್ಜಿ: ಆಯೋಗವು ಆನ್ಲೈನ್ ಮೂಲಕ ಪಿಡಿಒ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಏಪ್ರಿಲ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಶುಲ್ಕ ಪಾವತಿಗೆ ಏಪ್ರಿಲ್ 20 ಹಾಗೂ ಶುಲ್ಕ ಪಾವತಿ ನಂತರ ಬ್ಯಾಂಕ್ ಚಲನ್ ಸಂಖ್ಯೆ ನಮೂದಿಸಲು ಏ.21ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸುವಾಗಲೇ ನೇಮಕಾತಿ ಹೊಂದಲು ಬಯಸುವ ಜಿಲ್ಲೆ ಮತ್ತು ಪರೀಕ್ಷೆ ತೆಗೆದುಕೊಳ್ಳುವ ಜಿಲ್ಲೆಯನ್ನು ಸಂಬಂಧಪಟ್ಟ ಕಾಲಂನಲ್ಲಿ ನಮೂದಿಸಬೇಕು.

ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಮೊದಲು ಗ್ರಾಮೀಣ ಮೀಸಲಾತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲಾತಿಗಳನ್ನು ಪಡೆದಿರಬೇಕು. ಆದರೆ ಅವುಗಳನ್ನು ಈಗ ಸಲ್ಲಿಸಲುವ ಅಗತ್ಯವಿಲ್ಲ. ಆಯ್ಕೆಯಾದ ನಂತರ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಅವುಗಳನ್ನು ನೀಡಬೇಕಾಗುತ್ತದೆ. ಕೊನೆಯ ದಿನಾಂಕದ ನಂತರ ಪಡೆದಿರುವ ಪ್ರಮಾಣ ಪತ್ರಗಳನ್ನು ಮಾನ್ಯ ಮಾಡುವುದಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿರುತ್ತದೆ. ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯದ ಪಠ್ಯಕ್ರಮ ಅಭ್ಯರ್ಥಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಇರುವ ಹಿಡಿತವನ್ನು ಅಳೆಯುವಂತಹದ್ದಾಗಿದೆ. ಇವೆರಡರಲ್ಲೂ ವ್ಯಾಕರಣಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿ, ಪಂಚಾಯತ್ರಾಜ್ ಇತಿಹಾಸ, ವಸತಿ ಯೋಜನೆಗಳು, ಗ್ರಾಮ ಪಂಚಾಯತ್ಗಳ ರಚನೆ, ಕರ್ತವ್ಯಗಳು, ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ, ಉದ್ಯೋಗ ಖಾತರಿ ಯೋಜನೆ, ಸಂಪೂರ್ಣ ಸ್ವಚ್ಚತಾ ಆಂದೋಲನ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಷಯವು ಒಳಗೊಂಡಿರುತ್ತದೆ.

ಭಾರತದ ಸಂವಿಧಾನ, ಇತಿಹಾಸ, ಸಂಸ್ಕೃತಿ, ವಿಜ್ಞಾನ, ಭೂಗೋಳ, ಆರ್ಥಿಕ ವಿಷಯಗಳು, ಇತ್ತೀಚಿನ ವಿದ್ಯಮಾನಗಳು ಇತ್ಯಾದಿ ವಿಷಯಗಳನ್ನು ಸಾಮಾನ್ಯ ಜ್ಞಾನವು ಹೊಂದಿದ್ದು, ಎಸ್ಸೆಸ್ಸೆಲ್ಸಿ, ಪದವಿವರೆಗಿನ ಪಠ್ಯಕ್ರಮ ವ್ಯಾಸಂಗ ಮಾಡಿದರೆ ಸುಲಭವಾಗುತ್ತದೆ. ಪರೀಕ್ಷೆಗೆ ಇನ್ನೂ ಮೂರು ತಿಂಗಳಿಗೂ ಅಧಿಕ ಸಮಯವಿದ್ದು, ಪಠ್ಯಕ್ರಮಕ್ಕೆ ಅನುಗುಣವಾಗಿ ಈಗಿನಿಂದಲೇ ವ್ಯಾಸಂಗ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು.!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.