ಮಂಗಳವಾರ, ಜನವರಿ 28, 2020
24 °C

ಪಿಯುಗೆ ಆನ್‌ಲೈನ್ ಪ್ರವೇಶ: ಸಲಹೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಮುಂದಿನ ಸಾಲಿನಿಂದ ಪ್ರಥಮ ಪಿಯುಸಿಗೆ ಆನ್‌ಲೈನ್ ಪ್ರವೇಶ ಪದ್ಧತಿಯನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಪ್ರವೇಶ ಪದ್ಧತಿಯ ರೂಪುರೇಷೆಗಳನ್ನು ಸಿದ್ಧಪಡಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು, ಕಾಲೇಜುಗಳ ಆಡಳಿತ ಮಂಡಳಿಯವರು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಇದೇ 26ರ ಒಳಗೆ ತಿಳಿಸಬಹುದಾಗಿದೆ.ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ಸೀಟುಗಳನ್ನು ಹಂಚುವ ವ್ಯವಸ್ಥೆ ಮುಂದುವರಿಯಲಿದೆ. ಸರ್ಕಾರಿ ಕಾಲೇಜುಗಳಲ್ಲಿನ ಎಲ್ಲ ಸೀಟುಗಳನ್ನು ಆನ್‌ಲೈನ್ ಮೂಲಕವೇ ಹಂಚಿಕೆ ಮಾಡಲಾಗುತ್ತದೆ.ಅನುದಾನಿತ ಕಾಲೇಜುಗಳಲ್ಲಿನ ಶೇ 80, ಅನುದಾನಿತ ಖಾಸಗಿ ಅಲ್ಪಸಂಖ್ಯಾತ ಮತ್ತು ಅನುದಾನರಹಿತ ಖಾಸಗಿ ಕಾಲೇಜುಗಳು, ಪರಿಶಿಷ್ಟರ ಆಡಳಿತ ಮಂಡಳಿ ಹೊಂದಿರುವ ಅನುದಾನಿತ ಕಾಲೇಜುಗಳಲ್ಲಿ ಶೇ 50ರಷ್ಟು ಸರ್ಕಾರಿ ಕೋಟಾಗೆ ಸೇರಿದ್ದು, ಅವುಗಳನ್ನು ಆನ್‌ಲೈನ್ ಮೂಲಕ ಹಂಚಲಾಗುತ್ತದೆ. ಉಳಿದ ಸೀಟುಗಳನ್ನು ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗುತ್ತದೆ.ಪ್ರವೇಶ ಸಂದರ್ಭದಲ್ಲಿ ಸೀಟಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಹತ್ತಾರು ಕಾಲೇಜುಗಳಿಗೆ ಅಲೆದಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದ್ದು, ವಂತಿಗೆ ಹಾವಳಿ ತಪ್ಪಿಸಬಹುದಾಗಿದೆ. ಸೀಟು ಹಂಚಿಕೆ ಪಾರದರ್ಶಕವಾಗಿ ನಡೆಯಲಿದೆ ಎಂದು ಇಲಾಖೆಯ ಆಯುಕ್ತರಾದ ವಿ.ರಶ್ಮಿ ತಿಳಿಸಿದ್ದಾರೆ. ಮಾಹಿತಿ ಲಭ್ಯವಿರುವ ವೆಬ್‌ಸೈಟ್ ವಿಳಾಸ: ಡಿಡಿಡಿ.ಟ್ಠಛಿ.ಚ್ಟ.್ಞಜ್ಚಿ.ಜ್ಞಿ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ:

್ಚಟಞಞಜಿಜಿಟ್ಞಛ್ಟಿ.ಟ್ಠಛಿಃಜಞಜ್ಝಿ.್ಚಟಞ

ಪ್ರತಿಕ್ರಿಯಿಸಿ (+)