ಶನಿವಾರ, ಏಪ್ರಿಲ್ 17, 2021
31 °C

ಪುಟ್ಟರಾಜರ ಸಾಧನೆ ಅವಿಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಮಾನ್ವಿ: ಸ್ವತಃ ಅಂಧರಾಗಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದ ಅಮೋಘ ಸೇವೆಯ ಜತೆಗೆ ಅಸಂಖ್ಯಾತ ಅಂಧರ ಬಾಳಿಗೆ ಬೆಳಕು ನೀಡಿದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾಧನೆ ಜಾಗತಿಕ ಮಟ್ಟದಲ್ಲಿ ಅಪರೂಪವಾದ ಅವಿಸ್ಮರಣೀಯ ಸಾಧನೆಯಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಹೇಳಿದರು.ಗುರುವಾರ ಪಟ್ಟಣದ ಕಲ್ಮಠ ಪದವಿ ಕಾಲೇಜಿನಲ್ಲಿ ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುಟ್ಟರಾಜ ಗವಾಯಿಗಳ 98ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ‘ಪುಟ್ಟರಾಜ ಗವಾಯಿಗಳ ಬದುಕು ಮತ್ತು ಸಾಧನೆ’ ಕುರಿತು ಉಪನ್ಯಾಸ ನೀಡಿದರು.ಬಿ.ವಿ.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ವಿ.ರೆಡ್ಡಿ ಮಾತನಾಡಿ, ಪುಟ್ಟರಾಜ ಗವಾಯಿಗಳ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆ ಮೂಡಿಸುವಂತದ್ದಾಗಿದೆ ಎಂದರು.

ಪುಟ್ಟರಾಜರ ಜಯಂತಿ ಆಚರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ರಂಗಭೂಮಿ ಕಲಾವಿದ ರಾಚಯ್ಯ ಸ್ವಾಮಿ ಮದ್ಲಾಪುರ ಅವರನ್ನು ಸನ್ಮಾನಿಸಲಾಯಿತು.ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,  ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ರಮೇಶಬಾಬು ಯಾಳಗಿ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ.ರೆಡ್ಡಿ, ಕಲ್ಮಠ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಪದವಿ ಕಾಲೇಜು ಪ್ರಾಚಾರ್ಯ ರಾಮಕೃಷ್ಣ ವೇದಿಕೆಯಲ್ಲಿದ್ದರು.ಅಮರೇಶ ಸಾಲಿಮಠ ಪ್ರಾರ್ಥಿಸಿದರು. ಎಚ್.ಚೆನ್ನಬಸವರಾಜ ಪ್ರಾಸ್ತಾವಿಕ ಭಾಷಣ ಮಾಡಿದರು. ವೀರೇಶ ಬಡಿಗೇರ್ ನಿರೂಪಿಸಿದರು. ಮೂಕಪ್ಪ ಕಟ್ಟಿಮನಿ ಸ್ವಾಗತಿಸಿದರು. ಮಂಜುನಾಥ ಕಮತರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.