ಭಾನುವಾರ, ಜೂಲೈ 12, 2020
29 °C

ಪುತ್ರನಿಗೆ ಡಿ.ಟಿ.ಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಥೋಣಿಪಾಲ್  ನಿರ್ಮಿಸುತ್ತಿರುವ ‘ಪುತ್ರ’ ಚಿತ್ರಕ್ಕೆ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದೆ ಎಂದು ನಿರ್ದೇಶಕ ಉಮಾಕಾಂತ್ ತಿಳಿಸಿದ್ದಾರೆ.ಟಿ.ಸತ್ಯನಾರಾಯಣ ಸಹ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಮೇಲುಕೋಟೆ, ನಂದಿಬೆಟ್ಟ ಹಾಗೂ ಚಿಕ್ಕಮಗಳೂರಿನಲ್ಲಿ ನಡೆಯಿತು. ರಮೇಶ್ ರಾಜಾ ಸಂಗೀತ, ರವಿ ಸುವರ್ಣ ಛಾಯಾಗ್ರಹಣ, ಬಾಬುಖಾನ್ ಕಲಾ ನಿರ್ದೇಶನ,ಚಂದ್ರಮಯೂರ್ ಹಾಗೂ ರಾಜಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ಚಿತ್ರಕ್ಕಿದೆ.ತಾರಾಬಳಗದಲ್ಲಿ ದಿಗಂತ್, ಸುಪ್ರೀತಾ, ರೂಪಶ್ರಿ, ಅವಿನಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಸುಂದರರಾಜ್ ಮುಂತಾದವರಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.